Site icon Vistara News

ಬ್ಯುಸಿನೆಸ್‌ಗೆ 20 ಸಾವಿರ ಕೇಳಿದ್ದ ಮಗ; ತಾಯಿ ಹಣ ಕೊಡಲಿಲ್ಲವೆಂದು ಕೆರೆಗೆ ಹಾರಿ ಯುವಕ ಆತ್ಮಹತ್ಯೆ

A young man from Kottur suicide

ಕೊಟ್ಟೂರು: ಬ್ಯುಸಿನೆಸ್‌ ಮಾಡಲು ತಾಯಿ ಹಣ ಕೊಡಲಿಲ್ಲ ಎಂದು ಮನನೊಂದ ಯುವಕನೊಬ್ಬ ಕೆರೆಗೆ (Lake) ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಜರುಗಿದೆ.

ಕೊಟ್ಟೂರು ಪಟ್ಟಣದ ಕೆಳಗೇರಿ ನಿವಾಸಿ ಮನ್ಸೂರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಆಗಿದ್ದಾನೆ. ಬೇಲ್ದಾರ್‌ ಕೆಲಸ ಮಾಡುತ್ತಿದ್ದ ಈತನು ಪ್ರತಿದಿನ ತನ್ನ ತಾಯಿಗೆ ಬ್ಯುಸಿನೆಸ್‌ ಮಾಡಲೆಂದು ಹಣ ಕೇಳುತ್ತಿದ್ದ. ಆದರೆ ತಾಯಿ ಬ್ಯುಸಿನೆಸ್‌ ಬೇಡ ಓದು ಮುಂದುವರಿಸುವಂತೆ ತಿಳಿ ಹೇಳಿದ್ದರು.

ಒಮ್ಮೆ ಒಪ್ಪಿದ್ದ ಈತ ಪುನಃ ಕಳೆದ ಬುಧವಾರ ತಾಯಿ ಬಳಿಗೆ ಬಂದು 20 ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ತಾಯಿಯು ಬೇಲ್ದಾರ್‌ ಕೆಲಸ ಮಾಡುವುದರಿಂದ ಗುರುವಾರ ಬಟವಾಡೆಯಾಗುತ್ತದೆ. ಆಮೇಲೆ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Pradeep Eashwar: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ಗೆ ಆಘಾತ, ಅನಾಥನನ್ನು ಬೆಳೆಸಿದ್ದ ಸಾಕು ತಾಯಿ ನಿಧನ

ಶುಕ್ರವಾರ ಸಂಜೆ ಪಟ್ಟಣದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.

Exit mobile version