ಬೆಂಗಳೂರು ಗ್ರಾಮಾಂತರ: ಇಲ್ಲಿನ ಮಾಕಳಿಯಲ್ಲಿ ಗೃಹಿಣಿಯೊಬ್ಬರು ಅನಾರೋಗ್ಯದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide Case) ಶರಣಾಗಿರುವ ಘಟನೆ ನಡೆದಿದೆ. ಸುಚಿತ್ರಾ (35) ಸಾವಿಗೆ ಶರಣಾದ ಮಹಿಳೆ.
ಕಳೆದ 10 ವರ್ಷಗಳಿಂದ ಜಗದೀಶ್ ಎಂಬುವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿರುವ ಸುಚಿತ್ರಾ, ಇತ್ತೀಚೆಗೆ ತೀವ್ರ ಹೊಟ್ಟೆ ನೋವು ಮತ್ತು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಖಿನ್ನತೆಗೆ ಜಾರಿದ ಸುಚಿತ್ರ ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | JP Nadda : ಶೂ ಧರಿಸಿ ಗೋಪೂಜೆ ಮಾಡಿದ್ದ ಜೆ.ಪಿ. ನಡ್ಡಾ; ಹಿಂದು ಅನ್ನೋದು ಬಿಜೆಪಿಗೆ ಚುನಾವಣೆ ವಿಷಯ ಎಂದ ಕಾಂಗ್ರೆಸ್