ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ಶ್ರವಣಂಬಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. ಆಶಾ (35) ಮೃತ ದುರ್ದೈವಿ.
12 ವರ್ಷಗಳ ಹಿಂದೆ ದೇವರಾಜು ಎಂಬುವವರ ಜತೆ ಆಶಾ ವಿವಾಹವಾಗಿದ್ದರು. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕುಟುಂಬಸ್ಥರು ಹಲವು ಭಾರಿ ರಾಜಿ ಸಂಧಾನ ಮಾಡಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಬದಲಿಗೆ ದಂಪತಿ ನಡುವೆ ಜಗಳ ಮುಂದುವರಿದಿತ್ತು.
ಇದರಿಂದ ಬೇಸತ್ತ ಆಶಾ ಶನಿವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್ ಜೀ: ಇಂದು ಅವರ ಹುಟ್ಟುಹಬ್ಬ