Site icon Vistara News

Suicide Case | ಗೋಳಗುಮ್ಮಟದ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ

golgumbaz bijapur Suicide case

ವಿಜಯಪುರ: ವಿಶ್ವವಿಖ್ಯಾತ ಗೋಳಗುಮ್ಮಟದ ಮೇಲಿಂದ ಜಿಗಿದು ಸ್ಥಳೀಯ ಯುವತಿಯೊಬ್ಬಳು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾಳೆ. ಸೌಂದರ್ಯ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ.

ವಿಜಯಪುರದ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಮಾರಕ ಗೋಳಗುಮ್ಮಟಕ್ಕೆ ಭೇಟಿ ನೀಡಿದ್ದ ಸೌಂದರ್ಯ ಸೀದಾ ಸ್ಮಾರಕದ ಗುಮ್ಮಟದ ಮೇಲೆ ಹತ್ತಿದ್ದಾಳೆ. ಅಲ್ಲಿಂದ ಗುಮ್ಮಟದ ಒಳಭಾಗದ ಆವರಣಕ್ಕೆ ಜಿಗಿದಿದ್ದಾಳೆ. ಕೆಳಗೆ ಬಿದ್ದ ಈಕೆಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಆದರೂ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಪರೀಕ್ಷೆ ನಡೆಸಲಿದ್ದಾರೆ. ಸೌಂದರ್ಯಳಿಗೆ 23 ವರ್ಷ ಎಂದು ಅಂದಾಜು ಮಾಡಲಾಗಿದೆ.

ಸೌಂದರ್ಯ ವಿಜಯಪುರ ರಾಣಿಬಗಿಚ್ ಪ್ರದೇಶದ ನಿವಾಸಿ ಎಂಬುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಆಕೆ ಬಗ್ಗೆ ತಕ್ಷಣವೇ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಆಕೆ ಯಾರ ಜತೆಗಾದರೂ ಬಂದಿದ್ದಾಳೆಯೇ ಎಂಬ ಬಗ್ಗೆಯೂ ಸುತ್ತಮುತ್ತಲಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Adhik Maasa 2023 | ಹೊಸ ವರ್ಷ 2023ರಲ್ಲಿ ಬರಲಿದೆ ಅಧಿಕ ಮಾಸ; ಏನಿದರ ವಿಶೇಷ?

Exit mobile version