ಆನೇಕಲ್: ಇಲ್ಲಿನ ಬೆಂಗಳೂರು ಹೊರವಲಯದ ಸೋಲೂರು ಬಳಿಯ ಕಾಳನಾಯಕನಹಳ್ಳಿ ಸಮೀಪ ಕೃಷಿ ಹೊಂಡಕ್ಕೆ ಬಿದ್ದು ಯುವಕನೊಬ್ಬ ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ಮಧ್ಯಾಹ್ನ ಗ್ರಾಮದ ಚಿಕ್ಕಹಾಗಡೆ ಚಂದ್ರಪ್ಪ ಎಂಬುವವರಿಗೆ ಸೇರಿದ ಕೃಷಿ ಹೊಂಡಕ್ಕೆ ಬಿದ್ದಿರುವುದು ಬೆಳಕಿಗೆ ಬಂದಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆನೇಕಲ್ ಪೊಲೀಸರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಒಂದು ದಿನ ಕಳೆದರೂ ಮೃತದೇಹವನ್ನು ತೆಗೆಯಲು ಮೀನಮೇಷ ಎಣಿಸುತ್ತಿದ್ದಾರೆ. ಕೃಷಿ ಹೊಂಡದಲ್ಲಿ ಈಗಲೂ ಯುವಕನ ಶವ ತೇಲುತ್ತಿದ್ದು, ಮೇಲೆತ್ತಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆನೇಕಲ್ ಪೊಲೀಸರ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಮೃತ ಯುವಕ ಯಾರು ಏನು ಎಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬೆಂಗಳೂರಿನ ಕೆ.ಆರ್.ಪುರಂ ಮೂಲದ ಯುವಕ ಎನ್ನುವ ಮಾಹಿತಿ ಇದ್ದು, ಸ್ನೇಹಿತನ ಮನೆಗೆ ಬಂದಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದಿರುವ ಸಾಧ್ಯತೆ ಇರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ.
ಇದನ್ನೂ ಓದಿ | Murder attempt | ಬುದ್ಧಿವಾದ ಹೇಳಿದ ಯುವಕರ ಗುಂಪಿನ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ, ಒಬ್ಬ ಗಂಭೀರ