ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕ್ಯಾತಗಾನಕೆರೆ ಗ್ರಾಮದ ಚೌಡಕ್ಕ ಮತ್ತು ಅವರ ಹತ್ತು ವರ್ಷದ ಮಗಳು ರಕ್ಷಿತಾ ಇತ್ತೀಚಿಗೆ ಕ್ಯಾತಗನಕೆರೆ ಗ್ರಾಮದ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ (Suicide News) ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚೌಡಕ್ಕ ಎನ್ನುವವರ ಪತಿ ರಾಘವೇಂದ್ರ ಪ್ರತಿನಿತ್ಯ ಮದ್ಯಪಾನ ಸೇವಿಸಿ ಚೌಡಕ್ಕ ಅವರಿಗೆ ಕಿರುಕುಳ ನೀಡುತ್ತಿದ್ದರು. ಅದರ ಜೊತೆಗೆ ಸಂಸಾರವನ್ನು ನಡೆಸಲು ಏನು ಮನೆಗೆ ತಂದು ಹಾಕುತ್ತಿರಲಿಲ್ಲ. ಇದರಿಂದ ಮನನೊಂದ ಚೌಡಕ್ಕ (32) 22ನೇ ತಾರೀಕಿನಂದು ಸಂಜೆ ತನ್ನ ಮಗಳು ರಕ್ಷಿತಾ(10)ರನ್ನು ಸೀರೆಗೆ ಕಟ್ಟಿಕೊಂಡು ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಚೌಡಕ್ಕ ಅವರ ತಂದೆ ಈರಣ್ಣ ಅವರು ತಿರುಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: Karnataka election 2023: ಯುಪಿಯಲ್ಲಿ ಗಲಭೆಗಳೇ ಆಗಿಲ್ಲ ಎಂದ ಯೋಗಿ; 35040 ದಂಗೆಗಳಾಗಿವೆ ಎಂದು ಕಾಂಗ್ರೆಸ್ ಟ್ವೀಟ್!
ಈ ಹಿನ್ನಲೆ ಪೊಲೀಸರು ಚೌಡಕ್ಕ ಅವರ ಪತಿ ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ರಾಘವೇಂದ್ರನನ್ನು ಜೈಲಿಗೆ ಕಳಿಸಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಎಲ್ಲರ ಮನಸ್ಸು ಮರಗುವಂತೆ ಮಾಡಿದೆ.