Site icon Vistara News

Sumalatha Ambareesh | ಮಂಡ್ಯ ಮರು ಜನ್ಮ ಕೊಟ್ಟ ಪುಣ್ಯಕ್ಷೇತ್ರ: ಸಂಸದೆ ಸುಮಲತಾ ಅಂಬರೀಶ್‌ ಭಾವುಕ

ಅಂಬಿ-ಅಪ್ಪು ಪುತ್ಥಳಿ

ಮಂಡ್ಯ: ಮಂಡ್ಯ ಕೇವಲ ನಾನು ಸ್ಪರ್ಧೆ ನಡೆಸಿದ ಕ್ಷೇತ್ರ ಅಲ್ಲ. ನನಗೆ ಮರು ಜನ್ಮಕೊಟ್ಟಿರುವ ಪುಣ್ಯಕ್ಷೇತ್ರ ಎಂದು ಸಂಸದೆ ಕಂ ಹಿರಿಯ ನಟಿ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ. ಅವರು ಅಂಬರೀಶ್‌ ಹಾಗೂ ಪುನೀತ್‌ ರಾಜಕುಮಾರ್‌ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

Sumalatha Ambareesh

ದಿವಂಗತ ನಟ ಅಂಬರೀಶ್ ಅವರ 4ನೇ ದಿನದ ಪುಣ್ಯತಿಥಿ ಅಂಗವಾಗಿ ಗುರುವಾರ ಡಿ.ಹೊಸೂರು ಗ್ರಾಮದಲ್ಲಿ ಅಂಬಿ-ಅಪ್ಪು ಅಭಿಮಾನಿಗಳು ಅರಮನೆಯೊಂದನ್ನು ನಿರ್ಮಿಸಿದ್ದಾರೆ. ಅದರೊಳಗೆ ಈ ಇಬ್ಬರು ದಿಗ್ಗಜರ ಪುತ್ಥಳಿ ನಿರ್ಮಿಸಿ ಅಭಿಮಾನ ವ್ಯಕ್ತಪಡಿಸಿದರು. ರೆಬಲ್ ಮತ್ತು ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಂಸದೆ ಸುಮಲತಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸಾಥ್‌ ನೀಡಿದರು.

Sumalatha Ambareesh

ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್‌, ಮೊನ್ನೆ ಕ್ಷೇತ್ರಕ್ಕೆ ಬಂದಾಗ ಮುಂದಿನ ಚುನಾವಣೆಯಲ್ಲಿ ಮಂಡ್ಯ ಬಿಟ್ಟು ಬೇರೆ ಕ್ಷೇತ್ರವನ್ನು ಹುಡುಕಿಕೊಂಡು ಹೋಗುತ್ತಿರುವುದಾಗಿ ಸುದ್ದಿ ಹರಿದಾಡುತ್ತಿದೆಯಂತೆ. ಆದರೆ ಮಂಡ್ಯ ಎಂಬುದು ನನಗೆ ಕ್ಷೇತ್ರ ಅಲ್ಲ, ಅದೊಂದು ಮನೆ ಇದ್ದಂತೆ, ನಾನು ಏಕೆ ಪ್ರೀತಿ ನೀಡುತ್ತಿರುವ ಈ ಮನೆಯನ್ನು ಬಿಟ್ಟು ಹೋಗಲಿ? ಅಂಬರೀಶ್‌ ಅವರು ಇದ್ದಿದ್ದರೆ ʻಚಾನ್ಸೇ ಇಲ್ಲ ನೋ ವೇʼ ಎಂದು ಹೇಳುತ್ತಿದ್ದರು, ನಾನು ಅದೇ ಹೇಳುತ್ತೇನೆ ಎಂದರು

Sumalatha Ambareesh

ʻʻರಾಜಕಾರಣವೇ ಬೇರೆ ನನಗೂ ಮಂಡ್ಯ ಕ್ಷೇತ್ರಕ್ಕೂ ಇರುವ ಬಂಧವೇ ಬೇರೆ. ಮಂಡ್ಯ ಕೇವಲ ಕ್ಷೇತ್ರ ಅಲ್ಲ, ಅದೊಂದು ಪುಣ್ಯಕ್ಷೇತ್ರವಾಗಿದ್ದು ನನಗೆ ಮರು ಜನ್ಮ ಕೊಟ್ಟಿರುವ ಕ್ಷೇತ್ರ ಎಂದರು. ನನ್ನ ಮನೆಯಿಂದ ಯಾರು ನನ್ನ ಕಳುಹಿಸಲು ಆಗಲ್ಲ. ಆ ಪ್ರೀತಿ ನನಗೆ ಇಲ್ಲಿ ಸಿಕ್ಕಿದೆ, ನಿಮ್ಮ ಆಶೀರ್ವಾದ ಇದ್ದರೆ ಸಾಕು. ನಿಮ್ಮ ಋಣ ನನ್ನ ಮೇಲೆ ಇದೆ. ಅಭಿಷೇಕ್ ಅಂಬರೀಶ್ ಮದ್ದೂರನ್ನು ಇಷ್ಟಪಟ್ಟು ಪ್ರತಿ ಬಾರಿ ಬರುತ್ತಾರೆ. ನಿಮ್ಮ ಪ್ರೀತಿ ಅವನ ಮೇಲೆ ಇರಲಿʼʼ ಎಂದರು.

ಇದನ್ನೂ ಓದಿ | Farmer Protest | ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಕಾಣೆಯಾಗಿದ್ದಾರೆ; ಹುಡುಕಿ ಕೊಡಿ ಎಂದ ರೈತ ಸಂಘ!

Exit mobile version