ಬನ್ನೇರುಘಟ್ಟ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನಶ್ರೀ ಎಂಬ ಆನೆ ಮರಿಯಾನೆಗೆ ಜನ್ಮ ನೀಡಿದೆ. ಇದರ ಬೆನ್ನಲ್ಲೇ ಸುಂದರ್ ಎಂಬ ಆನೆ ಸಾವಿಗೀಡಾಗಿದೆ. ಬನ್ನೇರುಘಟ್ಟದ ಸೀಗೆಕಟ್ಟೆಯ ಆನೆ ಬಿಡಾರದಲ್ಲಿ ಇದ್ದ ಸುಂದರ್ ಆನೆ ತಡರಾತ್ರಿ ಸಾವಿಗೀಡಾಗಿದೆ. 2014ರಲ್ಲಿ ಆನೆಯನ್ನು ಮಹಾರಾಷ್ಟ್ರದ ಕೊಲ್ಲಾಪುರ ದೇವಾಲಯದಿಂದ ಬನ್ನೇರುಘಟ್ಟಕ್ಕೆ ರಕ್ಷಣೆ ಮಾಡಿ ತರಲಾಗಿತ್ತು.
ಈ ಹಿಂದೆ ಕೊಲ್ಲಾಪುರ ದೇವಸ್ಥಾನದಲ್ಲಿ ಸುಂದರ್ ಆನೆಗೆ ಹಿಂಸೆ ನೀಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಲವಾರು ವಿಡಿಯೊ ಹಾಗೂ ದೃಶ್ಯಗಳು ವೈರಲ್ ಆಗಿತ್ತು. ಸುಂದರ್ ಆನೆಯ ಕಾಲಿಗೆ ಹರಿತವಾದ ಸರಪಳಿ ಹಾಕಿ, ಹೊಡೆದು ಹಿಂಸಿಸುವ ದೃಶ್ಯ ಮನಕಲಕುವಂತಿತ್ತು.
ಈ ಬಗ್ಗೆ ಆನೆಯನ್ನು ರಕ್ಷಣೆ ಮಾಡುವಂತೆ ಕೋರ್ಟಿಗೆ ಎನ್‌ಜಿಒ ದಾವೆ ಸಲ್ಲಿಸಿದ್ದರು. ಬಳಿಕ ಆನೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರಕ್ಷಣೆ ಮಾಡಿ ತರಲಾಗಿತ್ತು. ಪೇಟ ಎನ್‌ಜಿಒ ಸಂಸ್ಥೆಯವರು ಆನೆಯನ್ನು ಆರೈಕೆ ಮಾಡಿದ್ದರು. ಇದೀಗ ಸುಂದರ್ ಆನೆ ತಡರಾತ್ರಿ ಬನ್ನೇರುಘಟ್ಟದಲ್ಲಿ ಸಾವಿಗೀಡಾಗಿದೆ.
ಇದನ್ನೂ ಓದಿ | ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಮರಿ ಜನನ