Site icon Vistara News

Supari for Murder | ಕೊಲೆಗೆ ಸುಪಾರಿ ಆರೋಪ; ಬಿ.ಸುರೇಶ್‌ ಗೌಡ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ

Supari for murder suresh gowda b

ತುಮಕೂರು: ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಪಾರಿ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಬಿ. ಸುರೇಶ್ ಗೌಡ ವಿರುದ್ಧ ಉದ್ಯಮಿ ಹಾಗೂ ಜೆಡಿಎಸ್‌ ಮುಖಂಡ ಅಟ್ಟಿಕಾ ಬಾಬು (ಬೊಮ್ಮನಹಳ್ಳಿ ಬಾಬು) 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿ, ನೋಟಿಸ್ ನೀಡಿದ್ದಾರೆ.

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡ, ಇತ್ತೀಚೆಗೆ ತಮ್ಮ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಹಾಗೂ ಅಟ್ಟಿಕಾ ಬಾಬು ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು.

ನನ್ನ ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗೆ ಶಾಸಕ ಗೌರಿಶಂಕರ್ ಸುಪಾರಿ ನೀಡಿದ್ದಾರೆ. ಕೈದಿಗೆ ಅಟ್ಟಿಕಾ ಬಾಬು ಮುಖಾಂತರ ಹಣ ನೀಡಲಾಗಿದೆ ಎಂದು ಸುರೇಶ್‌ ಗೌಡ ಆರೋಪಿಸಿದ್ದರು. ದೂರಿನಲ್ಲಿ ತಮ್ಮ ಹೆಸರು ತಳುಕು ಹಾಕಿದ್ದರಿಂದ ಸುರೇಶ್ ಗೌಡ ವಿರುದ್ಧ ಅಟ್ಟಿಕಾ ಬಾಬು 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಟ್ಟಿಕಾ ಬಾಬು ಪರವಾಗಿ ಮಾಜಿ ಶಾಸಕ ಬಿ.ಸುರೇಶ್ ಗೌಡಗೆ ಅಡ್ವೊಕೇಟ್‌ ಎಸ್.ಎಂ.ಪಾಷಾ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ | Janasankalpa Yatre | ಕಾಂಗ್ರೆಸ್‌ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಿ.ಟಿ. ರವಿ: ಕೊಪ್ಪದಲ್ಲಿ ಉಗ್ರ ಭಾಷಣ

Exit mobile version