Site icon Vistara News

Supari for murder | ಮಾಜಿ ಶಾಸಕ ಸುರೇಶ್‌ ಗೌಡರ ಕೊಲೆಗೆ ಶಾಸಕ ಗೌರಿಶಂಕರ್‌ ಸುಪಾರಿ?

Supari for murder

ತುಮಕೂರು: ಶಾಸಕ ಗೌರಿಶಂಕರ್‌ ವಿರುದ್ಧ ಮಾಜಿ ಶಾಸಕನ ಕೊಲೆಗೆ ಸುಪಾರಿ ನೀಡಿದ (Supari for murder) ಆರೋಪ ಕೇಳಿಬಂದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದು, ಮತದಾರರು, ಕಾರ್ಯಕರ್ತರು ಇರುವವರೆಗೂ ನನ್ನನ್ನು ಏನೂ ಮಾಡಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

ನಿನ್ನ ನಾಟಕ ಎಲ್ಲ ಬಂದ್ ಮಾಡು, ನಮ್ಮ ತಾಕತ್ತು ಏನು ಎಂಬುವುದನ್ನು ನಮ್ಮ ಕಾರ್ಯಕರ್ತರು ತೋರಿಸುತ್ತಾರೆ. ಕಳೆದ ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಎಂಬುದನ್ನು ಪ್ರತಿ ಊರಿನಲ್ಲೂ ತೋರಿಸಿದ್ದೇವೆ. ನಿನ್ನ ಒಂದೊಂದು ಆಟವೂ ನನಗೆ ಗೊತ್ತಿದೆ. ನನ್ನ ಕೊಲೆ ಮಾಡಿಸಲು ನೀನು ಸಜ್ಜಾಗಿದ್ದೀಯಾ, ಇದೆಲ್ಲ ನಡೆಯಲ್ಲಪ್ಪ ಮಿಸ್ಟರ್ ಗೌರಿಶಂಕರ್ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.

ನಾನೊಬ್ಬ ರೈತನ ಮಗ. ನಮ್ಮ ಮತದಾರರು, ಕಾರ್ಯಕರ್ತರು ಇರುವವರೆಗೂ ನನ್ನ ಒಂದು ಕೂದಲನ್ನೂ ಮುಟ್ಟೋಕೆ ಆಗಲ್ಲ. ನನ್ನನ್ನು ಕೊಲೆ ಮಾಡಲು ಜೈಲಲ್ಲಿ ಇರುವವರೆಗೆ ಸುಪಾರಿ ಕೊಡುತ್ತೀಯಾ? ನಿನಗೆ ಧಮ್ ಇದ್ದರೆ ಕೊಲೆ ಸುಪಾರಿ ಕೊಡು ನೋಡೋಣಾ‌ ಎಂದು ಏಕವಚನದಲ್ಲಿಯೇ ಸವಾಲು ಹಾಕಿದ್ದಾರೆ.

ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಟಿಕೆಟ್‌ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

Exit mobile version