ನವದೆಹಲಿ: ಹಿಜಾಬ್ ನಿಷೇಧ ಪ್ರಕರಣದ (Hijab Row) ವಿಚಾರಣೆಯನ್ನು ಮಾರ್ಚ್ 17ರಿಂದ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಪರೀಕ್ಷೆಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಕರ್ನಾಟಕದ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.
ಶಾಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಭಿನ್ನ ತೀರ್ಪು ನೀಡಿತ್ತು. ಅಲ್ಲದೇ ವಿಸ್ತೃತ ಪೀಠಕ್ಕೆ ಈ ಪ್ರಕರಣವನ್ನು ಶಿಫಾರಸು ಮಾಡಿತ್ತು.
ಮಾರ್ಚ್ 9ರಂದು ಪರೀಕ್ಷೆ ಎಂದ ವಕೀಲ
ಕರ್ನಾಟಕ ವಿದ್ಯಾರ್ಥಿನಿಯರ ಮನವಿಯನ್ನು ಸಿಜೆಐ ಡಿ ವೈ ಚಂದ್ರಚೂಡ ನೇತೃತ್ವದ ಪೀಠ ಗುರುವಾರ ಆಲಿಸಿತು. ಮಾರ್ಚ್ 9ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಹಾಗಾಗಿ ಶೀಘ್ರವೇ ವಿಚಾರಣೆ ನಡೆಸುವಂತೆ ವಿದ್ಯಾರ್ಥಿನಿಯರ ಪರ ವಕೀಲರು ಕೋರ್ಟ್‌ಗೆ ಹೇಳಿದರು. ಆಗ, ಸಿಜೆಐ, ಕೋರ್ಟ್‌ಗೆ ನೀವು ತಡವಾಗಿ ಬಂದಿದ್ದೀರಿ ಎಂದು ಸಿಜೆಐ ಹೇಳಿದರು. ಈ ಕುರಿತು ಪೀಠದ ಮುಂದೆ ಎರಡು ಬಾರಿ ಮನವಿ ಮಾಡಿರುವುದಾಗಿ ವಕೀಲರು ಹೇಳಿದರು. ಇಷ್ಟಾಗಿಯೂ ಮಾರ್ಚ್ 17ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿತು.
ಇದನ್ನೂ ಓದಿ: ಹಿಜಾಬ್ ವಿವಾದ ಬಳಿಕ ಉಡುಪಿಯಲ್ಲಿ ಹೆಚ್ಚಾಯ್ತು ಮುಸ್ಲಿಂ ಕಾಲೇಜುಗಳಿಗೆ ಬೇಡಿಕೆ
ಪರೀಕ್ಷೆ ಕಾರಣ ತ್ವರಿತವಾಗಿ ವಿಚಾರಣೆ ನಡೆಸಿ, ಇಲ್ಲವಾದರೆ ಏನೂ ಮಾಡೋದು ಎಂದು ವಕೀಲರು ಪ್ರಶ್ನಿಸಿದರು. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ. ಈ ಕೂಡಲೇ ಪ್ರಕರಣದ ವಿಚಾರಣೆ ಯ ಲಿಸ್ಟ್ ಮಾಡೋಕೆ ಆಗೋಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಆಗೋಲ್ಲ. ಹೋಳಿ ಹಬ್ಬದ ಬಳಿಕ ಲಿಸ್ಟ್ ಮಾಡಲಾಗುವುದು ಎಂದು ಪೀಠ ಹೇಳಿತು.