Site icon Vistara News

Supreme Court: ಕಂಬಳ, ಜಲ್ಲಿಕಟ್ಟು, ಚಕ್ಕಡಿ ಸ್ಪರ್ಧೆಗೆ ಅನುಮತಿಸುವ ಕಾನೂನು ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Supreme Court upholds laws allowing jallikattu, kambala

ನವದೆಹಲಿ: ತಮಿಳುನಾಡು(Tamil Nadu), ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದಲ್ಲಿ(Maharashtra) ಕ್ರಮವಾಗಿ ಜಲ್ಲಿಕಟ್ಟು (Jallikattu), ಕಂಬಳ (Kambala) ಮತ್ತು ಚಕ್ಕಡಿ ಸ್ಪರ್ಧೆಗೆ (Bull-Cart Race) ಅನುಮತಿಸುವ ಕಾನೂನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಿಕ ಪೀಠವು ತಳ್ಳಿ ಹಾಕಿದೆ. ಆ ಮೂಲಕ ಸಂಬಂಧಿಸಿದ ಕಾನೂನು ಸಿಂಧತ್ವವನ್ನು ಎತ್ತಿಹಿಡಿದೆ. ಹಾಗಾಗಿ, ರಾಜ್ಯದಲ್ಲಿ ಇನ್ನು ಮುಂದೆ ಕಂಬಳವು ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯಲಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸುಮಾರು ಒಂದು ಶತಮಾನದಿಂದಲೂ ಇದೆ. ಇದು ತಮಿಳುನಾಡು ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ತಮಿಳುನಾಡು ಸರ್ಕಾರವು ಜಲ್ಲಿಕಟ್ಟು ತಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಘೋಷಿಸಿದರೆ, ನ್ಯಾಯಾಂಗ ಆ ಬಗ್ಗೆ ಏನೂ ಮಾಡಲು ಬರುವುದಿಲ್ಲ. ಹಾಗಾಗಿ, ನ್ಯಾಯಂಗವು ಈ ಕುರಿತು ಭಿನ್ನವಾದ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಮಗೆ ಸೂಕ್ತ ಎನಿಸುವ ಕಾನೂನು ರೂಪಿಸಲು ರಾಜ್ಯ ಸ್ವತಂತ್ರವಾಗಿದೆ ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಅಜಯ್ ರಸ್ತೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ ಟಿ ರವಿಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲಂಚ ಪಡೆಯುವುದೂ ಹವಾಲ ದಂಧೆಗೆ ಸಮ, ಇ.ಡಿ ತನಿಖೆಯೂ ಸಾಧ್ಯ; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಇದೇ ಮಾನದಂಡವು ಕರ್ನಾಟಕದ ಕಂಬಳ ಹಾಗೂ ಮಹಾರಾಷ್ಟ್ರದ ಚಕ್ಕಡಿ ರೇಸ್‌ಗೂ ಅನ್ವಯವಾಗುತ್ತದೆ. ಈ ಸಂಬಂಧ ರಚಿಸಲಾಗಿರುವ ಕಾನೂನುಗಳನ್ನು ಕಟ್ಟು ನಿಟ್ಟಾದ ರೀತಿಯಲ್ಲಿ ಜಾರಿ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ವಹಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version