ಬೆಳಗಾವಿ: ದೇಶದ ವಿವಿಧೆಡೆ ನಡೆಸಿದ ದಾಳಿ ವೇಳೆ ಎನ್ಐಎಯಿಂದ ವಶಕ್ಕೆ ಪಡೆದಿದ್ದ ಇಬ್ಬರು ಶಂಕಿತ ಉಗ್ರರ ಕಚೇರಿಯನ್ನು ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರೇಂದಾರ ಗ್ರಾಮದಲ್ಲಿ ಸ್ಥಳೀಯರು ಧ್ವಂಸಗೊಳಿಸಿದ್ದಾರೆ.
ಉಗ್ರಸಂಘಟನೆ ಜತೆಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಗ್ರಾಮದ ಹಫೀಜ್ ಶೇಕ್, ಅಲ್ತಾಫ್ ಎಂಬುವವರನ್ನು ಮಹಾರಾಷ್ಟ್ರದ ಜಿಲ್ಲೆಯ ಹುಪರಿ ಗ್ರಾಮದಲ್ಲಿ ಎನ್‌ಐಎ ವಶಕ್ಕೆ ಪಡೆದಿತ್ತು.
ತಮ್ಮ ಗ್ರಾಮದಲ್ಲೇ ಇದ್ದುಕೊಂಡು ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ರೇಂದಾರ ಗ್ರಾಮದ ಅಂಬಾಯಿ ನಗರದಲ್ಲಿ ಶಂಕಿತ ಉಗ್ರರು ಲಯ್ಬಾಕ್ ಇಮದಾದ್ ಫೌಂಡೇಶನ್ ಹೆಸರಿನ ಕಚೇರಿ ಹೊಂದಿದ್ದರು. ಕಚೇರಿಗೆ ನುಗ್ಗಿ ಪೀಠೋಪಕರಣ, ಇನ್ನಿತರ ವಸ್ತುಗಳನ್ನು ಗ್ರಾಮಸ್ಥರು ಧ್ವಂಸಗೊಳಿಸಿದ್ದಾರೆ.
ಕಚೇರಿಯನ್ನು ಸ್ಥಳೀಯರು ಧ್ವಂಸಗೊಳಿಸಿದ್ದರಿಂದ ಸ್ಥಳಕ್ಕೆ ಕೊಲ್ಹಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Terror Accused | ರಾಜ್ಯದಲ್ಲಿ 3 ಕಡೆ, ದೇಶದಲ್ಲಿ 13 ಕಡೆ NIA ದಾಳಿ: ಶಂಕಿತರ ತೀವ್ರ ವಿಚಾರಣೆ