ಬೆಂಗಳೂರು: ಇಲ್ಲಿನ ಅನ್ನಪೂರ್ಣೇಶ್ವರಿ ನಗರದ ನಾಗರಭಾವಿಯಲ್ಲಿ ಅನುಮಾನಾಸ್ಪದ (Suspicious Death) ರೀತಿಯಲ್ಲಿ ಉದ್ಯಮಿ ಮೃತಪಟ್ಟಿದ್ದಾರೆ. ಕಟ್ಟಡದಿಂದ ಬಿದ್ದು (Self Harming) ಮಾರಾಂಜಿನಪ್ಪ(62) ಎಂಬುವವರು ಮೃತಪಟ್ಟಿದ್ದಾರೆ.
ಗುರುವಾರ ಬೆಳ್ಳಬೆಳಗ್ಗೆ 3 ಗಂಟೆ ಸುಮಾರಿಗೆ ಎರಡನೇ ಪತ್ನಿ ಮನೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಟ್ಟಡದಿಂದ ಬಿದ್ದಿದ್ದ ಉದ್ಯಮಿ ಮಾರಾಂಜಿನಪ್ಪ ಅವರನ್ನು 2ನೇ ಪತ್ನಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಕಾರಣದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಉದ್ಯಮಿ ಸಾವಿನ ಬಗ್ಗೆ ಮಾರಾಂಜಿನಪ್ಪ ಕುಟುಂಬಸ್ಥರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಉದ್ಯಮಿಯ ಮೈಮೇಲೆ ಕೆಲವು ಗಾಯಗಳಾಗಿದ್ದು, ಎರಡನೇ ಪತ್ನಿಯೇ ಏನೋ ಮಾಡಿರಬೇಕೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Electric shock : ಕರೆಂಟ್ ಶಾಕ್‌ಗೆ ದೇಹ ಪೀಸ್ ಪೀಸ್; ಕಂಬದಲ್ಲೇ ನೇತಾಡಿದ ಮುಂಡ, ಕೆಳಗೆ ಬಿದ್ದ ರುಂಡ!
ಯಾರನ್ನೂ ಬಿಡಲ್ಲ, 9 ಬಲಿ ಪಡೀತೇನೆ
ಚಿಕ್ಕಮಗಳೂರು: ಈ ದೇವರು ಬಾ ಅಂದಾಗ ಬರುವ ಅತಿಥಿ ಹಾಗೆ ಆಗಿಬಿಟ್ರಾ? ಇಂಥಹುದೊಂದು ಪ್ರಶ್ನೆ ಹುಟ್ಟಿಕೊಂಡಿದ್ದು ಮೂಡಿಗೆರೆ ಶಾಲೆಯಲ್ಲಿ (Bettagere High school in Mudigere) ನಡೆದ ಒಂದು ಘಟನೆ ನೋಡಿದ ಮೇಲೆ. ಇಲ್ಲಿನ ಶಾಲೆಯೊಂದರ ಅಕ್ರಮದ (Irregularities in School) ಬಗ್ಗೆ ತನಿಖೆಗೆ ಹೋದ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆಯೇ ಮುಖ್ಯ ಶಿಕ್ಷಕಿ (Head Mistress) ಮೈಮೇಲೆ ದೇವರು ಬಂದಿದ್ದಾರೆ (God appears on headmistress). ಯಾರನ್ನೂ ಬಿಡಲ್ಲ, ಒಂಬತ್ತು ಜನರ ಬಲಿ ಪಡೆದೇ ಪಡೀತೇನೆ ಎಂದು ಆಕೆ (School teacher) ಅಬ್ಬರಿಸಿದ್ದಾರೆ!
ಈ ಘಟನೆ ನಡೆದಿರುವುದು ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಪ್ರೌಢಶಾಲೆಯಲ್ಲಿ. ಈ ಶಾಲೆಯಲ್ಲಿ ಆಡಳಿತಾತ್ಮಕ ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದನ್ನು ಪ್ರಶ್ನಿಸಲು ಬಂದ ಅಧಿಕಾರಿಗಳ ಮುಂದೆಯೇ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂದಿದ್ದಾರೆ!
ಲೋಪದ ಬಗ್ಗೆ ತನಿಖೆ ನಡೆಸಲು ಬಿಇಒ ಶಾಲೆಗೆ ಬಂದಿದ್ದರು. ಮುಖ್ಯ ಶಿಕ್ಷಕಿಯನ್ನು ಕೂರಿಸಿಕೊಂಡು ಮಾತನಾಡಿದ್ದರು. ಪ್ರಕರಣದ ವಿಚಾರಣೆ ಆಳಕ್ಕಿಳಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಮಾತಿನ ದಾಟಿಯೇ ಬದಲಾಗಿ ಹೋಯ್ತು! ಆಕೆ ವಿಚಿತ್ರವಾಗಿ ಮಾತನಾಡಲು ತೊಡಗಿದರು. ದೇವರು ಮೈಮೇಲೆ ಬಂದಂತೆ ʻʻನನಗೆ ದೇವಸ್ಥಾನ ಕಟ್ಟಿಕೊಡಬೇಕು. ಇಲ್ಲಂದ್ರೆ ಯಾರನ್ನೂ ಬಿಡಲ್ಲʼʼ ಎಂದೆಲ್ಲ ಹೇಳತೊಡಗಿದರು.
ಬಿ.ಬಿ ನಿಂಗಯ್ಯರನ್ನೂ ಬಿಡಲ್ಲ! ರಕ್ತ ಕಾರಿ ಸಾಯ್ತಾನೆ!
ಆಶ್ಚರ್ಯವೆಂದರೆ ಆಕೆಯ ಮೈ ಮೇಲೆ ಬಂದ ʻಶಕ್ತಿʼ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರ ಮೇಲೂ ಸಿಟ್ಟು ಪ್ರದರ್ಶಿಸಿದೆ. ಮೂಡಿಗೆರೆಗೆ ಈಗ ಶಾಸಕರು ಬದಲಾಗಿದ್ದಾರೆ. ಈಗ ನಯನಾ ಮೋಟಮ್ಮ, ಅದಕ್ಕಿಂತ ಹಿಂದೆ ಎಂ.ಪಿ. ಕುಮಾರಸ್ವಾಮಿ. ಆದರೆ, ಈ ಶಕ್ತಿ ಮಾತ್ರ ಅದಕ್ಕೂ ಮೊದಲು ಶಾಸಕರಾಗಿದ್ದ ಬಿ.ಬಿ. ನಿಂಗಯ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಅನ್ನುತ್ತಿತ್ತು. ʻʻಬಿಬಿ ನಿಂಗಯ್ಯ ರಕ್ತಕಾರಿ ಸಾಯ್ತಾನೆ, ಬಿಡಲ್ಲ ಅವರನ್ನುʼ ಎಂದೂ ಶಿಕ್ಷಕಿ ಹೇಳಿದ್ದಾರೆ.
ಶಿಕ್ಷಕಿಯ ಮಾತು ಕೇಳಿ ಬಿಇಒ ಮತ್ತು ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಏನು ಮಾಡುವುದು ಎಂದು ತೋಚದೆ ಆಕೆಯ ವರ್ತನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದು ಈಗ ವೈರಲ್ ಆಗಿದೆ.
ಹಾಗಿದ್ದರೆ ಮೈಮೇಲೆ ದೇವರೋ, ದೆವ್ವವೋ ಬಂದ ಶಿಕ್ಷಕಿ ಏನೆಲ್ಲ ಹೇಳಿದರು?
- ಈ ಗ್ರಾಮದಲ್ಲಿ ಯಾರ್ಯಾರಿದ್ದಾರೆ, ಏನೇನು ಮಾಡುತ್ತಿದ್ದಾರೆ, ಎಲ್ಲವೂ ಗೊತ್ತಿದೆ ನಂಗೆ. ನನಗೆ ದೇವಸ್ಥಾನ ಕಟ್ಟಿಸಬೇಕು, ಅಲ್ಲಿ ತನಕ ಬೆಂಕಿ ಹಾಕೊಂಡೇ ಇರೋದು ನಾನು. ಈ ಸ್ಕೂಲೂ ನಡೀಬಾರದು, ಯಾರೂ ಬರ್ಬಾರ್ದು. ಯಾರ್ನೂ ಇಲ್ಲಿ ಬರೋಕೆ ಬಿಟ್ಕೊಳ್ಳಲ್ಲ ನಾನು.
- ನಾವೇನು ಒಂಬತ್ತು ಜನ ಇದ್ದೀವಿ, ನಾವು ಒಂಬತ್ತು ಜನಾನೂ ಕಣ್ಣೀರು ಹಾಕಿಕೊಂಡು ಅಳ್ತಾ ಕೂತಿದೀವಿ ಬಿಸಿಲಲ್ಲಿ. ನಮಗೆ ದೇವಸ್ಥಾನ ಕಟ್ಟಿಸಿಕೊಡದ ಹೊರತು ಯಾರು ಬಂದರೂ ನಾವು ಮಾಡಕ್ ಬಿಡಲ್ಲ ಅಂದ್ರೆ ಬಿಡಲ್ಲ!
- ನನಗೆ ಪದೇಪದೆ ತೊಂದರೆ ಕೊಟ್ಟರೆ ನಾನು ನಿಮಗೂ ತೊಂದರೆ ಕೊಡ್ತೀನಿ. ನನಗೆ ನನ್ನ ಜಾಗದಲ್ಲಿ ಯಾರೂ ತೊಂದರೆ ಕೊಡಕೂಡ್ದು.
- ನನ್ನ ಸರ್ಪಗಳನ್ನೆಲ್ಲ ಬಿಟ್ಟು ಕೊಲ್ಲಿಸ್ತಿದ್ದಾರೆ. ನನಗೆ ಏನು ಮಾಡಬೇಕು ಅಂತ ಗೊತ್ತು ನಂಗೆ. ನನ್ನ ಜಾಗಕ್ಕೆ ಬೇರೆ ಯಾರನ್ನೂ ಬರಲು ಬಿಡಲ್ಲ ನಾನು.
- ಇವತ್ತು ನನ್ನ ಪೂಜೆ ಆಗಬೇಕಾಗಿತ್ತು. ಇವತ್ತು ನನ್ನ ಪೂಜೆ ಮಾಡಿಸಿಲ್ಲ ಇವರು. ಅದಕ್ಕೆ ಏನು ಮಾಡಬೇಕು ಅಂತ ಗೊತ್ತಿದೆ ನಂಗೆ. ಮಾಡ್ತೀನಿ. ನನ್ನನ್ನು ಗೂಟ ಇಲ್ದಂಗೆ ಕೂರಿಸಿದ್ದಾರೆ, ಅದು ಗೊತ್ತಾ ನಿಂಗೆ?
- ನಾವು ಅಕ್ಕತಂಗಿಯರು ಒಂಬತ್ತು ಜನ ಹೆಂಗೆ ಉಪವಾಸ ಕೂತಿದ್ದೇವೆ ಅಂದರೆ ಅದು ನಮ್ಗೆ ಮಾತ್ರ ಗೊತ್ತು. ಮಕ್ಕಳನ್ನು ಕೂರಕ್ಕೂ ಬಿಡಲ್ಲ, ನಿಲ್ಲಕೂ ಬಿಡಲ್ಲ. ಮಗಳ ಮೈಮೇಲೆ ಕೂತಿದ್ದೇನೆ ನಾನು. ಇವತ್ತಲ್ಲ. ಹಿಂದಿನಿಂದಲೂ ಅವಳ ಮೈಮೇಲೆ ಇದ್ದೀನಿ. ಅವಳು ಏನು ಮಾಡ್ಬೇಕು, ಏನು ಮಾಡ್ಬಾರ್ದು ಅಂತ ನಾನು ತೀರ್ಮಾನ ಮಾಡೋಳು.
- ನನಗೆ ದೇವಸ್ಥಾನ ಆಗದೆ ಈ ಶಾಲೆನ ಉದ್ಧಾರ ಆಗಕ್ಕೆ ಬಿಡಲ್ಲ. ನೀವೊಬ್ಬ ಅಧಿಕಾರಿ ಅಂತ ಹೇಳ್ತಾ ಇದೀನಿ. ಇಲ್ಲಿ ಯಾರಿಗೂ ಇರಕ್ಕೆ ಬಿಡಲ್ಲ. ಮಕ್ಕಳನ್ನೂ ಬಿಡಲ್ಲ, ಟೀಚರ್ಸನ್ನೂ ಬಿಡಲ್ಲ. ಎಚ್ಎಂನೂ ಇರಲ್ಲ.
- ಕರೆಸು ನಿಂಗಯ್ಯನ್ನ (ಮಾಜಿ ಶಾಸಕ ಬಿ.ಬಿ. ನಿಂಗಯ್ಯ). ಅವನು ಯಾಕೆ ನನ್ನನ್ನು ತಂದು ಇಲ್ಲಿ ಕೂರಿಸಿದ? ತುಂಬ ಅನುಭವಿಸಿದೇವೆ ನಾವು. ನಾವು ಒಂಬತ್ತು ಜನ ನುಗ್ಗಿದ್ದೇವೆ ಗ್ರಾಮಕ್ಕೆ. ಏನು ಮಾಡಬೇಕೋ ಅದನ್ನು ಮಾಡ್ತೀವಿ.
- ಇವತ್ತು ನಿನ್ನೆ ಅಲ್ಲ, ಮೂವತ್ತು ವರ್ಷದಿಂದ ನನ್ನನ್ನು ಅನ್ನ, ನೀರು ಇಲ್ದೆ ತಂದು ಕೂರಿಸಿದ್ದಾರೆ. ಇಲ್ಲಿ ಯಾವ ಕೆಲಸ ಆಗೋಕ್ಕೂ ನಾನು ಬಿಡಲ್ಲ.
- ದೇವಿರಮ್ಮನಾದ ನಾನು ನನ್ನ ದೇವಸ್ಥಾನ ಆಗದೆ ಬಿಡೋಳಲ್ಲ. ನಿಂಗಯ್ಯನನ್ನಂತೂ ಬಲಿ ತಗೊಂಡೇ ತಗೋತೀನಿ!
ಹಾಗಂತ ಈ ಶಿಕ್ಷಕಿ ದೇವರೋ, ದೆವ್ವವೋ ಮೈಮೇಲೆ ಬಂದಂತೆ ಆಡಿಲ್ಲ. ಕುಳಿತುಕೊಂಡಲ್ಲೇ ಮಾತನಾಡಿದ್ದಾರೆ. ಮಾತಿನಲ್ಲಿ ಆಕ್ರೋಶವಿದ್ದರೂ ದೈಹಿಕವಾಗಿ ಆಕ್ರೋಶ ತೋರ್ಪಡಿಸಿಲ್ಲ. ಮತ್ತು ಬಂದಿರುವವರು ಅಧಿಕಾರಿಗಳು ಎನ್ನುವ ಪ್ರಜ್ಞೆ ಇಟ್ಟುಕೊಂಡೇ ಮಾತನಾಡಿದ್ದಾರೆ!
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ