Site icon Vistara News

Suspicious Death | ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್‌ ಪೇದೆ ಪತ್ನಿ ಸಾವು; ಕೊಲೆ ಎಂದು ಪೋಷಕರ ಆರೋಪ

Suspicious Death

ಬಳ್ಳಾರಿ: ಇಲ್ಲಿನ ತೆಕ್ಕಲಕೋಟೆ ಪೊಲೀಸ್ ಠಾಣೆ ಪೇದೆಯ ಪತ್ನಿ ಅನುಮಾನಾಸ್ಪದವಾಗಿ (Suspicious Death) ಮೃತಪಟ್ಟಿರುವ ಘಟನೆ ನಡೆದಿದೆ. ಪೊಲೀಸ್‌ ಪೇದೆ ರಮೇಶ್ ಎಂಬಾತನ ಪತ್ನಿ ರಾಜೇಶ್ವರಿ ಮೃತ ಮಹಿಳೆ.

ರಮೇಶ್‌ನೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆಂದು ರಾಜೇಶ್ವರಿ ಪೋಷಕರು ಆರೋಪಿಸಿದ್ದಾರೆ. ಸೋಮವಾರ ಬೆಳಗಿನ ಜಾವ ರಾಜೇಶ್ವರಿ ಮೃತಪಟ್ಟಿದ್ದು, ಮೃತದೇಹವನ್ನು ರಮೇಶ್‌ ಇದ್ದಕ್ಕಿದ್ದ ಹಾಗೆ ತವರು ಮನೆ ಸಿಂಧನೂರಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.

ಸಾವು ಹೇಗೆ ಆಯಿತು ಎಂದು ಕೇಳಿದರೆ, ಒಮ್ಮೆ ನೇಣಿಗೆ ಶರಣಾದಳು ಎನ್ನುತ್ತಾ, ಮತ್ತೊಮ್ಮೆ ಮೂರ್ಛೆರೋಗ ಬಂದಿತ್ತು, ಇನ್ಮೊಮ್ಮೆ ಲೋ ಬಿಪಿಯಿಂದ ಮೃತಪಟ್ಟಿದ್ದಾಳೆ ಎಂದು ಪೇದೆ ರಮೇಶ್ ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾನೆ ಎಂದು ಮನೆಯವರು ಆರೋಪ ಮಾಡಿದ್ದಾರೆ.

ಹೀಗಾಗಿ ಗೃಹಿಣಿಯ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಈ ಹಿನ್ನೆಲೆಯಲ್ಲಿ ಮೃತ ರಾಜೇಶ್ವರಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಸ್ಟ್ ಮಾರ್ಟಮ್ ವರದಿಗಾಗಿ ಬಳ್ಳಾರಿಯ ವಿಮ್ಸ್‌ಗೆ ರಾಜೇಶ್ವರಿ ಮೃತದೇಹ‌ವನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್‌ ಆರೋಗ್ಯ ಚೇತರಿಕೆ, ಪೊಲೀಸರಿಂದ ಆಸ್ಪತ್ರೆಯಲ್ಲೇ ವಿಚಾರಣೆ ಶುರು

Exit mobile version