ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ (Suttur Jatre) ಅಂಗವಾಗಿ ಭಾನುವಾರ ದೇಸಿ ಆಟಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಸುತ್ತೂರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ ಅವರ ಗದ್ದುಗೆ ಬಳಿ ಸಮಾರೋಪ ಸಮಾರಂಭ ನಡೆಯಿತು.
ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಭಾಗವಹಿಸಿ, ದೇಸಿ ಆಟಗಳ ಮಹತ್ವವನ್ನು ವಿವರಿಸಿದರು. “ದೇಸಿ ಆಟಗಳು ನಮ್ಮ ಸಂಸ್ಕೃತಿಯ ಭಾಗ” ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಮಾಜಿ ಸಚಿವ ಈಶ್ವರ ಖಂಡ್ರೆ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ | ಬೇರೆ ದೇಶದ ಜನರಾಗಿದ್ದರೆ ಕಲ್ಲು ಹೊಡೆಯುತ್ತ, ಬೆಂಕಿ ಹಚ್ಚುತ್ತಾ ನಡೆಯುತ್ತಿದ್ದರು : ಭಾರತದ ಜನರ ಕುರಿತು ಬಿ.ಎಲ್. ಸಂತೋಷ್ ಪ್ರಶಂಸೆ