Site icon Vistara News

Swami Koragajja Temple: ಹಿಂದು ವಿರೋಧಿ ಕೃತ್ಯ ದೂರಾಗಲು ಕೊರಗಜ್ಜನ ಆದಿಕ್ಷೇತ್ರಕ್ಕೆ ವಿಹಿಂಪ ಪಾದಯಾತ್ರೆ

Swami Koragajja Temple VHP to take out padayatra to Koragajjana Adikshetra to ward off anti Hindu acts

ಮಂಗಳೂರು: ಹಿಂದು ವಿರೋಧಿ ಕೃತ್ಯಗಳು ಮಾಯವಾಗಿ ಸಮಾಜದಲ್ಲಿ ಐಕ್ಯತೆ ಮೂಡಬೇಕು ಎಂಬ ಕಾರಣಕ್ಕಾಗಿ ವಿಶ್ವ ಹಿಂದು ಪರಿಷತ್‌ ವತಿಯಿಂದ ವಿವಿಧ ಹಿಂದು ಕಾರ್ಯಕರ್ತರು ಜತೆಗೂಡಿ ಕೊರಗಜ್ಜನ ಆದಿಕ್ಷೇತ್ರಕ್ಕೆ (Swami Koragajja Temple) ಪಾದಯಾತ್ರೆ ಮಾಡಲಾಗಿದೆ.

ಕೊರಗಜ್ಜನ ಆದಿಕ್ಷೇತ್ರಕ್ಕೆ ಹಿಂದು ಕಾರ್ಯಕರ್ತರ ಪಾದಯಾತ್ರೆ

ಮಂಗಳೂರಿನ ಕದ್ರಿ ಮಂಜುನಾಥನ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆದಿದೆ. ಪಾದಯಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಯುವತಿಯರು, ಮಹಿಳೆಯರು, ಮಕ್ಕಳು ಎನ್ನದೇ ಎಲ್ಲರೂ ಭಾಗಿಯಾಗಿ ಹಿಂದು ಪರ ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ: RSS Meeting: ಸ್ವಾಭಿಮಾನದ ಆಧಾರದ ಮೇಲೆ ದೇಶದ ಪುನರುತ್ಥಾನ, ಆರೆಸ್ಸೆಸ್‌ ವಾರ್ಷಿಕ ಸಭೆಯಲ್ಲಿ ನಿರ್ಣಯ

“ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ” ಎಂಬ ಅಡಿಬರಹದಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಸುಮಾರು 12 ಕಿ.ಮೀ. ದೂರದವರೆಗೆ ಪಾದಯಾತ್ರೆ ನಡೆದಿದೆ. ಬರಿಗಾಲಿನಲ್ಲಿ ಪಾದಯಾತ್ರೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.

ಪಾದಯಾತ್ರೆ ಕೈಗೊಂಡಿರುವ ಭಕ್ತ ಸಮೂಹ

ಪಾದಯಾತ್ರಿಗಳು ಬರುವ ದಾರಿಯುದ್ದಕ್ಕೂ ನೀರು ಹಾಕಿ ಸ್ವಚ್ಛತೆ ಮಾಡಲಾಗುತ್ತಿತ್ತು. ದಾರಿಯುದ್ದಕ್ಕೂ ಭಕ್ತರಿಗೆ ಬೆಲ್ಲ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಾದಯಾತ್ರೆಯ ಕೊನೆಗೆ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿದೆ. ಹಿಂದು ವಿರೋಧಿ ಕೃತ್ಯಗಳು ಮಾಯವಾಗುವಂತೆ ಪ್ರಾರ್ಥನೆ ಮಾಡುವ ಉದ್ದೇಶವನ್ನು ಈ ಪಾದಯಾತ್ರೆ ಹೊಂದಿದೆ.

ಪಾದಯಾತ್ರೆ ಕೈಗೊಳ್ಳುವ ಮಾರ್ಗವುದ್ದಕ್ಕೂ ನೀರು ಹಾಕಲಾಗುತ್ತಿರುವುದು

ಇದನ್ನೂ ಓದಿ: Siddaramaiah: ಕೋಲಾರದಿಂದ ಹೊರನಡೆಯುವ ಸಿದ್ದರಾಮಯ್ಯ ನಿರ್ಧಾರಕ್ಕೆ ನಾಯಕರಲ್ಲಿ ಗಢಗಢ: ನಿವಾಸಕ್ಕೆ ಶತಪಥ; ಟೀಕಿಸಿದ BJP

ವಿಹಿಂಪದಿಂದ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಿಂದು ಕಾರ್ಯಕರ್ತರು; ವಿಡಿಯೊ ಇಲ್ಲಿದೆ

ಹಿಂದು ಸಮಾಜದ ಐಕ್ಯತೆ ಜತೆಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ವಿಶ್ವ ಹಿಂದು ಪರಿಷತ್‌ನಿಂದ ಕಳೆದ ಮೂರು ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ದುಷ್ಕೃತ್ಯವನ್ನು ಖಂಡಿಸಿ ಪಾದಯಾತ್ರೆ ನಡೆಸಲಾಗಿದೆ ಎಂದು ವಿಹಿಂಪ ಮುಖಂಡರು ಹೇಳಿದ್ದಾರೆ.

Exit mobile version