ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ, ಯಾರು ಪ್ರಧಾನಿ ಅಗಲಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ದೇಶದ ಪ್ರಧಾನಿ (Next PM of India) ಪಟ್ಟಕ್ಕೆ ಮಹಿಳೆ ಏರಲಿದ್ದಾರೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಇದು ನಿಜವೇ ಆದಲ್ಲಿ ಇಂದಿರಾ ಗಾಂಧಿ ಬಳಿಕ ಮತ್ತೊಬ್ಬ ಮಹಿಳೆಗೆ ದೇಶದ ಚುಕ್ಕಾಣಿ ಹಿಡಿಯುವ ಅವಕಾಶ ಒದಗಿಬರಲಿದೆ.
ಹೌದು, ಜಿಲ್ಲೆಯ ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಅವರು ದೇಶದ ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಈ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅದರಂತೆ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಅಗಿದ್ದಾರೆ. ಹೀಗಾಗಿ ಸ್ವಾಮೀಜಿಯ ಭವಿಷ್ಯವಾಣಿ ಕುತೂಹಲ ಮೂಡಿಸಿದೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ?
ಎರಡು ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲ್ಲ. ಮುಂದಿನ ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆ ಸಂಭವಿಸಲಿದೆ. ಮಾರ್ಚ್ ತಿಂಗಳ ನಂತರ ದೇಶದ ಅಧಿಕಾರ ಮಹಿಳೆಯ ಕೈಗೆ ಹೋಗಲಿದೆ, ಇದು ಶತಃಸಿದ್ಧ ಎಂದು ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ | Rahul Gandhi: ಸಂಸತ್ತಲ್ಲಿ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ; ಸಂಸದೆಯರಿಂದ ದೂರು
ಸ್ವಾಮೀಜಿ ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಮಿತ್ರ ಪಕ್ಷಗಳ ಸಹಕಾರದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. 35 ವರ್ಷಗಳ ಹಿಂದೆ ದೇಶವನ್ನು ಮಹಿಳೆ ಆಳಿದ್ದರು. ಮಹಾಶಿವರಾತ್ರಿ ಬಳಿಕ ಶಕ್ತಿ ಸ್ವರೂಪಿ ಮಹಿಳೆ ದೇಶವನ್ನು ಆಳುತ್ತಾಳೆ. ಪ್ರಧಾನಿಯಾಗುವ ಯೋಗ ಇರುವ ಮಹಿಳೆ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.