Site icon Vistara News

Talakaveri Temple | ತಲಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ

talakaveri theerthodbhava

ಮಡಿಕೇರಿ: ಕರುನಾಡಿನ ಜೀವನದಿ, ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ (Talakaveri Temple) ತೀರ್ಥೋದ್ಭವಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಈ ವರ್ಷ ಅ.17ರ ಸೋಮವಾರ ರಾತ್ರಿ 7.21ರ ಮೇಷ ಲಗ್ನದಲ್ಲಿ “ಪವಿತ್ರ ಕಾವೇರಿ ತೀರ್ಥೋದ್ಭವ”ದ ಸಮಯ ನಿಗದಿಯಾಗಿದೆ.

ಪ್ರತಿ ವರ್ಷ ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ತೀರ್ಥವನ್ನು ಹಿಡಿದು ಧನ್ಯರಾಗುತ್ತಿದ್ದರು. ಆದರೆ, ಕಳೆದೆರಡು ವರ್ಷ ಕೋವಿಡ್‌ ಕಾರಣಕ್ಕೆ ಸೀಮಿತ ಪ್ರವೇಶವನ್ನು ನೀಡಲಾಗಿತ್ತು. ಆದರೆ, ಈ ವರ್ಷ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವುದರಿಂದ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ.

ಈ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದರಿಂದ ಅವುಗಳ ಮುಹೂರ್ತ ಸಮಯವನ್ನೂ ನಿಗದಿಪಡಿಸಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಸೆ.27ರ ಮಂಗಳವಾರ 11.05ಕ್ಕೆ ಸಲ್ಲುವ ವೃಶ್ಚಿಕ ಲಘ್ನದಲ್ಲಿ “ಪತ್ತಾಯಕ್ಕೆ ಅಕ್ಕಿಹಾಕುವುದು” ಮುಹೂರ್ತವನ್ನು ನಿಗದಿಪಡಿಸಲಾಗಿದೆ.

ಅಕ್ಟೋಬರ್‌ 5ರ ಬೆಳಗ್ಗೆ 9.35ಕ್ಕೆ ಆಜ್ಞ ಮುಹೂರ್ತವಿದೆ. ಅಕ್ಟೋಬರ್‌ 15ರಂದು ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು ಹಾಗೂ ಸಂಜೆ ೪.೧೫ಕ್ಕೆ ಕಾಣಿಕೆ ಡಬ್ಬಿ ಇರಿಸುವುದಕ್ಕೆ ಮುಹೂರ್ತವನ್ನು ನಿಗದಿಪಡಿಸಲಾಗಿದೆ ಎಂದು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Mysore Dasara 2022 | ಅರಮನೆ ನಗರಿಯಲ್ಲಿ ಇಂದಿನಿಂದ ಯುವ ಸಂಭ್ರಮ: ನಟ ಡಾಲಿ ಧನಂಜಯ್ ಅತಿಥಿ

Exit mobile version