ಬೆಂಗಳೂರು: ರಾಜಧಾನಿಯ ಮುಸ್ಲಿಂ ಅನಾಥಾಶ್ರಮವೊಂದರಲ್ಲಿ (Muslim Yateem Khana) 200 ಪುಟ್ಟ ಪುಟ್ಟ ಮಕ್ಕಳು ಅಸಹನೀಯ ಬದುಕು ಬದುಕುತ್ತಿದ್ದು, ಅವರಿಗೆ ತಾಲಿಬಾನ್ ಮಾದರಿಯಲ್ಲಿ ಶಿಕ್ಷಣ (Taliban Education) ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಕ್ಕಳನ್ನು ವಸ್ತುಶಃ ಕೋಣೆಗಳಲ್ಲಿ ಕೂಡಿ ಹಾಕಲಾಗಿದ್ದು, ಅವರಿಗೆ ಅಕಾಡೆಮಿಕ್ ಶಿಕ್ಷಣ ನೀಡಲಾಗುತ್ತಿಲ್ಲ, ಕೇವಲ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ (Islamic Education) ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರೇ (National Children Commission president) ಭೇಟಿ ನೀಡಿ ದೂರು (Taliban Training) ನೀಡಿದ್ದಾರೆ.
ಬೆಂಗಳೂರಿನ ಸೈಯದ್ ನಗರದಲ್ಲಿರುವ ದಾರೂಲ್ ಉಲೂಮ್ ಸಾಧಿಯಾ ಅನಾಥಾಶ್ರಮಕ್ಕೆ (ಯತೀಂ ಖಾನಾ) ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರಾದ ಪ್ರಿಯಾಂಕಾ ಕಾನೂನ್ಗೋ (Priyanka Kanoongo) ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಅನಾಥಾಶ್ರಮದಲ್ಲಿ 200ಕ್ಕೂ ಅಧಿಕ ಮಕ್ಕಳಿದ್ದಾರೆ. ಅವರನ್ನು ಶಾಲೆಗೆ ಕಳುಹಿಸದೇ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಅನಾಥಾಶ್ರಮದಲ್ಲಿ ಮಕ್ಕಳು ತಾಲೀಬಾನ್ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಅನಾಥಾಶ್ರಮಕ್ಕೆ ಭೇಟಿ ನಂತರ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
बंगलुरु,कर्नाटक में दारूल उलूम सैय्यादिया यतीम खाना नाम से अवैध ढंग से चलते हुए एक ग़ैरपंजीकृत अनाथ आश्रम का औचक निरीक्षण किया जिसमें कई अनियमिततायें पायी गयीं।
— प्रियंक कानूनगो Priyank Kanoongo (@KanoongoPriyank) November 20, 2023
यहाँ क़रीब 200 यतीम (अनाथ) बच्चों को रखा गया है।
100 वर्गफ़िट के कमरे में 8 बच्चों का रखा जाता है,ऐसे 5 कमरों में 40… pic.twitter.com/dnp1g8Wj7a
ಅವರು ಬರೆದಿರುವ ಟ್ವೀಟ್‌ನ ಮುಖ್ಯಾಂಶ ಇಲ್ಲಿದೆ
ಇಲ್ಲಿ ಸುಮಾರು 200 ಮಂದಿ ಅನಾಥ ಮಕ್ಕಳಿದ್ದಾರೆ. ಅವರನ್ನು ಅತ್ಯಂತ ಸಣ್ಣ ಪ್ರದೇಶದಲ್ಲಿ ಕೂಡಿ ಹಾಕಲಾಗಿದೆ. ಇಲ್ಲಿನ 100 ಚದರ ಅಡಿಯ ಕೋಣೆಗಳಲ್ಲಿ ಎಂಟು ಮಕ್ಕಳನ್ನು ಕೂಡಿ ಹಾಕಲಾಗುತ್ತಿದೆ. ಇಲ್ಲಿ ಬೆಳಕೂ ಇಲ್ಲ, ಗಾಳಿಯೂ ಇಲ್ಲ. ಐದು ಕೋಣೆಗಳಲ್ಲಿ ಒಟ್ಟು 40 ಮಕ್ಕಳಿದ್ದಾರೆ. ಕಟ್ಟಡದ ಕಾರಿಡಾನಿನಲ್ಲಿ 16 ಮಕ್ಕಳು ಮಲಗುತ್ತಾರೆ. ಬಾಕಿ ಉಳಿದ 150 ಮಕ್ಕಳು ನಮಾಜ್ ಮಾಡುವ ಎರಡು ಪ್ರತ್ಯೇಕ ಹಾಲ್‌ಗಳಲ್ಲಿ ರಾತ್ರಿ ನಿದ್ದೆ ಮಾಡುತ್ತಾರೆ.
ಎಲ್ಲಾ 200 ಮಕ್ಕಳು ದಿನವಿಡೀ ಹಾಲ್‌ನಲ್ಲಿದ್ದು, ಮದರಸಾದ ಇಸ್ಲಾಮಿಕ್ ಶಿಕ್ಷಣವನ್ನು ಪಡೆಯುತ್ತಾರೆ. ಯಾವ ಮಕ್ಕಳನ್ನೂ ಶಿಕ್ಷಣ ಕಲಿಯಲು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಇಲ್ಲಿ ಮಕ್ಕಳಿಗೆ ಆಟವಾಡುವ ಯಾವ ಪರಿಕರವೂ ಇಲ್ಲ. ಸಾಲದ್ದಕ್ಕೆ ಮಕ್ಕಳಿಗೆ ನೋಡಲು ಟಿವಿಯೂ ಇಲ್ಲ.
ಪುಟ್ಟ ಪುಟ್ಟ ಮಕ್ಕಳು ಇಂಥ ಭಯ ಹುಟ್ಟಿಸುವ ಪರಿಸ್ಥಿತಿಯಲ್ಲಿ ಮೌಲ್ವಿಗಳು ಯಾವಾಗ ಬರುತ್ತಾರೋ ಎಂದು ಆತಂಕದಿಂದಲೇ ಕಾಯುತ್ತಾರೆ. ಬಂದ ಕೂಡಲೇ ಎದ್ದು ನಿಂತು ಕಣ್ಣು ಮುಚ್ಚುತ್ತಾರೆ. ಬೆಳಗ್ಗೆ 3.30ಕ್ಕೇ ಏಳುವ ಈ ಮಕ್ಕಳು ಮದರಸಾ ಶಿಕ್ಷಣವನ್ನು ಪಡೆಯುತ್ತಾರೆ. ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಾರೆ.
ಸಂಜೆಯಿಂದ ರಾತ್ರಿಯವರೆಗೆ ಮತ್ತು ಮದರಸಾ ಶಿಕ್ಷಣ ಕಲಿಸಲಾಗುತ್ತದೆ. ದಿನದಲ್ಲಿ ಆಗಾಗ ನಮಾಜ್‌ಗಾಗಿ ಬ್ರೇಕ್‌ಗಳಿರುತ್ತವೆ. ಆದರೆ, ವಿಶ್ರಾಂತಿ, ಮನೋರಂಜೆ, ಆಟ ಇವುಗಳಿಗೆ ಅವಕಾಶವೇ ಇಲ್ಲ. ಯಾವುದಕ್ಕೂ ಜಾಗವೂ ಇಲ್ಲ. ಅವರು ಮಸೀದಿಯಲ್ಲೇ ಇರಬೇಕು, ಹೊರಗೆ ಹೋಗುವಂತಿಲ್ಲ.
ಸಾವಿರಾರು ಮಂದಿ ಈ ಅನಾಥಾಶ್ರಮವನ್ನು ಚೆನ್ನಾಗಿ ನಡೆಸಲೆಂದು ದಾನ ಮಾಡಿರುತ್ತಾರೆ. ಆದರೆ, ಅವರ ಕಲ್ಪನೆಯ ಯತೀಂ ಖಾನಾವೇ ಬೇರೆ. ಇಲ್ಲಿರುವ ಯತೀಂ ಖಾನಾವೇ ಬೇರೆ. ಎಲ್ಲರೂ ತಿಳಿಯುವ ಪ್ರಕಾರ ಯತೀಂ ಖಾನಾದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾರೆ. ಆದರೆ, ಈ ಮಕ್ಕಳು ಮಧ್ಯಯುಗದ ತಾಲಿಬಾನಿ ಬದುಕನ್ನು ಅನುಭವಿಸುತ್ತಿದ್ದಾರೆ. ಇವರ ಪಾಲಿಗೆ ಜೀವನನೇ ಇಲ್ಲ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ ಮತ್ತು ಸಂವಿಧಾನದ ಉಲ್ಲಂಘನೆ.
ಇದನ್ನೂ ಓದಿ: Child Labour : ತೆಂಗು ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ಬಂಧಿ; ಮಕ್ಕಳ ಆಯೋಗದಿಂದ ರಕ್ಷಣೆ
ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರಾದ ಪ್ರಿಯಾಂಕಾ ಕಾನೂನ್ಗೋ ಅವರು ಇಲ್ಲಿಗೆ ಭೇಟಿ ನೀಡಿದ ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದಾರೆ. ವರದಿಯನ್ನು ಕೇಳಿದ್ದಾರೆ.
ಆರೋಪ ನಿರಾಕರಿಸಿದ ಸ್ಥಳೀಯರು
ಈ ನಡುವೆ, ಸ್ಥಳೀಯರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅನಾಥ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಎಲ್ಲ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿದೆ. ಕೇವಲ ಹೊರನೋಟಕ್ಕೆ ಕಂಡಿದ್ದನ್ನೇ ಸತ್ಯ ಎಂದು ಹೇಳುತ್ತಾ ತಾಲಿಬಾನ್ ಮಾದರಿ ಶಿಕ್ಷಣ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದು ಸಾರ್ವಜನಿಕರ ನೆರವಿನಿಂದ ನಡೆಯುತ್ತಿರುವ ಸಂಸ್ಥೆಯಾಗಿದೆ. ಎಲ್ಲ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿದೆ. ಹೆತ್ತವರು ವಿಶ್ವಾಸದಿಂದ ಇಲ್ಲಿಗೆ ಕಳುಹಿಸುತ್ತಿದ್ದಾರೆ. ಇಲ್ಲಿ ರಾಷ್ಟ್ರೀಯ ಅಧ್ಯಕ್ಷರು ಹೇಳುವಂತೆ ಯಾವುದೇ ಶಸ್ತ್ರಾಸ್ತ್ರ ತರಬೇತಿ ಕೊಡುತ್ತಿದ್ದೇವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.