ಕೋಲಾರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಗಲಿ ಸರಿಸುಮಾರು 2 ವರ್ಷಕ್ಕೆ ಬಂದರೂ ಅಭಿಮಾನಿಗಳು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ಅವರ ಆರಾಧನೆಯನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ನಡುವೆ ತಮಿಳುನಾಡಿನ ಯುವಕನೊಬ್ಬ ಅಪ್ಪಟ ಅಪ್ಪು ಅಭಿಮಾನಿ (Appu Fans) ಆಗಿದ್ದು, ಪುನೀತ್ ಸಲುವಾಗಿ ತಮಿಳುನಾಡಿನಿಂದ ಸೈಕಲ್ ಪ್ರಯಾಣವನ್ನು (Bicycle journey) ಆರಂಭಿಸಿದ್ದು, ದೇಶ ಪರ್ಯಟನೆಯನ್ನು (country Travel) ಮಾಡುತ್ತಿದ್ದಾನೆ.
ಮುತ್ತುಸಲ್ವನ್ (Tamilian Muthusalvan) ಎಂಬ ಪುನೀತ್ ಅಭಿಮಾನಿ ಈಗ ಸೈಕಲ್ ಮೂಲಕ ದೇಶ ಸುತ್ತುತ್ತಿರುವ ಯುವಕ. ಸೈಕಲ್ (Cycle Trip) ಮೂಲಕವೇ ದೇಶವನ್ನು ಸುತ್ತುವ ಸಂಕಲ್ಪ ಮಾಡಿರುವ ಮುತ್ತುಸಲ್ವನ್, 3 ವರ್ಷದಲ್ಲಿ ಸಂಪೂರ್ಣವಾಗಿ ಸಂಚರಿಸುವ ಗುರಿಯನ್ನು ಹಾಕಿಕೊಂಡಿದ್ದಾನೆ.
ಇದನ್ನೂ ಓದಿ: Viral News : ಹಿಂದು ದೇವತೆಗಳಿಗೆ ಸೂ.. ಮಗನ್ ಎಂದು ಪೋಸ್ಟ್ ಮಾಡಿದ ಸ್ವಾಭಿಮಾನಿ ಸ್ವಾಮಿ!
ಈಗಾಗಲೇ 1954 ಕಿಲೋ ಮೀಟರ್ ಸಂಚಾರವನ್ನು ಪೂರ್ಣಗೊಳಿಸಿದ್ದು, ಶನಿವಾರ (ಜುಲೈ 15) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣಕ್ಕೆ ಭೇಟಿ ನೀಡಿದ್ದಾನೆ.
ಶ್ರೀನಿವಾಸಪುರ ತಾಲೂಕಿನ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ (Puneeth Rajkumar Fans Association) ವತಿಯಿಂದ ಅಪ್ಪು ಅಭಿಮಾನಿಯಾಗಿರುವ ಮುತ್ತುಸಲ್ವನ್ಗೆ ಸನ್ಮಾನಿಸಿ ಗೌರವಿಸಲಾಗಿದೆ. ಅಲ್ಲದೆ, ಅಲ್ಪ ಪ್ರೋತ್ಸಾಹ ಧನವನ್ನೂ ನೀಡಲಾಗಿದೆ.
ಪುನೀತ್ ಕನ್ನಡಕ ನೀಡಿರುವ ಅಶ್ವಿನಿ ಪುನೀತ್
ಈ ವೇಳೆ ಮಾತನಾಡಿದ ಮುತ್ತುಸಲ್ವನ್, ಪುನೀತ್ ಅಭಿಮಾನಿಯಾಗಿರುವ ನಾನು ಸೈಕಲ್ ಯಾತ್ರೆಯನ್ನು ಆರಂಭಿಸಿರುವ ಬಗ್ಗೆ ಮಾಹಿತಿಯನ್ನು ಪಡೆದಿದ್ದ ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ನನ್ನನ್ನು ಕರೆಸಿಕೊಂಡಿದ್ದರು. ಅವರು ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ನ ಗಂಧದ ಗುಡಿ ಚಿತ್ರದ ಟೀ ಶರ್ಟ್ ಹಾಗೂ ಪುನೀತ್ ಬಳಕೆ ಮಾಡಿದ್ದ ಜೇಮ್ಸ್ ಚಿತ್ರದ ಕನ್ನಡಕವನ್ನು ನೀಡಿ ಶುಭ ಹಾರೈಸಿದ್ದರು ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: Gruha Lakshmi Scheme : ಜುಲೈ 17 ಇಲ್ಲವೇ 19ಕ್ಕೆ ಗೃಹಲಕ್ಷ್ಮಿಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್
ನಾನು ಈಗಾಗಲೇ ಬಹಳಷ್ಟು ರಾಜ್ಯಗಳನ್ನು ಸುತ್ತಿದ್ದೇನೆ. ಎಲ್ಲ ರಾಜ್ಯಗಳಲ್ಲಿಯೂ ರಾಜಕುಮಾರ್ ಕುಟುಂಬದ (Rajkumar family) ಅಭಿಮಾನಿಗಳಿದ್ದು, ಉತ್ತಮ ರೀತಿಯಲ್ಲಿ ನನಗೆ ಶುಭ ಹಾರೈಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನನಗೆ ಖುಷಿಯಾಗುತ್ತಿದೆ. ಈಗ ಕೋಲಾರಕ್ಕೆ ಬಂದಿದ್ದೇನೆ. ಇಲ್ಲೂ ಸಹ ನನ್ನನ್ನು ಖುಷಿಯಿಂದ ನೋಡಿಕೊಂಡಿದ್ದಾರೆ ಎಂದು ಮುತ್ತುಸಲ್ವನ್ ಮಾಧ್ಯಮಗಳ ಮುಂದೆ ಸಂತೋಷವನ್ನು ಹಂಚಿಕೊಂಡಿದ್ದಾನೆ. ಅಲ್ಲದೆ, ಅಲ್ಪಸ್ವಲ್ಪ ಕನ್ನಡವನ್ನೂ ಮಾತನಾಡುವ ಈತ ಪುನೀತ್ ಬಗ್ಗೆ ಭಾರಿ ಅಭಿಮಾನವನ್ನು ಹೊಂದಿದ್ದಾನೆ.