Site icon Vistara News

ರಾಷ್ಟ್ರೋತ್ಥಾನದ ʼತಪಸ್, ಸಾಧನಾ-2022ʼಕ್ಕೆ ಅರ್ಜಿ ಆಹ್ವಾನ

sing

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಗಂಡು ಮಕ್ಕಳಿಗೆ ಪಿಯುಸಿ (PUC) ಶಿಕ್ಷಣ ಹಾಗೂ ಐಐಟಿ-ಜೆಇಇ (IIT-JEE)ಗೆ ಸಂಬಂಧಿಸಿ ಉಚಿತ ತರಬೇತಿ ಮತ್ತು ಹೆಣ್ಣು ಮಕ್ಕಳಿಗೆ ಪಿಯುಸಿ (PUC) ಶಿಕ್ಷಣ ಹಾಗೂ ನೀಟ್‌ (NEET) ತರಬೇತಿ ಅಥವಾ ಇಂಟಿಗ್ರೇಟೆಡ್‌ ಬಿಎಸ್‌ಸಿ, ಬಿ.ಇಡಿ (Integrated BSc BEd) ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.

ಬಿಎಎಸ್‌ಇ (BASE) ಸಂಸ್ಥೆಯ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತಿದ್ದು, ಜತೆಗೆ ಉಚಿತ ಊಟ-ವಸತಿ ಸೌಲಭ್ಯವಿರಲಿದೆ. ಅಲ್ಲದೆ, ಯೋಗ, ಧ್ಯಾನ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಲಾಗುವುದು.

ತಪಸ್- ಗಂಡು ಮಕ್ಕಳಿಗೆ
– 2 ವರ್ಷದ ಪಿಯುಸಿ (CBSE) ಶಿಕ್ಷಣ ಹಾಗೂ ಐಐಟಿ-ಜೆಇಇ ತರಬೇತಿ

ಸಾಧನಾ- ಹೆಣ್ಣು ಮಕ್ಕಳಿಗೆ
– ಸಾಧನಾ ನೀಟ್‌ (ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗಾಗಿ): 2 ವರ್ಷದ ಪಿಯುಸಿ (CBSE) ಶಿಕ್ಷಣ ಹಾಗೂ NEET ತರಬೇತಿ
– ಸಾಧನಾ ಶಿಕ್ಷಣ (ಒಟ್ಟು 6 ವರ್ಷ): 2 ವರ್ಷದ ಪಿಯುಸಿ (CBSE) ಶಿಕ್ಷಣ ಹಾಗೂ 4 ವರ್ಷದ ಇಂಟಿಗ್ರೇಟೆಡ್‌ ಬಿಎಸ್‌ಸಿ, ಬಿಇಡಿ ಶಿಕ್ಷಣ

ಯಾರು ಅರ್ಜಿ ಸಲ್ಲಿಸಬಹುದು?

2022ರ ಡಿಸೆಂಬರ್ 10ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್- www.tapassaadhana.org. ಅಲ್ಲದೆ, ಮೊಬೈಲ್‌ ಸಂಖ್ಯೆ: 94812 01144/ 9844602529/ 7975913828ಗೆ ಸಂಪರ್ಕಿಸಬಹುದು.

ಇದನ್ನೂ ಓದಿ | KSP Recruitment 2022 | 3,484 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ 15 ವಿಷಯ ಗಮನಿಸಿ

Exit mobile version