Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಕ್ಕೆ ಬಂದಿದ್ದ ಮಂಡ್ಯ ಜಿಲ್ಲೆಯ ಶಿಕ್ಷಕ ಹೃದಯಾಘಾತದಿಂದ ಮೃತ್ಯು

ಸಾಹಿತ್ಯ ಸಮ್ಮೇಳನ ನಿಧನ

ಹಾವೇರಿ: ಹಾವೇರಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ (ಕನ್ನಡ ಸಾಹಿತ್ಯ ಸಮ್ಮೇಳನ) ಕಹಿ ಸುದ್ದಿಯೊಂದು ಬಂದಿದೆ. ಸಮ್ಮೇಳನಕ್ಕೆ ಬಂದಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಹಿತ್ಯ ಸಮ್ಮೇಳನ ಶುರುವಾಗುವ ಮೊದಲೇ ಅಂದರೆ ಜನವರಿ 5ರಂದು ಹಾವೇರಿಗೆ ಬಂದಿದ್ದ ೩೪ ವರ್ಷದ ಸಂಗನ ಗೌಡರ ಎಂಬ ಶಿಕ್ಷಕರು ಮೃತಪಟ್ಟವರು. ಜನವರಿ ೫ರಂದು ಸಾಯಂಕಾಲ 7.30ಕ್ಕೆ ಬಂದಿದ್ದ ಶಿಕ್ಷಕನಿಗೆ ರಾತ್ರಿ 12 ಗಂಟೆಗೆ ಹೃದಯಾಘಾತವಾಗಿದೆ. ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಶಿಕ್ಷಕ ಸಂಗನ ಗೌಡ ಅವರು ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆಯ ಮತ್ತಿಕೇರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರಿಗೆ ಹಾವೇರಿಯ ಅಶ್ವಿನಿ ನಗರದ ಗೆಳಯರ ಬಳಗ ಶಾಲೆಯಲ್ಲಿ ವಾಸ್ತವ್ಯ ಒದಗಿಸಲಾಗಿತ್ತು. ಅಲ್ಲೇ ಹೃದಯಾಘಾತ ಸಂಭವಿಸಿದೆ. ಕೇವಲ ೩೪ ವರ್ಷದ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸಂಗನಗೌಡರ ಸಾವು ಅವರ ಗೆಳೆಯರನ್ನು ಕಂಗೆಡಿಸಿದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆನ್‌ಲೈನ್‌ ಪೇಮೆಂಟ್‌ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು

Exit mobile version