ವಿಜಯಪುರ: ಸಿಂದಗಿ ತಾಲೂಕಿನ ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ (55) ಅವರು ಸಿಂದಗಿ ತಹಶೀಲ್ದಾರ್ ಕಚೇರಿಯ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್‌ಪಿ ಜಿ.ಎನ್ ಪಾಟೀಲ್, ಟಾರ್ಚರ್ ಆತ್ಮಹತ್ಯೆಗೆ ಕಾರಣವೆಂದು ಉಲ್ಲೇಖ ಮಾಡಲಾಗಿದೆ.
ಎಸ್ಎಲ್ ಭಜಂತ್ರಿ ಅವರು ಮುಖ್ಯಶಿಕ್ಷಕ ಹುದ್ದೆಯ ಚಾರ್ಜ್‌ನ್ನು ಶಿಕ್ಷಕ ಬಸವರಾಜ ಅವರಿಗೆ ಬಿಟ್ಟು ಕೊಟ್ಟಿದ್ದರು. ಚಾರ್ಜ್ ಬಿಟ್ಟುಕೊಡುವ ವೇಳೆ ಶಿಕ್ಷಕರ, ಹಾಗೂ ಮಕ್ಕಳ ಹಾಜರಾತಿ, 1ನೇ ನಂಬರ್ ರಿಜಿಸ್ಟರ್ ಹಸ್ತಾಂತರ ಮಾಡಿದ್ದರು. ಆದರೆ, ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮದಿನಾಂಕವುಳ್ಳ 1ನೇ ನಂಬರ್ ರಿಜಿಸ್ಟರ್ ಅಪೂರ್ಣವಾಗಿತ್ತು ಎನ್ನಲಾಗಿದೆ. ʻʻನಾನು ಸಿಆರ್ ಪಿ ಆಗುತ್ತೇನೆ ಆಗಾಗ ಬಂದು 1ನೇ ನಂಬರ್ ರಿಜಿಸ್ಟರ್ ಸರಿಪಡಿಸೋದಾಗಿ ಎಸ್ ಎಲ್ ಭಜಂತ್ರಿ ಹೇಳಿದ್ದರೆನ್ನಲಾಗಿದೆ. ಆದರೆ, ಚಾರ್ಜ್ ಬಿಟ್ಟುಕೊಟ್ಟ ಬಳಿಕ ಅವರು ಸತಾಯಿಸಿದ್ದರುʼʼ ಎನ್ನಲಾಗಿದೆ.
ಈ ನಡುವೆ ಸಿಂದಗಿ ಬಿಇಒ ಎಚ್.ಎಂ. ಹರಿನಾಳ್ ಈ ವಿಚಾರದಲ್ಲಿ ನೋಟಿಸ್ ನೀಡಿ ಹಿಂಸೆ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ. ಭಜಂತ್ರಿ ಅವರು ದಾಖಲೆಗಳನ್ನು ಅಪೂರ್ಣವಾಗಿ ಬಿಟ್ಟುಹೋಗಿರುವ ವಿಚಾರವನ್ನು ಬಿಇಒ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
ಈ ನಡುವೆ, ಸಾಸಾಬಳ ಶಾಲೆಯ ಟಿಜಿಟಿ ಶಿಕ್ಷಕ ಬಿಎಂ ತಳವಾರ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಗ್ರಾಮದ ಸಂಗಮೇಶ್ ಚಿಂಚೋಳಿ ಮೂಲಕ ಆರೋಪಗಳನ್ನು ಮಾಡಿ ಸಿಆರ್ ಪಿ ಹಾಗೂ ಸಂಗಮೇಶ್ ನನ್ನಿಂದ ಹಣ ಪಡೆದಿದ್ದರು ಎಂದೂ ಡೆತ್ ನೋಟ್‌ನಲ್ಲಿ ತಿಳಿಸಲಾಗಿದೆ. ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ಹೇಳಲಾಗಿದೆ.
ಸಂಗಮೇಶ್ ಚಿಂಚೋಳಿ… ಶಿಕ್ಷಕ ಬಸವರಾಜ್ ವಿರುದ್ಧ ಬಿಇಓಗೆ ದೂರು ಕೊಟ್ಟಿದ್ದರು.
ʻʻʻನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ನನ್ನ ಹೆಂಡತಿ ಮತ್ತು ಮಗಳಿಗೆ ನ್ಯಾಯ ಒದಗಿಸಿಕೊಡಬೇಕುʼʼ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ…ಮಾಡಲಾಗಿದೆ.