Site icon Vistara News

Fake Certificate : ನಕಲಿ ಬಿಎಡ್‌ ಅಂಕಪಟ್ಟಿ ಮೂಲಕ ವಾರ್ಡನ್‌ ಹುದ್ದೆಯಿಂದ ಪ್ರಿನ್ಸಿಪಾಲ್‌ ಹುದ್ದೆಗೆ ಜಿಗಿದ ಶಿಕ್ಷಕ?

Dr kallannavar

#image_title

ಧಾರವಾಡ: ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯಲ್ಲಪ್ಪಗೌಡ ಪಿ. ಕಲ್ಲನಗೌಡರ್ ಎಂಬವರು ನಕಲಿ ಅಂಕಪಟ್ಟಿ (Fake Certificate) ಮೂಲಕ ಈ ಹುದ್ದೆಗೇರಿದ್ದಾರೆ ಎಂದು ಆರೋಪಿಸಲಾಗಿದೆ.

ಕಲ್ಲನಗೌಡರ್‌ ಅವರು ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಜಿಗಿದಿದ್ದಾರೆ ಎಂದು ಸಿದ್ದಪ್ಪ ಅಕ್ಕಿ ಎನ್ನುವವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಲ್ಲನಗೌಡರ್‌ ಅವರು ಪ್ರಾಂಶುಪಾಲ ಹುದ್ದೆ ಗಿಟ್ಟಿಸುವ ದುರುದ್ದೇಶದಿಂದ ಉತ್ತರ ಪ್ರದೇಶದ ಸಂಸ್ಥೆಯಿಂದ ಬಿಎಡ್ ನಕಲಿ ಅಂಕಪಟ್ಟಿ ಪಡೆದಿದ್ದಾರೆ ಎನ್ನುವುದು ಅಕ್ಕಿ ಅವರ ಆರೋಪ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟಾನ್ಸ್ ಎಜುಕೇಶನ್ ಕೇಂದ್ರದ ಅಂಕಪಟ್ಟಿ ಪಡೆದಿದ್ದಾರೆ. ಇದು ಸರ್ಕಾರಕ್ಕೆ ಮಾಡಿರುವ ಮೋಸ ಎನ್ನುವುದು ದೂರಿನ ಸಾರಾಂಶ.

ಉತ್ತರ ಪ್ರದೇಶ ರಾಜ್ಯದ ಅಂಕಪಟ್ಟಿ ಮಾನ್ಯತೆ ಇಲ್ಲದೆ ಇದ್ದರೂ, ಅದನ್ನು ಕೊಟ್ಟು 2006ರಲ್ಲಿ ವಾರ್ಡನ್ ಹುದ್ದೆಯಿಂದ ನೇರವಾಗಿ ಪ್ರಾಚಾರ್ಯ ಹುದ್ದೆಗೆ ಜಿಗಿದಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲದೇ 2007-08ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿಎಡ್ ಪದವಿ ಪಡೆದಿದ್ದಾರಂತೆ ಕಲ್ಲನಗೌಡರ್‌. ಅವರು ಎರಡನೇ ಬಾರಿ ಬಿಎಡ್‌ ಪದವಿ ಪಡೆದಿರುವುದು ಹುಬ್ಬಳ್ಳಿಯ ಆಲ್ ಮಿಜಾನ್ ಎಜುಕೇಶನ್ ಅಸೋಸಿಯೇಷನ್ ಕಾಲೇಜಿನಲ್ಲಿ.

ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವತಿ ಸ್ನಾನ ಮಾಡುವಾಗ ಮತ್ತೊಬ್ಬ ಯುವತಿಯಿಂದ ವಿಡಿಯೋ ಚಿತ್ರೀಕರಣ, ದೂರು

ಬೆಂಗಳೂರು: ಕ್ರೀಡಾ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದ ಪಂಜಾಬಿ ಆಟಗಾರ್ತಿಯ ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ದೂರು ದಾಖಲಿಸಲಾಗಿದೆ.

ಸಾಯ್ ಸ್ಪೋರ್ಟ್ಸ್ ಇಂಡಿಯಾದಲ್ಲಿ ಟೆಕ್ವಾಂಡೋ ಆಟದ ತರಬೇತಿಗಾಗಿ ನಗರಕ್ಕೆ ಬಂದ ಪಂಜಾಬಿನ ಯುವತಿ ಇಲ್ಲಿನ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಅದೇ ಹಾಸ್ಟೆಲ್‌ನಲ್ಲಿ ಮತ್ತೊಬ್ಬ ವಾಲಿಬಾಲ್ ಆಟಗಾರ್ತಿ ಕೂಡ ಇದ್ದು, ಪಂಜಾಬಿ ಕ್ರೀಡಾಪಟು ಸ್ನಾನ ಮಾಡುವ ವೇಳೆ ಕದ್ದು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು.

ಈ ವೇಳೆ ಅನುಮಾನಗೊಂಡು ಪಕ್ಕದ ಬಾತ್ ರೂಂನಲ್ಲಿದ್ದ ಯುವತಿಯನ್ನು ಪಂಜಾಬಿ ಕ್ರೀಡಾಪಟು ಪ್ರಶ್ನಿಸಿದಾಗ, ವಾಲಿಬಾಲ್ ಆಟಗಾರ್ತಿ ತಪ್ಪೊಪ್ಪಿಕೊಳ್ಳದೆ ತನ್ನ ಮೊಬೈಲ್ ಒಡೆದು ಹಾಕಿದ್ದಳು. ಈ ಹಿನ್ನೆಲೆಯಲ್ಲಿ ಪಂಜಾಬಿ ಆಟಗಾರ್ತಿ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : Nehru Olekar Case: ನೆಹರೂ ಓಲೆಕಾರ್‌ ಅವರನ್ನು ಶಾಸಕತ್ವದಿಂದ ಇನ್ನೂ ಯಾಕೆ ಅನರ್ಹಗೊಳಿಸಿಲ್ಲ ಎಂದು ಕೇಳಿದ ಹೈಕೋರ್ಟ್!‌

Exit mobile version