Site icon Vistara News

Teacher Romance : ಹೈ ಸ್ಕೂಲ್‌ ಸ್ಟೂಡೆಂಟ್ ಜತೆಗೆ ಹೆಡ್‌ ಮಿಸ್‌ ರೊಮ್ಯಾಂಟಿಕ್‌ ಫೋಟ್‌ ಶೂಟ್‌!

Head Miss Romantic Photo Shoot With High School Student

ಚಿಕ್ಕಬಳ್ಳಾಪುರ: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು (teacher romance with student) ಹದಿಹರೆಯದ ವಿದ್ಯಾರ್ಥಿಯೊಂದಿಗೆ ಮುದ್ದಾಡಿ, ಜತೆಗೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ್ದಾರೆ. ಹೈ ಸ್ಕೂಲ್‌ ವಿದ್ಯಾರ್ಥಿ ಜತೆಗೆ ತೆಗೆದ ಫೋಟೊ, ವಿಡಿಯೊ ವೈರಲ್‌ ಆಗಿದ್ದು, ಮುಖ್ಯ ಶಿಕ್ಷಕಿಯ ವರ್ತನೆಗೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ‌ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಶಾಲೆಯಿಂದ ಮಕ್ಕಳನ್ನು ಪ್ರವಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬಾಕೆ ರೊಮ್ಯಾಂಟಿಕ್‌ ಫೋಟೊ ಶೂಟ್‌ ಮಾಡಿಸಿದ್ದಾರೆ.

ಬಾಲಕನ ಕೆನ್ನೆಗೆ ಮುತ್ತು ಕೊಡುವುದು ಹಾಗೂ ಶಿಕ್ಷಕಿಯ ಸೀರೆ ಸೆರಗು ಎಳೆಯುವುದು, ಶಿಕ್ಷಕಿಯನ್ನು ಮೇಲಕ್ಕೆ ಎತ್ತುವುದು ಹೀಗೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿದ್ದಾರೆ. ವಿದ್ಯಾರ್ಥಿ ಕೂಡ ಶಿಕ್ಷಕಿಯನ್ನು ಮುದ್ದಾಡಿದ್ದು ಈ ಎಲ್ಲ ಫೋಟೊಗಳು ಸೋರಿಕೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತಾನೊಬ್ಬಳು ಗುರು ಎನ್ನುವುದನ್ನೂ ಮರೆತು ವಿದ್ಯಾರ್ಥಿಯೊಂದಿಗೆ ಹೀಗೆ ವರ್ತಿಸಿದ್ದಕ್ಕೆ ಆಕ್ರೋಶಗಳು ವ್ಯಕ್ತವಾಗಿದೆ. ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಸ್‌ಡಿಎಂಸಿ ಸದಸ್ಯರು ಒತ್ತಾಯಿಸಿದ್ದಾರೆ. ಜತೆಗೆ ಶಿಕ್ಷಕಿಯ ಈ ನಡೆಗೆ ಪೋಷಕರು ಕಿಡಿಕಾರಿದ್ದು, ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ತೆರಳಿ ಶಿಕ್ಷಕಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಪ್ಯಾಕೆಟ್‌ನಲ್ಲಿ ಹುಡುಗಿ ಚಿತ್ರದ ಬದಲು ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಫೋಟೋ ಹಾಕಿದ್ದೇಕೆ ಪಾರ್ಲೆ-ಜಿ?

ಹೊಸದಿಲ್ಲಿ: ಬಿಸ್ಕತ್ತು ತಯಾರಿಕೆ ಕಂಪನಿ ಪಾರ್ಲೆ-ಜಿ (Parle-G biscuit) ತನ್ನ ಪ್ಯಾಕೆಟ್‌ನ ಕವರ್‌ನಲ್ಲಿ ಐಕಾನಿಕ್ ಪಾರ್ಲೆ-ಜಿ ಹುಡುಗಿಯ ಬದಲಿಗೆ ಇನ್‌ಸ್ಟಗ್ರಾಂ ಇನ್‌ಫ್ಲುಯೆನ್ಸರ್‌ ಒಬ್ಬನ ಫೋಟೋ ಛಾಪಿಸಿದ ಫೋಟೋವನ್ನು ಹಂಚಿಕೊಂಡು, ಇಂಟರ್‌ನೆಟ್‌ ಬಳಕೆದಾರರು ಹುಬ್ಬೇರುವಂತೆ ಮಾಡಿದೆ.

ಇನ್‌ಸ್ಟಗ್ರಾಂ ಇನ್‌ಫ್ಲುಯೆನ್ಸರ್‌, ಕಂಟೆಂಟ್ ಕ್ರಿಯೇಟರ್ ಝೆರ್ವಾನ್ ಜೆ ಬುನ್‌ಶಾ ಅವರ ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ ಪಾರ್ಲೆ ಜಿ ಈ ತಮಾಷೆ ಪೋಸ್ಟ್ ಹಾಕಿದೆ. ಬುನ್‌ಶಾ ತಮ್ಮ ಇತ್ತೀಚಿನ ಒಂದು ವಿಡಿಯೋದಲ್ಲಿ ಒಂದು ಪ್ರಶ್ನೆ ಹಾಕಿದ್ದರು. “ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ನೀವು ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಎಂದು ಕರೆಯುತ್ತೀರಾ?” ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದರು. ಜೊತೆಗೆ ಗೊಂದಲದ ಮುಖಭಾವದೊಂದಿಗೆ ಕಾರಿನಲ್ಲಿ ಕುಳಿತಿರುವ ವಿಡಿಯೋ ಕ್ಲಿಪ್.‌ ಬ್ಯಾಕ್‌ಗ್ರೌಂಡ್‌ನಲ್ಲಿ ಅನಿಲ್ ಕಪೂರ್ ಅವರ ಚಲನಚಿತ್ರ ʼರಾಮ್ ಲಖನ್’ನ ʼಏ ಜೀ ಊ ಜೀ’ ಟ್ರ್ಯಾಕ್ ಹಿನ್ನಲೆಯಲ್ಲಿ ಪ್ಲೇ ಆಗುತ್ತಿತ್ತು.

ಮೂರು ದಿನಗಳ ಹಿಂದೆ ಬುನ್‌ಶಾ ಹಂಚಿಕೊಂಡ ಈ ವೀಡಿಯೊ Instagram ಬಳಕೆದಾರರಿಂದ ತಿಳಿಹಾಸ್ಯದ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸಿ ವೈರಲ್ ಆಗಿದೆ. ಈ ವೀಡಿಯೊ ಪಾರ್ಲೆ-ಜಿಯ ಗಮನವನ್ನು ಸೆಳೆದಿದೆ. ಬಿಸ್ಕತ್‌ ತಯಾರಕ ಕಂಪನಿ ಹಾಸ್ಯದ ಕಾಮೆಂಟ್‌ನೊಂದಿಗೆ ಈ ವಿನೋದದಲ್ಲಿ ಪಾಲ್ಗೊಂಡಿತು. “ಬುನ್‌ಶಾ ಜೀ, ನೀವು ನಮ್ಮನ್ನು OG ಎಂದು ಕರೆಯಬಹುದು” ಎಂದು ಕಾಮೆಂಟ್ ಮಾಡಿದೆ. ಜತೆಗೆ, ಪಾರ್ಲೆ-ಜಿ ಬಿಸ್ಕೆಟ್ ಹೊದಿಕೆಯ ಮೇಲೆ ಮುದ್ದು ಹುಡುಗಿಯ ಚಿತ್ರದ ಬದಲಿಗೆ ಬುನ್‌ಶಾ ಅವರ ನಗುತ್ತಿರುವ ಚಿತ್ರವನ್ನು ಸಹ ಮುದ್ರಿಸಿ ಪ್ರಕಟಿಸಿತು. “ಪಾರ್ಲೆ-ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ನೀವು ಲೆಕ್ಕಾಚಾರ ಮಾಡುವಾಗ, ಒಂದು ಕಪ್ ಚಾಯ್‌ನೊಂದಿಗೆ ಆನಂದಿಸಲು ನಿಮ್ಮ ನೆಚ್ಚಿನ ಬಿಸ್ಕತ್ತು ಎಂದು ನೀವು ನಮಗೆ ಕರೆಯಬಹುದು. ಏನು ಹೇಳುತ್ತೀರಿ ಬುನ್‌ಶಾ ಜೀ?” ಎಂದು ಕ್ಯಾಪ್ಷನ್‌ ನೀಡಿತು.

ಪಾರ್ಲೆಜಿಯ ಪ್ರತಿಕ್ರಿಯೆಯಿಂದ ಆನಂದಿತರಾದ ಬುನ್‌ಶಾ ಅವರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. “ಯಾವುದೇ ವಿಹಾರ, ಪಾರ್ಟಿ, ಕೂಟ, ಬಯಕೆ, ಫ್ಯಾನ್ಸಿ ಕೇಕ್‌ಗಳಲ್ಲಿ ಕೂಡ ಬಾಲ್ಯದಲ್ಲಿ ಪಾರ್ಲೆ ಜಿ ಯಾವಾಗಲೂ ನನ್ನ ಜೊತೆಗೇ ಇತ್ತು. ನಾನು ಚಿಕ್ಕವನಿದ್ದಾಗ ಬಿಸ್ಕತ್ತುಗಳನ್ನು ತಿನ್ನುತ್ತ ನಾನು ಬುದ್ಧಿವಂತನಾಗುತ್ತೇನೆ ಎಂದು ಭಾವಿಸಿದೆ. ಅದನ್ನು ನೀವು ಸಾಬೀತುಪಡಿಸಿದಿರಿ” ಎಂದು ಅವರು ಬರೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version