Site icon Vistara News

Mangalore News: ರಾಮನ ಅವಹೇಳನ ಮಾಡಿದ್ದ ಕ್ರೈಸ್ತ ಶಿಕ್ಷಕಿ ಸಸ್ಪೆಂಡ್‌; ಕುಣಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Teacher suspended

ಮಂಗಳೂರು: ಹಿಂದು ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಗರದ (Mangalore News) ಸಂತ ಜೆರೊಸಾ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಅಮಾನತು ಮಾಡಿದೆ.

ಸಂತ ಜೆರೋಸಾ ಶಾಲೆಯ ಶಿಕ್ಷಕಿಯಿಂದ ಹಿಂದು ಧರ್ಮಕ್ಕೆ ಅವಮಾನವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಗರದ ಉರ್ವ ಬಳಿಯಿರುವ ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗ ವಿಶ್ವ ಹಿಂದು ಪರಿಷತ್‌, ಬಜರಂಗದಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಶಾಸಕ ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಮತ್ತಿತರರು ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಇನ್ನು ಶಾಲೆ ಬಳಿ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಈ ಪ್ರಕರಣ ಇತ್ಯರ್ಥವಾಗುವ ತನಕ ಅಧಿವೇಶನಕ್ಕೆ ಹೋಗಲ್ಲ. ಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಹೋರಾಟಕ್ಕೆ ಸಿದ್ಧ. ಇದಕ್ಕೆಲ್ಲ ನೇರ ಹೊಣೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಹೀಗಾಗಿ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಆಗಮಿಸಿ, ಶಿಕ್ಷಕಿಯನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ.

ಶಾಲಾ ಮುಖ್ಯ ಶಿಕ್ಷಕಿ ಅನಿತಾ ಮಾತನಾಡಿ, ಪ್ರಕರಣದ ತನಿಖೆಯ ಅಂತಿಮ ಅದೇಶಕ್ಕೆ ಬದ್ಧರಾಗಿದ್ದೇವೆ. ಈಗಾಗಲೇ ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಲಾಗಿದ್ದು, ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಸಂಸ್ಥೆ ಸಹಕರಿಸುತ್ತದೆ. ಸಾಂವಿಧಾನಿಕವಾಗಿ ಕಾನೂನು ಕ್ರಮವನ್ನು ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಆಪಾದನೆ ಹಿನ್ನೆಲೆಯಲ್ಲಿ ತನಿಖೆ ವೇಳೆ ಹೋರಾಟದ ಘಟನೆ ನಡೆದಿದೆ. ಇದೀಗ ಶಾಲೆಯವರು ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆಗೆ ಎಲ್ಲರೂ ಸಹಕರಿಸಬೇಕು. ಶೀಘ್ರ ತನಿಖೆ ಪೂರ್ಣಗಳ್ಳುತ್ತದೆ, ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಿ ಎಂದು ಕೋರಿದ್ದಾರೆ.

ಇದನ್ನೂ ಓದಿ | Delhi Farmers Protest: ಡೆಲ್ಲಿ ಪ್ರತಿಭಟನೆಗೆ ಹೊರಟಿದ್ದ ಹುಬ್ಬಳ್ಳಿ ರೈತರ ಸೆರೆ; ಮಧ್ಯಪ್ರದೇಶ ಸರ್ಕಾರದ ಕ್ರಮಕ್ಕೆ ಸಿಎಂ ಕಿಡಿ

ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತುಗೊಂಡ ವಿಷಯ ತಿಳಿದ ಕೂಡಲೇ ಶಾಲೆಯಿಂದ ಅಮಾನತು ಶಾಲೆಯಿಂದ ಹೊರ ಬಂದ ವಿದ್ಯಾರ್ಥಿಗಳು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ವೇಳೆ ಶಿಕ್ಷಕಿ ಪ್ರಭಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.

ಶ್ರೀ ರಾಮ ಬರೀ ಕಲ್ಲು, ಹಿಂದು ಧರ್ಮಕ್ಕೆ ದಿಕ್ಕು ದೆಸೆಯಿಲ್ಲ ಎಂದಿದ್ದ ಕ್ರೈಸ್ತ ಶಿಕ್ಷಕಿ

Communal Hatred Mangalore

ಕಲ್ಲನ್ನು ಅಲಂಕಾರ ಮಾಡಿ ಇವನು ಶ್ರೀ ರಾಮ ಎಂದರೆ ಅವನೇನು ಅಲ್ಲಿ ಬಂದು ಕುಳಿತುಕೊಳ್ಳುತ್ತಾನಾ? (Sri Rama is a stone) ಹಿಂದು ಧರ್ಮಕ್ಕೆ ಬೇರೆ ದೇಶಗಳಲ್ಲಿ ಅಸ್ತಿತ್ವವೇ ಇಲ್ಲ.. ಹೀಗೆ ಶ್ರೀರಾಮ, ಹಿಂದು ಧರ್ಮ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಕ್ರೈಸ್ತ ಶಿಕ್ಷಕಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾಯಕವೇ ಪೂಜೆ (Work is Worship) ಎಂಬ ವಿಚಾರದಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಅದನ್ನು ಬಿಟ್ಟು ಹಿಂದು ದ್ವೇಷವನ್ನು (Communal Hatred) ಕಾರಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ಮಂಗಳೂರಿನ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿಸ್ಟರ್‌ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶನಿವಾರ ಕೂಡ ಮಕ್ಕಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ದರು. ಶಾಲೆಯ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು ಸಿಸ್ಟರ್‌ ಪ್ರಭಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಅವಹೇಳನ ಮಾಡಿದ್ದು ಯಾಕೆ?

ಶುಕ್ರವಾರದ ದಿನ ಸಿಸ್ಟರ್‌ ಪ್ರಭಾ ಅವರು ಏಳನೇ ಕ್ಲಾಸಿನ ಮಕ್ಕಳಿಗೆ ಕಾಯಕವೇ ಪೂಜೆ (Work is worship) ಎಂಬ ವಿಚಾರದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಆದರೆ, ಮಾತನಾಡುವ ಭರದಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ, ರಾಮನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ʻʻನಿಮಗೆ ಮಸೀದಿ ಒಡೆದು ರಾಮಮಂದಿರ ಕಟ್ಟುವ ಅಗತ್ಯ ಇದೆಯಾ, ನೀವು ಕಲ್ಲನ್ನು ಅಲಂಕಾರ ಮಾಡಿ ಅಲ್ಲಿ ಕೂರಿಸಿದ್ದೀರಿ. ಏನು ರಾಮ ಬಂದು ಅದರಲ್ಲಿ ಕುಳಿತುಕೊಳ್ತಾನಾ? ನೀವು ಯಾಕೆ ದೇವಸ್ಥಾನಕ್ಕೆ ಹೋಗ್ತೀರಾ? ಅಲ್ಲಿ ಇರುವುದು ಕಲ್ಲು. ನಿಮಗೆ ಹಿಂದುಗಳಿಗೆ ಅಸ್ತಿತ್ವವೇ ಇಲ್ಲ. ನೀವು ಎಲ್ಲಿದ್ದೀರಿ? ನಿಮ್ಮ ಮೂಲ ಏನು ಎಂಬುದು ನಿಮಗೆ ಗೊತ್ತಿಲ್ಲ. ಭಾರತದಲ್ಲಿ ಮಾತ್ರ ಹಿಂದೂ ಹಿಂದೂ ಅಂತ ಹೇಳ್ತೀರಿ. ಬೇರೆ ಎಲ್ಲಿಯೂ ನೀವು ಇಲ್ಲʼʼ ಎಂದು ಶಿಕ್ಷಕಿ ಪ್ರಭಾ ಏಳನೇ ಕ್ಲಾಸ್‌ ಮಕ್ಕಳಿಗೆ ಬೋಧನೆ ಮಾಡಿದ್ದರು.

ಇದನ್ನೂ ಓದಿ | Amit Shah: ಅಯೋಧ್ಯೆಯಲ್ಲಿ ಸುತ್ತೂರು ಮಠ ಶಾಖೆ; ಅಮಿತ್ ಶಾ ಸಂತಸ

ಗೋದ್ರಾ ಹತ್ಯೆಯ ಸಮಯದಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದವರು ನರೇಂದ್ರ ಮೋದಿ. ದಂಡ ಪಿಂಡಗಳನ್ನು ಕೊಂಡು ಹೋಗಿ ಬಾಂಬ್ ಹಾಕಿದ್ದು ಮೋದಿಯವರು. ಅದರಲ್ಲಿ ಸತ್ತವರು ಮುಸ್ಲಿಮರು. ಒಬ್ಬ ಬಸುರಿ ಮಹಿಳೆಯನ್ನು ಕೊಂದು ಹಾಕಿದ್ದರು. 12 ಜನ ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದರು. ಮುಸ್ಲಿಂ ಮಕ್ಕಳನ್ನು ತಲೆಗೆ ಕಲ್ಲು ಹೊಡೆದು ಕೊಂದಿದ್ದಾರೆ, ನೀವು ಹಿಂದುಗಳು ನೀಚರು ಎಂದೆಲ್ಲ ಆಕೆ ಮಕ್ಕಳ ಜತೆ ಮಾತನಾಡುತ್ತಾ ಹೇಳಿದ್ದರೆನ್ನಲಾಗಿದೆ. ಹೀಗಾಗಿ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮವಾಗಿದೆ.

Exit mobile version