Site icon Vistara News

Harrassment Case : ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಮೆಸೇಜ್‌; ಕಾಮುಕ ಶಿಕ್ಷಕನ ಮೇಲೆ ಕೇಸ್!

Mallaradhya- tumkur teacher

ತುಮಕೂರು: ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಕೆಲವು ಶಿಕ್ಷಕರು ಲೈಂಗಿಕ ದೌರ್ಜನ್ಯ (Harrassment case) ನಡೆಸಿದ ಘಟನೆಗಳನ್ನು ಕೇಳಿದ್ದೇವೆ. ಇವರಿಗೆ ಊರಿನವರೇ ಚೆನ್ನಾಗಿ ಹೊಡೆದು ಬುದ್ಧಿ ಕಲಿಸಿರುವುದು, ಪೊಲೀಸರಿಗೆ ದೂರು ನೀಡಿರುವ ವಿದ್ಯಮಾನಗಳು ಸಾಕಷ್ಟು ನಡೆದಿವೆ. ಆದರೆ, ಇಲ್ಲಿ ನಡೆದಿರುವುದು ಸ್ವಲ್ಪ ಡಿಫರೆಂಟ್‌ ಕತೆ. ಇಲ್ಲಿ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಯ ತಾಯಿಯನ್ನೇ (students mother) ಕಾಡಲು ಶುರು ಮಾಡಿದ್ದಾನೆ.

ತುಮಕೂರಿನ ಮಠವೊಂದಕ್ಕೆ ಸೇರಿದ ಶಾಲೆಯಲ್ಲಿ ಶಿಕ್ಷಕನಾಗಿರುವ ಮಲ್ಲಾರಾಧ್ಯ ಎಂಬಾತನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಬೆಂಗಳೂರು ಮೂಲದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಈ ಮಹಿಳೆಯ ಮಗ ಮಠದ ಶಾಲೆಯಲ್ಲಿ ಕಲಿಯುತ್ತಿದ್ದಾನೆ ಎನ್ನಲಾಗಿದೆ. ಶಿಕ್ಷಣದ ಉದ್ದೇಶದಿಂದ ಮನೆಯವರ ಮೊಬೈಲ್‌ ನಂಬರನ್ನು ಶಾಲೆಗೆ ಕೊಟ್ಟಿರುತ್ತೇವಲ್ಲ.. ಅದನ್ನು ಬಳಸಿಕೊಂಡು ಆತ ಬಾಲಕನ ತಾಯಿಯ ಜತೆ ಸರಸಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.

ಆರಂಭದಲ್ಲಿ ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಮಹಿಳೆಯ ಜತೆ ಮೊಬೈಲ್‌ನಲ್ಲಿ ಚರ್ಚೆ ಶುರು ಮಾಡಿರುವ ಈ ಶಿಕ್ಷಕ ಮುಂದೆ ಸಾಗುತ್ತಿದ್ದಂತೆಯೇ ಟ್ರ್ಯಾಕ್‌ ಬದಲಿಸಿರುವ ಸಾಧ್ಯತೆಗಳಿವೆ.

ಈ ಶಿಕ್ಷಕ ತನಗೆ ಅವಾಚ್ಯ ಹಾಗು ಅಸಹ್ಯವಾದ ಲೈಂಗಿಕ ಉದ್ದೇಶದ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಿರುವ ಮಹಿಳೆ, ಲೈಂಗಿಕವಾಗಿ ಸಹಕರಿಸದಿದ್ದರೆ ಮಗನ ಭವಿಷ್ಯ ಹಾಳು ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಾನು ಹೇಳಿದಂತೆ ಕೇಳದೇ ಹೋದರೆ ಮಗನನ್ನು ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್‌ ಸೇರಿ ಐವರ ಸೆರೆ

ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದಡಿ ಐಪಿಸಿ ಸೆಕ್ಷನ್ 1860 (U/s-354(A),506) ಅಡಿಯಲ್ಲಿ ಶಿಕ್ಷಕನ ಮೇಲೆ ದೂರು ದಾಖಲಾಗಿದೆ.

ಖಾಸಗಿ ಬಸ್ ಪಲ್ಟಿ; ಚಾಲಕ, ಪ್ರಯಾಣಿಕ ಸ್ಥಳದಲ್ಲೆ ದುರ್ಮರಣ

ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೆ (Road Accident) ಉಸಿರು ಚೆಲ್ಲಿದ್ದಾರೆ. ಸದಾನಂದ ಬೆಳಗಾವ್ (50), ವೀರಬಸಪ್ಪ (22) ಮೃತ ದುರ್ದೈವಿಗಳು.

ಬಸ್‌ ಬೆಂಗಳೂರಿನಿಂದ ಮಿರಜ್ ಕಡೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಪರಿಣಾಮ ಬಸ್‌ ಏಕಾಏಕಿ ಪಲ್ಟಿಯಾಗಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Exit mobile version