Site icon Vistara News

OTP Scam: ಆನ್‌ಲೈನ್‌ನಲ್ಲಿ ಹಳೆ ಬೆಡ್ ಮಾರಲು ಹೋಗಿ 68 ಲಕ್ಷ ರೂ. ಕಳೆದುಕೊಂಡ ಟೆಕ್ಕಿ!

Techie from bengaluru loses rs 68 lakh to OTP Scam while selling bed on olx

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ (Cyber Fraud) ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯ ನಂಬರ್, ಪಾಸ್ವರ್ಡ್, ಒಟಿಪಿಗಳನ್ನು (OTP Scam) ಷೇರ್ ಮಾಡಿಕೊಳ್ಳಬೇಡಿ ಎಂಬ ಕುರಿತು ಬ್ಯಾಂಕುಗಳು ಸಾಕಷ್ಟು ಜಾಗೃತಿ ಮಾಡುತ್ತಿವೆ. ಹಾಗಿದ್ದೂ, ಎಂಜಿನಯರ್‌ಗಳಂಥವರೇ ಈ ಒಟಿಪಿ ಸ್ಕ್ಯಾಮ್‌ಗೆ ಒಳಗಾಗುತ್ತಿದ್ದಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ದೊರೆತಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು (Bengaluru Techie) ತಮ್ಮ ಹಳೆಯ ಬೆಡ್ (Old bed) ಅನ್ನು ಆನ್‌ಲೈನ್ ಮೂಲಕ (Selling on OLX) ಮಾರಾಟ ಮಾಡಲು ಹೋಗಿ, 68 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ!

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, 39 ವರ್ಷದ ಎಂಜಿನಿಯರ್ ತನ್ನ ಹಾಸಿಗೆಯನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದರು. ಅದಕ್ಕಾಗಿ ಜಾಹೀರಾತನ್ನು ಪೋಸ್ಟ್ ಮಾಡಿದ್ದರು. ಆಗ ಪೀಠೋಪಕರಣ ಅಂಗಡಿಯ ಮಾಲೀಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಬಳಸಿದ ಹಾಸಿಗೆಯನ್ನು 15,000 ರೂ.ಗೆ ಖರೀದಿಸಲು ಒಪ್ಪಿಕೊಂಡಿದ್ದಾರೆ. ಆದರೆ, ಆತ ಯುಪಿಐ ಮೂಲಕ 15000 ರೂ. ಸ್ವೀಕರಿಸುವುದಿಲ್ಲ ಸಾಧ್ಯವಾಗುತ್ತಿಲ್ಲ. ತಾಂತ್ರಿಕ ತೊಂದರೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾನೆ. ಇದರೊಂದಿಗೆ ಇಡೀ ಪ್ರಕರಣವು ಒಟಿಪಿ ಹಗರಣಕ್ಕೆ ಹೊರಳಿದೆ.

ಬೆಡ್ ಖರೀದಿದಾರ ಮೊದಲು ಟೆಕ್ಕಿಗೆ ತನ್ನ ನಂಬರ್‌ಗೆ ಐದು ರೂ. ಕಳುಹಿಸಲು ಹೇಳಿದ್ದಾನೆ. ಅದಕ್ಕೆ ಪ್ರತಿಯಾಗಿ 10 ರೂಪಾಯ ಕಳುಹಿಸಿದ್ದಾನೆ. ಬಳಿಕ 5000 ರೂ. ಕಳುಹಿಸುವಂತೆ ಸೂಚಿಸಿದ್ದಾನೆ. ಅದಕ್ಕೆ ಪ್ರತಿಯಾಗಿ 10 ಸಾವಿರ ರಿಟರ್ನ್ ಮಾಡಿದ್ದಾನೆ. ಬಳಿಕ 7,500 ರೂ. ಕಳುಹಿಸುವಂತೆ ಸೂಚಿಸಿದ್ದಾನೆ. ಆಗ, ವಂಚಕ, ಬೈ ಮಿಸ್ಟೆಕ್ ಆಗಿ 30 ಸಾವಿರ ಕಳುಹಿಸಿರುವುದಾಗಿ ಹೇಳಿದ್ದಾನೆ ಮತ್ತು ಉಳಿದ ಹಣವನ್ನು ಕಳುಹಿಸಲಾಗಿರುವ ಲಿಂಕ್ ಬಳಸಿ ಮತ್ತು ಒಟಿಪಿ ಷೇರ್ ಮಾಡುವ ಮೂಲಕ ವಾಪಸ್ ನೀಡುವಂತೆ ಖರೀದಿದಾರ ತಿಳಿಸಿದ್ದಾನೆ. ಯಾವಾಗ ಖರೀದಿದಾರನಿಗೆ ಒಟಿಪಿ ದೊರೆಯಿತೋ ಎಂಜಿನಿಯರ್ ಖಾತೆಯಲ್ಲಿದ್ದ 68 ಲಕ್ಷ ರೂಪಾಯಿಯನ್ನು ವಂಚಕ ಎಗರಿಸಿದ್ದಾನೆ.

ಈ ಸೈಬರ್ ಸ್ಕ್ಯಾಮ್ ಕುರಿತು ಬ್ಯಾಂಕ್‌ಗಳು, ಎನ್‌ಸಿಪಿಐ ಮತ್ತು ಆರ್‌ಬಿಐ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದು, ಇದು ನಂಬಲಾಗದಷ್ಟು ಮಹತ್ವದ್ದಾಗಿದೆ. ಯಾರೊಂದಿಗೂ ಒನ್-ಟೈಮ್ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಬೇಡಿ ಎಂದು ಹೇಳಿವೆ. ನೀವು ಆರ್ಡರ್ ಮಾಡುವ ಪ್ರಕ್ರಿಯೆಯಲ್ಲಿದ್ದರೆ ಮತ್ತು ವಿಶ್ವಾಸಾರ್ಹ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿದ್ದರೆ ಮಾತ್ರ ಬಳಕೆದಾರರು ಅದನ್ನು ಬಳಸಬೇಕು ಎಂದು ಸೂಚಿಸುತ್ತಲೇ ಇರುತ್ತವೆ.

ಒಂದೊಮ್ಮೆ ನಿಮ್ಮ ಯಾವುದೇ ವ್ಯವಹಾರ ಮಾಡದೇ ಒಟಿಪಿಯನ್ನು ಪಡೆದುಕೊಂಡಿದ್ದರೆ ಕೂಡಲೇ ನಿಮ್ಮ ಖಾತೆಯ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಮತ್ತು ಈ ಅನಧಿಕೃತ ವಹಿವಾಟಿನ ಕುರಿತು ನಿಮ್ಮ ಬ್ಯಾಂಕ್‌ಗೆ ತಿಳಿಸುವುದು ಮುಖ್ಯವಾಗಿದೆ. ಕೂಡಲೇ ರಿಪೋರ್ಟ್ ಮಾಡುವುದರಿಂದ ವಂಚನೆಯಿಂದ ಹಣವನ್ನು ಉಳಿಸಿಕೊಳ್ಳಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Cyber Fraud: 6 ವರ್ಷದಲ್ಲಿ ಸೈಬರ್‌ ಅಪರಾಧ 450% ಜಾಸ್ತಿ; ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ದಾರರೇ ಟಾರ್ಗೆಟ್

Exit mobile version