Site icon Vistara News

Teenage danger | ಪೇರೆಂಟ್ಸ್‌ ಮೀಟಿಂಗ್‌ಗೆ ಅಣ್ಣ ಅಂತ ಬಾಯ್‌ಫ್ರೆಂಡನ್ನು ಕರೆದುಕೊಂಡು ಬಂದಿದ್ದ ವಿದ್ಯಾರ್ಥಿನಿ!

school girl

ಬೆಂಗಳೂರು: ಈಗಿನ ಶಾಲಾ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ವರ್ತನೆ ತೋರುವ ಮೂಲಕ ಸಮಾಜದಲ್ಲಿ, ಪೋಷಕರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಮಕ್ಕಳು ಬೇಗನೆ ಪ್ರೌಢರಂತೆ (Teenage danger) ವರ್ತಿಸುತ್ತಾ ವಂಚನೆಯ ದಾರಿ ಹಿಡಿದಿರುವುದು ಆತಂಕಕಾರಿ ಬೆಳವಣಿಗೆ. ಇತ್ತೀಚೆಗೆ ಬೆಂಗಳೂರಿನ ಕೆಲವು ಶಾಲೆಗಳ ಮಕ್ಕಳ ಬ್ಯಾಗ್ ಗಳಲ್ಲಿ
ಕಾಂಡೋಮ್, ಗರ್ಭ ನಿವಾರಕ ಮಾತ್ರೆ ಸಿಕ್ಕಿದ ಪ್ರಕರಣದ ನೆನಪು ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಆತಂಕಕಾರಿ ವಿಷಯ ಬಯಲಿಗೆ ಬಂದಿದೆ.

ಅದೇನೆಂದರೆ, ಕೆಲವು ವಿದ್ಯಾರ್ಥಿನಿಯರು ಪೋಷಕರ ಸಭೆಗೆ ಹೆತ್ತವರನ್ನು ಕರೆತರುವ ಬದಲು ತಮ್ಮ ಬಾಯ್‌ಫ್ರೆಂಡ್‌ಗಳನ್ನು ಕರೆದುಕೊಂಡುಬರುತ್ತಿದ್ದಾರೆ! ತಮಗಿಂತ ಸ್ವಲ್ಪ ದೊಡ್ಡ ವಯಸ್ಸಿನ ಅವರನ್ನು ಒಂದೋ ಅಣ್ಣ, ಇಲ್ಲವೇ ಮಾಮ ಎಂದು ಪರಿಚಯಿಸುತ್ತಾರೆ ಎಂದು ತಿಳಿದುಬಂದಿದೆ. ಶಿಕ್ಷಕರು ಇದ್ಯಾವುದರ ಅರಿವೇ ಇಲ್ಲದೆ ಅವರಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತಾರೆ.

ಈ ವಿಚಾರವನ್ನು ಸ್ವತಃ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿಯಾಗಿರುವ ಶಶಿಕುಮಾರ್‌ ಅವರು ಒಪ್ಪಿಕೊಳ್ಳುತ್ತಾರೆ. ʻʻಇತ್ತೀಚೆಗೆ ಮಕ್ಕಳ ವಿಚಾರವಾಗಿ ಸಭೆ ಕರೆದರೆ ಪೋಷಕರ ಬದಲು ಮಕ್ಕಳು ಬಾಯ್ ಫ್ರೆಂಡ್ ನ ಕರೆದುಕೊಂಡು ಬರ್ತಿದ್ದಾರೆ. ಅಣ್ಣ, ಮಾಮ ಅಂತ ಹೇಳಿ ಬೇರೆಯವರನ್ನು ಕರೆದುಕೊಂಡು ಬರ್ತೀದ್ದಾರೆ.‌
ಶಾಲೆಯ ಆಡಳಿತ ಮಾಡಿ ಅಷ್ಟೇ ಎಚ್ಚೆತ್ತುಕೊಂಡ್ರು ಸಹ ಮಕ್ಕಳ ಪರಿಸ್ಥಿತಿ ಬದಲಾವಣೆ ಮಾಡೊಕೆ ಆಗ್ತಿಲ್ಲʼʼ ಎಂದು ಹೇಳಿದ್ದಾರೆ.

ಶಾಲೆಗಳ ಆಡಳಿತ ಮಂಡಳಿಗೆ ಮಕ್ಕಳ ರಕ್ಷಣೆ ದೊಡ್ಡ ಚಾಲೆಂಜ್‌ ಆಗಿ ಪರಿಣಮಿಸಿದೆ. ಇದಕ್ಕೆಲ್ಲಾ ಪೋಷಕರೇ ಮುಖ್ಯ ಕಾರಣ. ಮಕ್ಕಳ ಬಗ್ಗೆ ಹೆತ್ತವರ ಮೇಲ್ವಿಚಾರಣೆ ಕಡಿಮೆ ಆಗಿದೆ. ಶಿಕ್ಷಕರು ಕೂಡಾ ಹೆಚ್ಚು ವಿಚಾರಣೆ ಮಾಡುವಂತಿಲ್ಲ ಎಂಬಂಥ ನಿರ್ಬಂಧಗಳಿವೆ. ಹೀಗಾಗಿ‌ ಮಕ್ಕಳಿಗೆ ಹೆತ್ತವರ ಕಡಿವಾಣವೂ ಇಲ್ಲ, ಶಿಕ್ಷಕರೂ ಕೇಳುವಂತಿಲ್ಲ ಎಂಬಂಥಾಗಿದೆ. ಹೀಗಾಗಿ ಮಕ್ಕಳು ಹೊರಗೆ ಹೋಗಿ ಎಂಜಾಯ್‌ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಶಶಿಕುಮಾರ್‌. ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬೇಕಾದ ಅವಶ್ಯಕತೆ ಇದೆ ಎಂದು ಮನೋವೈದ್ಯರು ಹೇಳುತ್ತಾರೆ.

ಇದನ್ನೂ ಓದಿ | School Bag | ಬೆಂಗಳೂರು ಹೈಸ್ಕೂಲ್ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್, ಸಿಗರೇಟ್ಸ್, ಗರ್ಭನಿರೋಧಕ ಮಾತ್ರೆ!

Exit mobile version