Site icon Vistara News

BJP Yuva Morcha: ಅಮ್ಮ ನೀಡುವ ಪಾಕೆಟ್ ಮನಿ ಮೇಲೆಯೇ ರಾಹುಲ್ ಗಾಂಧಿ ಜೀವನ: ತೇಜಸ್ವಿ ಸೂರ್ಯ

Tejasvi Surya

ಗಂಗಾವತಿ (ಕೊಪ್ಪಳ): ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೆ ಮಾಡಲು ಒಂದು ಸಣ್ಣ ಕೆಲಸವಿಲ್ಲ. 10 ರೂಪಾಯಿ ಸಂಪಾದಿಸುವ ಸಾಮರ್ಥ್ಯವಿಲ್ಲ. ಅವರ ಅಮ್ಮ ನೀಡುವ ಪಾಕೆಟ್ ಮನಿಯ ಮೇಲೆಯೇ ಜೀವನ ಅವಲಂಬಿಸಿದೆ. ಇಂತಹವರಿಂದ ಯುವಕರಿಗೆ ಸ್ವಾವಲಂಬಿ ಪಾಠ ಹೇಗೆ ಸಾಧ್ಯ ಎಂದು ಬಿಜೆಪಿಯ ಯುವ ಮೋರ್ಚಾ (BJP Yuva Morcha) ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.

ಗಂಗಾವತಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿದ ಮಾತನಾಡಿ, ಡಿಪ್ಲೊಮಾ ಪದವೀಧರರು ಮತ್ತು ಪದವೀಧರರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡುತ್ತಿದೆ. ರಾಹುಲ್ ಜೀವನವೇ ಇನ್ನೊಬ್ಬರ ಮೇಲೆ ಅವಲಂಬಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ವಾವಲಂಬನೆ, ಸ್ವಾಭಿಮಾನಿಯನ್ನಾಗಿಸುವ ಯೋಜನೆಗಳನ್ನು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Election: ಯುಗಾದಿಗೆ ಕಾಂಗ್ರೆಸ್‌ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್‌

ದೇಹದಲ್ಲಿ ಶಕ್ತಿ ಇದ್ದಾಗಲೂ ಕೂಡ ಯುವ ಸಮೂಹವನ್ನು ಪರವಾಲಂಬಿಯನ್ನಾಗಿಸುವುದು ಕಾಂಗ್ರೆಸ್ ಆಡಳಿತದ ಮಾದರಿ. ಆದರೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದಕು ಕಟ್ಟಿಕೊಡುವುದು ಬಿಜೆಪಿಯ ಆಡಳಿತದ ಮಾದರಿ. ಯುವ ಶಕ್ತಿಗೆ ಪ್ರೇರಣೆ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು. ಆದರೆ, ಕಾಂಗ್ರೆಸ್ ಅಗ್ಗದ ಯೋಜನೆಗಳನ್ನು ನೀಡುವ ಮೂಲಕ ಯುವ ಸಮೂಹದ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ. ಇಂಥವರಿಂದ ಯುವ ಸಬಲೀಕರಣದ ಯೋಜನೆ ನಿರೀಕ್ಷೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

70 ವರ್ಷದಲ್ಲಿ ಕಾಂಗ್ರೆಸ್ ನೀಡಿರುವ ಇಂತಹ ಯೋಜನೆಗಳಿಂದಾಗಿಯೇ ಇಂದು ಮನೆ ಸೇರುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಅವರು ನೀಡಿರುವ ಗ್ಯಾರಂಟಿಗಳು ನಿರುಪಯುಕ್ತವಾಗಲಿವೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.

ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ: ಶಾಸಕ ಅಪ್ಪಚ್ಚು ರಂಜನ್

ಕೊಡಗು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ. ಹೀಗಾಗಿ ಅವರು ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಸಿಎಂ ಆಗಿದ್ದವರಿಗೆ ಕ್ಷೇತ್ರಕ್ಕಾಗಿ ಹುಡುಕಾಡುವ ಸ್ಥಿತಿ ಬಂದಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಎಲ್ಲಿ ಬೇಕಾದರೂ ಬಂದು ಸ್ಪರ್ಧಿಸಲಿ, ಅವರ ಎದುರು ನಾನು ಸ್ಪರ್ಧಿಸುತ್ತೇನೆ. ನಾನೇ ಅವರನ್ನು ಸೋಲಿಸುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದ ಕ್ಷೇತ್ರದಿಂದ ಹಿಂದೆ ಸರಿದ ವಿಚಾರಕ್ಕೆ ಕುಶಾಲನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಸೋತರು. ಬಾದಾಮಿಯಲ್ಲಿ ಕೇವಲ 700 ಮತಗಳ ಅಂತರದಲ್ಲಿ ಗೆದ್ದರು. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿ ಹಿಂದು-ಮುಸ್ಲಿಂ ಸಮಾಜಗಳನ್ನು ಒಡೆದು ಹಾಕಿದರು. ಹೀಗಾಗಿ ಜನರಿಗೆ ಅವರ ಮೇಲೆ ತೀವ್ರ ಸಿಟ್ಟಿದ್ದು, ಅವರನ್ನು ಸೋಲಿಸಲೇ ಬೇಕೆಂದು ನಿರ್ಧರಿಸಿದ್ದಾರೆ ಎಂದರು.

ಇದನ್ನೂ ಓದಿ | Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ

Exit mobile version