ನವದೆಹಲಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಅವರಿಗೆ ಅತ್ಯುತ್ತಮ ಚೊಚ್ಚಲ ಸಂಸದ ಪ್ರಶಸ್ತಿ ಲಭಿಸಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಲೋಕಮತ್ ಪಾರ್ಲಿಮೆಂಟರಿ ಅವಾರ್ಡ್ 2022ನೇ ಸಾಲಿನಲ್ಲಿ ‘ಮೊದಲ ಬಾರಿಗೆ ಸಂಸದರಾಗಿ ಉತ್ತಮ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ಅತ್ಯುತ್ತಮ ಸಂಸದ’ (Best Debutant Parliamentarian) ಎಂಬ ಪ್ರಶಸ್ತಿ ಲಭಿಸಿದೆ.
ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ತಿನಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚೆ, ವೈಯಕ್ತಿಕ ದತ್ತಾಂಶ ಭದ್ರತಾ ವಿಧೇಯಕದ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ ವಿಧೇಯಕ ರಚನೆ, ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: Karnataka Election : ತೇಜಸ್ವಿ ಸೂರ್ಯ ಹೇಳಿದ ಬೆಕ್ಕುಗಳ ಸ್ಟೋರಿ! ರಾಜಕೀಯ ಶುರು ಮಾಡಿದ್ವಾ ಮಾರ್ಜಾಲಗಳು!
2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತೇಜಸ್ವಿ ಸೂರ್ಯ ಸಂಸತ್ ಪ್ರವೇಶಿಸಿದ್ದಾರೆ. ಇದುವರೆಗೆ ಇವರು ಸಂಸತ್ತಿನಲ್ಲಿ ನಡೆದ 28 ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ, ಲೋಕಸಭೆಯಲ್ಲಿ ವಿವಿಧ ವಿಷಯಗಳ ಕುರಿತು 308 ಪ್ರಶ್ನೆ ಕೇಳಿದ್ದಾರೆ.