ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳು ಕಾದ ಕಾವಲಿಯಂತಾಗಿವೆ. ಜನರು ಮನೆಯಿಂದ ಹೊರಗೆ ಬರಲು ಆಗದೆ ಒಳಗೆ ಕೂರಲೂ ಆಗದೆ ಪರದಾಡುವಂತಾಗಿದೆ. ಮುಂದಿನ ಒಂದು ವಾರದ ಕಾಲ ಉಷ್ಣಾಂಶ ಇನ್ನಷ್ಟು ಹೆಚ್ಚಬಹುದು(Rising Temperature) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಗರಿಷ್ಠ ಉಷ್ಣಾಂಶವು ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸಾಮಾನ್ಯವಾಗಿ ನೀಲಾಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶ 36 ಹಾಗೂ ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿರಯಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 41.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಸೇರಿದಂತೆ ತುಮಕೂರಿನ ಕೆಲವು ಭಾಗಗಳಲ್ಲಿ ಏ. 21ರಂದು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಗರಿಷ್ಠ ತಾಪಮಾನ ದಾಖಲು
ಹೆಸರು- ಕನಿಷ್ಠ- ಗರಿಷ್ಠ ತಾಪಮಾನ (ಸೆಲ್ಸಿಯಸ್)
ಬೆಂಗಳೂರು- 23- 35 ಸೆಲ್ಸಿಯಸ್
ಮಂಗಳೂರು- 25- 34 ಸೆಲ್ಸಿಯಸ್
ಚಿತ್ರದುರ್ಗ- 22- 37 ಸೆಲ್ಸಿಯಸ್
ಗದಗ- 22- 39 ಸೆಲ್ಸಿಯಸ್
ಹೊನ್ನಾವರ- 25- 35 ಸೆಲ್ಸಿಯಸ್
ಕಲಬುರಗಿ- 25- 40 ಸೆಲ್ಸಿಯಸ್
ಬೆಳಗಾವಿ- 21- 37 ಸೆಲ್ಸಿಯಸ್
ಕಾರವಾರ- 25-36 ಸೆಲ್ಸಿಯಸ್
ಮೈಸೂರು: 22- 38 ಸೆಲ್ಸಿಯಸ್
ಮಂಡ್ಯ: 22- 38 ಸೆಲ್ಸಿಯಸ್
ಇದನ್ನೂ ಓದಿ: Electric shock: ಕರೆಂಟ್ ಶಾಕ್ ಹೊಡೆದು ತುಮಕೂರಲ್ಲಿ ಇಬ್ಬರು ಬಾಲಕರು ಮೃತ್ಯು
ಕಲಬುರಗಿ, ಗದಗ, ಮೈಸೂರು, ಮಂಡ್ಯ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಕಾರವಾರ, ಹೊನ್ನಾವರ, ಬೆಂಗಳೂರು, ಮಂಗಳೂರು ಭಾಗದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.