Site icon Vistara News

Temple target : ಹೂವಿನ ಹಾರದಲ್ಲಿ ಮಾಂಸವಿಟ್ಟು ದೇಗುಲ ಅಪವಿತ್ರಕ್ಕೆ ಯತ್ನ; ಶನಿ ದೇಗುಲದಲ್ಲಿ ಇಬ್ಬರು ಯುವಕರ ಕೃತ್ಯ

Temple target

#image_title

ದೇವನಹಳ್ಳಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕನಸವಾಡಿಯ ಶನಿ ಮಹಾತ್ಮ ದೇವಾಲಯವನ್ನು ಅಪವಿತ್ರಗೊಳಿಸುವ ಪ್ರಯತ್ನವೊಂದು (Temple target) ನಡೆದಿದೆ. ಇಬ್ಬರು ಯುವಕರು ದೇವಾಲಯಕ್ಕೆ ಹೂವಿನ ಹಾರ ನೀಡುವ ನೆಪದಲ್ಲಿ ಜತೆಗೆ ಮಾಂಸವನ್ನೂ ಇಟ್ಟು ಅಪವಿತ್ರಕ್ಕೆ ಸಂಚು ನಡೆಇದ್ದರು. ಆದರೆ, ಹಾರ ದೇವರ ಗರ್ಭಗುಡಿ ಸೇರುವ ಮೊದಲೇ ಅಸಲಿಯತ್ತು ಬಯಲಿಗೆ ಬಂದು ದೊಡ್ಡದೊಂದು ಧಾರ್ಮಿಕ ಅಪಾಯ ತಪ್ಪಿತು. ಆದರೂ ಊರಿನವರು ಇಡೀ ದೇವಸ್ಥಾನವನ್ನು ಶುಚಿಗೊಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಶ್ರೀ ಶನಿ ಮಹಾತ್ಮ ದೇವಸ್ಥಾ‌ನದಲ್ಲಿ ಈ ಘಟನೆ ನಡೆದಿದೆ.

ಇಬ್ಬರು ಅಪರಿಚಿತ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದು, ಇದು ದೇವಾಲಯದ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ಖದೀಮರು ಪ್ಲಾಸ್ಟಕ್‌ ಕವರ್‌ನಲ್ಲಿ ಹೂವಿನ ಹಾರಗಳನ್ನು ತಂದುಕೊಟ್ಟಿದ್ದರು. ದೇವಾಲಯದ ಸಿಬ್ಬಂದಿಗಳ ಕೈಗೆ ಈ ಬ್ಯಾಗ್‌ಗಳನ್ನು ಒಪ್ಪಿಸಿ ಇದರಲ್ಲಿ ಹೂವಿನ ಹಾರಗಳಿವೆ ಎಂದು ಹೇಳಿದ್ದರು. ಬಳಿಕ ಅವರು ಅಲ್ಲಿಂದ ಎಸ್ಕೇಪ್‌ ಆಗಿದ್ದರು.

ಕನಸವಾಡಿಯ ಶನಿ ಮಹಾತ್ಮ ದೇವಸ್ಥಾನ

ದೇವಾಲಯದ ಸಿಬ್ಬಂದಿ ಹೊರಾಂಗಣದಿಂದ ಒಳಗೆ ಈ ಬ್ಯಾಗ್‌ ಒಯ್ದು ಹಾರವನ್ನು ಹೊರತೆಗೆದಾಗ ಚೀಲದಲ್ಲಿ ಹಾರದ ಜತೆಗೆ ಮಾಂಸವೂ ಇದ್ದುದು ಬಯಲಾಯಿತು. ಮಾಂಸವನ್ನು ಪೇಪರ್‌ನಲ್ಲಿ ಸುತ್ತಿ ಒಳಗೆ ಇಡಲಾಗಿತ್ತು. ಕೂಡಲೇ ಸಿಬ್ಬಂದಿ ಹೂವಿನ ಹಾರಗಳನ್ನು ಹೊರಗೆ ಎಸೆದು ದೇವಾಲಯವನ್ನು ಶುಚಿಗೊಳಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಪರಿಚಿತ ಯುವಕರ ವಿರುದ್ಧ ದೊಡ್ಡಬೆಳವಂಗಲ‌ ಪೊಲೀಸ್ ಠಾಣೆಗೆ ದೂರು ನೀಡಿದೆ.

ದೇವಸ್ಥಾನದಲ್ಲಿ ಹಾರ ನಿಷೇಧಿಸಿ ಪ್ರಕಟಣೆ

ಪೇಪರ್‌ ಒಳಗೊಂಡ ಹಾರ ನಿಷೇಧ

ಈ ನಡುವೆ, ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿ ಆಡಳಿತ ಮಂಡಳಿ‌ ಪ್ರಕಟಣೆ ಹೊರಡಿಸಿದೆ. ʻʻದೇವರ ಮಹಿಮೆಯಿಂದ ಗರ್ಭಗುಡಿ ಪ್ರವೇಶಕ್ಕೂ ಮುನ್ನವೇ ಹಾರದ ಅಸಲಿಯತ್ತು ಬೆಳಕಿಗೆ ಬಂದಿದೆʼʼ ಎನ್ನುತ್ತಿದ್ದಾರೆ ಭಕ್ತರು.

ಇದನ್ನೂ ಓದಿ : CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?;‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

Exit mobile version