Site icon Vistara News

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟೆಂಪೋ

ಕೊಡಗು: ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ವಾಹನ, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಚಿತ್ರಾ ಸ್ಟುಡಿಯೋದ ಮಾಲೀಕ ಮತ್ತು ಸುಂಟಿಕೊಪ್ಪದ ಪತ್ರಕರ್ತ ಎಂ.ಬಿ.ವಿನ್ಸೆಂಟ್ ಅವರ ಮುನೆಯ ಮುಂಭಾಗದಲ್ಲಿ ಮಗುಚಿದ ಪರಿಣಾಮ ಬಾರಿ ಅನಾಹುತ ತಪ್ಪಿದಂತಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿನ್ಸೆಂಟ್ ಅವರ ಮನೆಯ ಮುಂಭಾಗ ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಒಂದು ವೇಳೆ ವಿದ್ಯುತ್ ಕಂಬ ಇಲ್ಲದಿದ್ದರೆ ಮನೆಗೆ ಗುದ್ದಿ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಮನೆಯ ಮೂವರು ಮತ್ತು ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಬಟ್ಟೆ ಒಣಗಲು ಹಾಕುವಾಗ ವಿದ್ಯುತ್‌ ಸ್ಪರ್ಶ, ತಾಯಿ, ಇಬ್ಬರು ಮಕ್ಕಳು ದಾರುಣ ಮರಣ

Exit mobile version