Site icon Vistara News

Terror Accused | ಶಂಕಿತ ಉಗ್ರರಿಂದ ಹಳೇ ಬೇಸಿಕ್‌ ನೋಕಿಯಾ ಬಳಕೆ;‌ ಸಿಸಿಬಿಗೆ ಮೊಬೈಲ್‌ ರಿಟ್ರೀವ್‌ ತಲೆಬಿಸಿ

Terror Accused

ಬೆಂಗಳೂರು: ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರಾದ (Terror Accused) ಅಖ್ತರ್ ಹುಸೇನ್ ಹಾಗೂ ಜುಬಾ ವಿಚಾರಣೆ ಸಿಸಿಬಿ ಪೊಲೀಸರಿಗೆ ತಲೆ ನೋವಾಗಿದ್ದು, ಇವರಿಂದ ಹೆಚ್ಚಿನ ಮಾಹಿತಿ ಪಡೆಯಲು ಮೊಬೈಲ್‌ ರಿಟ್ರೀವ್ ಮಾಡಲು ಮುಂದಾಗಲಾಗಿದೆ. ಆದರೆ, ಇದು ಸಲುಭದ ಕೆಲಸವಾಗಿಲ್ಲದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇಬ್ಬರು ಶಂಕಿತ ಆರೋಪಿಗಳು ನೋಕಿಯಾದ ಹಳೆ ಬೇಸಿಕ್ ಮೊಬೈಲ್ ಬಳಸುತ್ತಿದ್ದರು ಎನ್ನಲಾಗಿದ್ದು, ಸದ್ಯ ಇವರಿಂದ ಮೊಬೈಲ್‌ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿರುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್‌) ನೀಡಲಾಗಿದೆ. ಅಖ್ತರ್ ಹುಸೇನ್ ಹಾಗೂ ಜುಬಾ ಇಬ್ಬರ ಮೊಬೈಲ್ ನೋಕಿಯಾದ ಬೇಸಿಕ್ ಮೊಬೈಲ್‌ಗಳಾಗಿರುವುದರಿಂದ ರಿಟ್ರೀವ್ ತಡವಾಗುತ್ತದೆ ಎನ್ನಲಾಗಿದೆ.

UAPA ಕಾಯ್ದೆಯಡಿ ಪ್ರಕರಣದಲ್ಲಿ ಶಂಕಿತ ಉಗ್ರರ ಬಂಧನ ಮಾಡಿರುವ ಹಿನ್ನೆಲೆಯಲ್ಲಿ ಸಿಸಿಬಿಯಿಂದ ಗೃಹ ಇಲಾಖೆಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೇ ಎನ್‌ಐಎಗೆ ಪ್ರಕರಣ ತನಿಖೆ ಅಧಿಕೃತವಾಗಿ ವರ್ಗಾವಣೆಯಾಗಲಿದೆ. ಸದ್ಯ ಇಬ್ಬರು ಆರೋಪಿಗಳನ್ನು ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Terror Accused | ರಾಜ್ಯದಲ್ಲಿ 3 ಕಡೆ, ದೇಶದಲ್ಲಿ 13 ಕಡೆ NIA ದಾಳಿ: ಶಂಕಿತರ ತೀವ್ರ ವಿಚಾರಣೆ

Exit mobile version