ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇದಿನೆ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದೆ. ಕಳ್ಳಸಾಗಣೆ, ಮಾರಾಟದ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈಗ ಗಾಂಜಾ ಸೇರಿ ಮಾದಕ ವಸ್ತುಗಳನ್ನು ತಯಾರು ಮಾಡುತ್ತಿದ್ದವರನ್ನೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅರಕ್ಕು ಹಾಗೂ ಸೆಂಥಿಪಲ್ಲಿ ಕಾಡಿನಲ್ಲಿ ಡ್ರಗ್ಸ್ ತಯಾರಿಸಿ ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗದಲ್ಲಿ ಗಾಂಜಾ ಪೆಡ್ಲರ್ಸ್‌ಗಳಿಗೆ ಮಾರಾಟ ಮಾಡುತ್ತಿದ್ದ ಶ್ರೀನಿವಾಸ್ @ ಸೀನು, ಪ್ರಹ್ಲಾದ್ @ ವಂತಲ ಪ್ರಹ್ಲಾದ್, ಮಲ್ಲೇಶ್ವರಿ, ಸತ್ಯವತಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ರೈಲಿನಲ್ಲಿ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳನ್ನು ಬಂಧಿಸಿ ೫ ಕೆ.ಜಿ. ಹ್ಯಾಶಿಷ್ ಆಯಿಲ್ ಹಾಗೂ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ.
ನೆಲ್ಲೂರು ಕಾಡುಗಳಲ್ಲಿ ಆರೋಪಿಗಳು ಗಾಂಜಾ ತಯಾರು ಮಾಡಿ ಮಾರಾಟ ಮಾಡ್ತಿದ್ದರು. ಗಾಂಜಾವನ್ನು ಚೆನ್ನಾಗಿ ಬೇಯಿಸಿ ಹ್ಯಾಶಿಷ್ ಆಯಿಲ್ ತಯಾರು ಮಾಡುತ್ತಿದ್ದರು. ಕಾಡುಗಳಲ್ಲಿ ಶೆಡ್‌ಗಳನ್ನು ಹಾಕಿ ಹ್ಯಾಶಿಷ್ ಆಯಿಲ್ ತಯಾರು ಮಾಡ್ತಿದ್ದ ತಂಡವನ್ನು ಈಗ ಪೊಲೀಸರು ಬಂಧಿಸಿದಂತಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ| ಗಾಂಜಾ ಮಾರುತ್ತಿದ್ದವನ 50 ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಸಿಸಿಬಿ!