ಬಂಕಾಪುರ (ಹಾವೇರಿ): ಸನಾತನ ಧರ್ಮವನ್ನು ಮಲೇರಿಯಾ ರೋಗಕ್ಕೆ ಹೋಲಿಕೆ ಮಾಡುವುದನ್ನು ಕೇಳಿ, ನಾವೆಲ್ಲಾ ಸುಮ್ಮೆ ಕೂರಬೇಕಾ? ನಮ್ಮ ಮೈಯಲ್ಲಿ ಸನಾತನ ಹಿಂದು ಧರ್ಮದ (Hindu Jagruti) ರಕ್ತ ಹರಿಯುತ್ತಿದೆ. ನಮ್ಮನ್ಮು ತಡವಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಬಂಕಾಪುರದಲ್ಲಿ ಶನಿವಾರ ಆಯೋಜಿಸಿದ್ದ ಹಿಂದು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಗಣಪತಿ ತಡೆಯುವ ಪ್ರಯತ್ನ ಇಲ್ಲಿ ಆಯಿತು. ಅದಕ್ಕೆ ಗಣಪತಿ ಶಕ್ತಿ ಇಡೀ ಕನ್ನಡ ನಾಡಿಗೆ ಗೊತ್ತಾಯಿತು. ಗಣಪತಿ ಇಟ್ಟಿದ್ದೇ ಮಾರ್ಗ, ಯಾರೂ ಗಣಪತಿ ತಡೆಯುವ ಶಕ್ತಿ ಹೊಂದಿಲ್ಲ. ಇದು ಗಣಪತಿ ಭಕ್ತರ ಶಕ್ತಿ, ಗಣೇಶನ ಶಕ್ತಿ ತೋರಿಸಿದರೆ ಏನಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು ಎಂದರು.
ಇದನ್ನೂ ಓದಿ | Bill Politics : ಬೆಂಗಳೂರಿನ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ, ಮುನಿರತ್ನ ಕ್ಷೇತ್ರದ ಹಣಕ್ಕೆ ಕೊಕ್ಕೆ
ನಾವು ಶ್ರೇಷ್ಠ ಧರ್ಮಕ್ಕೆ ಸೇರಿದವರು, ಸನಾತನ ಧರ್ಮ ವಿಶ್ವದ ಮಾನವರ ಕಲ್ಯಾಣ ಧರ್ಮ. ಎಲ್ಲಾ ಧರ್ಮಿಯರು ಈ ದೇಶದಲ್ಲಿ ಇದ್ದಾರೆ. ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಹೋಗಿ ಅಲ್ಲಿ ಒಂದೇ ಒಂದು ಧರ್ಮ. ಅಲ್ಲಿ ಜೀವಂತ ಬದುಕಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ. ಇಂತಹ ವಿಶಾಲ ಧರ್ಮಕ್ಕೆ ಡೆಂಗ್ಯು, ಮಲೇರಿಯಾ ಅಂತಾರಲ್ವಾ ಇವರು, ಇದೇ ಮಾತು ಬೇರೆ ಧರ್ಮದ ಬಗ್ಗೆ ಹೇಳಲಿ. ಇಷ್ಟೊತ್ತಿಗೆ ಅವರ ಗತಿ ಏನಾಗುತ್ತಿತ್ತು. ಇದಕ್ಕೆಲ್ಲಾ ಒಂದೇ ಪರಿಹಾರ ನಾವೆಲ್ಲಾ ಒಂದಾಗಬೇಕು, ಜಾಗೃತಿ ಮೂಡಬೇಕು ಎಂದು ಕರೆ ನೀಡಿದರು.
ಸರ್ವೇ ಜನಾ: ಸುಖಿನೋಭವಂತು ಎನ್ನುವ ಮಾತು ಎತ್ತಿ ಹಿಡಿಯಬೇಕು. ಕೆಲವರಿಗೆ ಭಾರತ ಶಕ್ತಿಶಾಲಿ ಆಗುವುದು ಬೇಕಾಗಿಲ್ಲಾ, ಅಭಿವೃದ್ಧಿ ಆಗುವುದು ಬೇಕಿಲ್ಲ. ನಮ್ಮ ಸರ್ಕಾರ ಇದ್ದಾಗ ಯಾವ ದುಷ್ಟ ಶಕ್ತಿಗೂ ತಲೆ ಎತ್ತಲು ಬಿಟ್ಟಿಲ್ಲ. ಕೆ.ಜೆ ಹಳ್ಳಿ ಡಿ.ಜಿ ಹಳ್ಳಿಯಲ್ಲಿ ತಪ್ಪು ಮಾಡಿದವರನ್ನು ಬಿಡಲಿಲ್ಲ. ಆದರೆ, ಕೆಲವರು ಅಮಾಯಕರ ಮೇಲಿನ ಕೇಸು ರದ್ದು ಮಾಡಿ ಎಂದು ಪತ್ರ ಬರೆಯುತ್ತಾರೆ. ಧಾಳಿ ಕೋರರ ಮೇಲಿನ ಕೇಸು ತೆಗೆಯಿರಿ ಎಂದು ಪತ್ರ ಬರೆಯುತ್ತಾರೆ. ಇಂತಹ ಶಕ್ತಿಗಳನ್ನು ನಾವು ದಮನ ಮಾಡದೇ ಇದ್ದರೆ ಸರ್ವೆ ಜನಾಃ ಸುಖಿನೋ ಭವಂತೂ ಆಗುವುದಿಲ್ಲ ಎಂದರು.
ಕಾಂಗ್ರೆಸ್ ಬಂದರೆ ಬರಗಾಲ ಗ್ಯಾರಂಟಿ
ರಾಜ್ಯದಲ್ಲಿ ಅರಾಜಕತೆ ಇದೆ, ಎಲ್ಲಾ ಕಡೆ ಕೋಮುಗಲಭೆಗಳು ಆಗುತ್ತಿವೆ. ಕಾಂಗ್ರೆಸ್ ಬಂದ ತಕ್ಷಣ ಬರಗಾಲ ಗ್ಯಾರಂಟಿ. ಕಾಂಗ್ರೆಸ್ ಆರಿಸಿಬಂದ ದಿನ ಬೆಳಗಾವಿಯಲ್ಲಿ ಪಾಕಿಸ್ತಾನ ಧ್ವಜ ಹಾರಿದೆ. ಪಾಕಿಸ್ತಾನದ ಧ್ವಜ ಹಿಡಿದವರು ಸರ್ಕಾರದ ಮೊಮ್ಮಕ್ಕಳು ಎಂದ ಅವರು, ಶಿವಮೊಗ್ಗದಲ್ಲಿ ಪೊಲೀಸರ ಮೇಲೂ ಕಲ್ಲು ತೂರಿದ್ದಾರೆ. ಆದರೆ, ಗೃಹ ಸಚಿವರು ಅದು ಸಣ್ಣ ಘಟನೆ ಎನ್ನುತ್ತಾರೆ. ಅವರ ಪೊಲೀಸರೇ ಲಾಠಿ ಚಾರ್ಜ್ ಮಾಡಿದರೆ ಸಣ್ಣ ಘಟನೆ ಎನ್ನುತ್ತಾರೆ. ಯಾಕೆಂದರೆ ಅದನ್ನು ಸರ್ಕಾರದ ಮೊಮ್ಮಕ್ಕಳು ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಗಿ ಗುಡ್ಡದಲ್ಲಿ ಗಣೇಶೋತ್ಸವ ನಡೆದಾಗ ಒಂದು ಸಣ್ಣ ಘಟನೆ ನಡೆಯಲಿಲ್ಲ. ಆದರೆ, ಒಂದು ವಾರದ ಬಳಿಕ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಆಯಿತು. ಬಿಜೆಪಿಯವರೇ ವೇಷ ಹಾಕಿಕೊಂಡು ಈ ತರ ಮಾಡುತ್ತಾರೆ ಅಂತ ಸಚಿವರೊಬ್ಬರು ಹೇಳಿದ್ದಾರೆ. ಆದರೆ, ನಮ್ಮ ಹುಡುಗರು ಇನ್ನೊಂದು ವೇಷ ಹಾಕಿಕೊಳ್ಳುವ ಹೇಡಿಗಳಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ | Lingayat CM : ಲಿಂಗಾಯತ ಲಡಾಯಿಗೆ ಬಿಎಸ್‌ವೈ ಎಂಟ್ರಿ; ಮೊದಲ ದೂರು ಹೋಗಿದ್ದೇ ಮಾಜಿ ಸಿಎಂಗೆ!
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಅನೇಕರು ಪಾಲ್ಗೊಂಡಿದ್ದರು.