ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಎಂ.ಎಸ್. ಹಂಗಲೂರು ಬೋಟ್ ಗಾಳಿಯ ರಭಸಕ್ಕೆ ನೀರಿನಲ್ಲಿ ಮುಳುಗಿ ಬೋಟ್‌ನಲ್ಲಿದ್ದ ಬಲೆ ಹಾಗೂ ಬೋಟ್ ಸಂಪೂರ್ಣ ಹಾನಿಗೊಂಡು ಸುಮಾರು 70 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಹೊನ್ನಾವರದ ಕಾಸರಕೋಡ ಟೊಂಕಾ ಸಮುದ್ರ ತೀರದಲ್ಲಿ (Karwar News) ನಡೆದಿದೆ. ಸ್ಥಳೀಯರ ಸಹಾಯದಿಂದ ಬೋಟ್‌ನಲ್ಲಿದ್ದ 14 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಕಾಸರಕೋಡ ಟೊಂಕಾದ ಬೋಟ್ ಮಾಲಿಕ ಖಾದೀ ಯಸೂಫ್ ಸಾಬ್ ಎಂಬುವವರ ಬೋಟ್ ಹಾನಿಗೊಳಗಾಗಿ ಅಪಾರ ನಷ್ಟ ಉಂಟಾಗಿದೆ. ಭಾನುವಾರ ಸಂಜೆ ವೇಳೆ ಬೋಟ್ ಮೂಲಕ ಮೀನುಗಾರಿಕೆಗೆ 14 ಮೀನುಗಾರರು ಬೋಟ್‌ನಲ್ಲಿ ತೆರಳಿದ್ದರು. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಏಕಾಏಕಿ ಬಿರುಗಾಳಿ ಬಂದು ನೀರು ಬೋಟ್ ಒಳಗೆ ಪ್ರವೇಶಿಸಿದೆ. ಈ ವೇಳೆ ಬೋಟ್ ಸಾಮಥ್ಯ ಕಳೆದುಕೊಂಡು ಕಡಲಾಳದಲ್ಲಿ ಮುಳುಗಲು ಆರಂಭಿಸಿದೆ. ನಂತರ ಸ್ಥಳೀಯ ಮೀನುಗಾರರ ಸಹಾಯದಿಂದ ಬೋಟ್‌ನಲ್ಲಿದ್ದ 14 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಬೋಟ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಲೆಗಳು, ಎಂಜಿನ್, ಮೀನುಗಾರಿಕೆಗೆ ಬಳಸುವ ಪರಿಕರಗಳು ಹಾನಿಯಾಗಿದೆ ಎನ್ನಲಾಗಿದೆ. ರೋಪ್ ಮೂಲಕ ಬೋಟ್ ತರಲು ಯತ್ನಿಸಿದ್ದು, ಆಳವಿರುವುದರಿಂದ ಬೋಟ್ ಮೇಲೆತ್ತಲಾಗದೆ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಸುಮಾರು 70 ಲಕ್ಷಕ್ಕೂ ಅಧಿಕ ಹಾನಿಯಾಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ | Fire Accident: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಬ್ಯಾಂಗಲ್ ಸ್ಟೋರ್ ಸೇರಿ ಸುಟ್ಟು ಭಸ್ಮವಾದ ನಾಲ್ಕು ಅಂಗಡಿಗಳು
ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಬೋಟ್ ಮಾಲಿಕ ಖಾದೀರ್ ಯಸೂಫ್ ಸಾಬ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.