Site icon Vistara News

Kannadigas in Sudan: ಸುಡಾನ್‌ನಲ್ಲಿ ಕನ್ನಡಿಗರ ಸ್ಥಿತಿ ಗಂಭೀರ; ಊಟ, ನೀರಿಲ್ಲದೆ ಪರದಾಟ

The condition of kannadigas stranded in Sudan is serious, 31 people from Channagiri put under house arrest

ದಾವಣಗೆರೆ: ಸುಡಾನ್‌ನಲ್ಲಿ ಸಿಲುಕಿದ ಕನ್ನಡಿಗರ ಸ್ಥಿತಿ ಗಂಭೀರವಾಗಿದ್ದು, ಊಟ, ನೀರು ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೇನೆ ಮತ್ತು ಅರೆ ಸೇನಾಪಡೆಗಳ ನಡುವಿನ ಸಂಘರ್ಷಕ್ಕೆ ಸುಡಾನ್‌ (Kannadigas in Sudan) ನಲುಗಿದ್ದು, ಈಗಾಗಲೇ ಭಾರತೀಯರು ಸೇರಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತದಿಂದ ಸಾವಿರಾರು ಜನರು ಅಲ್ಲಿಗೆ ವಲಸೆ ಹೋಗಿದ್ದು, ಈ ಪೈಕಿ ಚನ್ನಗಿರಿ ತಾಲೂಕಿನ 31 ಜನ ಗೃಹ ಬಂಧನದಲ್ಲಿದ್ದಾರೆ.

ಸುಡಾನ್‌ನಲಿನ ಕನ್ನಡಿಗರ ಸಂಕಷ್ಟದ ಬಗ್ಗೆ ಚನ್ನಗಿರಿ ತಾಲೂಕಿನ ಗೋಪಾನಾಳ್ ಗ್ರಾಮದ ನಿವಾಸಿ ಪ್ರಭು ಎಂಬುವವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸುಡಾನ್ ಸೇನೆ ಮತ್ತು ಅರೆ ಸೇನಾಪಡೆಗಳ ಸಂಘರ್ಷದ ಹಿನ್ನೆಲೆಯಲ್ಲಿ ನಿತ್ಯ ಗುಂಡಿನ ಸುರಿಮಳೆ ಆಗುತ್ತಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಕನ್ನಡಿಗರು ದಿನ ಕಳೆಯುತ್ತಿದ್ದಾರೆ. ಚನ್ನಗಿರಿ ತಾಲೂಕಿನ ಅಲ್ತಾಫನಹಳ್ಳಿ, ಗೋಪಾನಾಳ್ ಗ್ರಾಮದ ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯದ 31 ಜನ ಗೃಹ ಬಂಧನದಲ್ಲಿದ್ದಾರೆ ಎಂದು ವಿವರಿಸಿದ್ದಾರೆ.

ಭಾರತದಿಂದ ಸಾವಿರಾರು ಮಂದಿ ವಲಸೆ ಹೋಗಿ ಸುಡಾನ್‌ನಲ್ಲಿ ನೆಲೆಸಿದ್ದಾರೆ. ಇವರ ಪೈಕಿ ದಾವಣಗೆರೆ, ಶಿವಮೊಗ್ಗ, ಮೈಸೂರು ಮೂಲದ ಹಕ್ಕಿಪಿಕ್ಕಿ ಸಮುದಾಯದ ಸುಮಾರು 181 ಕನ್ನಡಿಗರು ಇದ್ದಾರೆ. ಈ ಹಕ್ಕಿಪಿಕ್ಕಿ ಜನಾಂಗದವರು ಗಿಡಮೂಲಿಕೆಗಳಿಂದ ಮಾಡಿದ ಆಯುರ್ವೇದ ಔಷದ ಉತ್ಪನ್ನಗಳನ್ನು ಮಾರಲು ಸುಡಾನ್‌ಗೆ ತೆರಳುತ್ತಿರುತ್ತಾರೆ. ಆ ದೇಶದಲ್ಲಿ ಇವರ ಗಿಡಮೂಲಿಕೆ ಹಾಗೂ ನಾಟಿ ವೈದ್ಯಕ್ಕೆ ಭಾರಿ ಬೇಡಿಕೆ ಇದೆ.

ಸುಡಾನ್‌ನಲ್ಲಿ ಚುನಾಯಿತ ಸರ್ಕಾರ ಇಲ್ಲವಾದ್ದರಿಂದ ಸೇನಾಪಡೆ ಮುಖ್ಯಸ್ಥ ಹಾಗೂ ಅರೆ ಸೇನಾಪಡೆ ಜನರಲ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದ್ದು, ಇದರಿಂದ ಸೇನಾಪಡೆಗಳೇ ಕಾದಾಡುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯಂತೆ ಆಂತರಿಕ ಸಂಘರ್ಷದಲ್ಲಿ ಕಳೆದ ಆರು ದಿನಗಳಲ್ಲಿ 413 ಮಂದಿ ಮೃತಪಟ್ಟಿದ್ದು, 3,551 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ | KGF Babu: ಕೆಜಿಎಫ್‌ ಬಾಬು ವಿರುದ್ಧ ಎಫ್‌ಐಆರ್‌, ಐಟಿ ದಾಳಿ ಬೆನ್ನಲ್ಲೇ ಮತ್ತೊಂದು ಸಂಕಷ್ಟ

ಭಟ್ಕಳದಲ್ಲಿ ಮುಸ್ಲಿಂ ಮಹಿಳೆಯರ ಜತೆ ಅಸಭ್ಯ ವರ್ತನೆ; ಇಬ್ಬರು ಹಿಂದು ಯುವಕರ ಸಹಿತ ಏಳು ಮಂದಿ ವಶಕ್ಕೆ

ಕಾರವಾರ: ಭಟ್ಕಳದ ರಂಜಾನ್‌ ಮಾರ್ಕೆಟ್‌ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ (Indecent behaviour) ಆರೋಪದಲ್ಲಿ ಪೊಲೀಸರು ಇಬ್ಬರು ಹಿಂದೂ ಯುವಕರು ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದ ಮಾರುಕಟ್ಟೆಯಲ್ಲಿ ರಂಜಾನ್‌ ಖರೀದಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಜನಸಂದಣಿ ಇತ್ತು. ಇದನ್ನು ದುರುಪಯೋಗಪಡಿಸಿಕೊಂಡ ಯುವಕರು ಮುಸ್ಲಿಂ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದರು. ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದವರು.

ಹಿಂದು ಯುವಕರು ಈ ರೀತಿ ವರ್ತಿಸುತ್ತಿರುವುದನ್ನು ಗಮನಿಸಿದ ಮುಸ್ಲಿಂ ಯುವಕರು ಅವರನ್ನು ರೆಡ್‌ ಹ್ಯಾಂಡ್‌ ಅಗಿ ಹಿಡಿದಿದ್ದರು. ಮಾತ್ರವಲ್ಲ ಅವರ ಮೆಲೆ ಹಲ್ಲೆ ನಡೆಸಿದರು. ಆಗ ಒಬ್ಬ ಯುವಕ ಪರಾರಿಯಾಗಿದ್ದ.

ಇದನ್ನೂ ಓದಿ: Lovers Suicide: ಶರಾವತಿ ಸೇತುವೆಯಿಂದ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಈ ನಡುವೆ, ಸ್ಥಳಕ್ಕೆ ಪೊಲೀಸರು ಆಗಮಿಸಿ ಅನುಚಿತವಾಗಿ ವರ್ತಿಸಿದ ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾದರು. ಆರೋಪಿಗಳನ್ನು ಆರೋಪಿಗಳನ್ನು ಕರೆದೊಯ್ಯುವ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಅವರು ಬೀಸಿದ ಕಲ್ಲಿಗೆ ಪೊಲೀಸ್ ಜೀಪಿನ ಗಾಜು ಪುಡಿಯಾಗಿತ್ತು.

ಪೊಲೀಸ್ ಜೀಪಿನ ಮೇಲೆ ಕಲ್ಲೆಸೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲ್ಲು ತೂರಾಟ ನಡೆಸಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ದೊಂಬಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version