ಬೆಂಗಳೂರು: ರಾಜ್ಯಾದ್ಯಂತ ಶಾಲಾ ಪಠ್ಯ ಪುಸ್ತಕ ರಚನೆ ಪ್ರಕ್ರಿಯೆಯಲ್ಲಿ ಗೊಂದಲಕ್ಕೆ ಒಳಪಟ್ಟಿರುವ ಪಠ್ಯ ಹೊರತುಪಡಿಸಿ, ಇತರೆ ಪಠ್ಯ ಬೋಧಿಸಲು ಸರ್ಕಾರ ವಿಶೇಷ ಆದೇಶ ಹೊರಡಿಸಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ KAMS ಒತ್ತಾಯಿಸಿದೆ. ಈ ಬಗ್ಗೆ KAMS ಪ್ರಧಾನ ಕಾರ್ಯದಶ್ರಿ ಡಿ. ಶಶಿಕುಮಾರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಾದ್ಯಂತ ಶೈಕ್ಷಣಿಕ ವರ್ಷ ಪುನಃ ಪ್ರಾರಂಭವಾದರೂ ಇನ್ನು ಪಠ್ಯಪುಸ್ತಕ ಮಕ್ಕಳಿಗೆ ತಲುಪದೇ ಇರುವುದು ತುಂಬಲಾರದ ನಷ್ಟ. ಇದರ ಕುರಿತು ಸರ್ಕಾರ ಸಮಯ ಪ್ರಜ್ಞೆಯ ನಿರ್ಧಾರಗಳನ್ನು ತೆಗೆದುಕೊಂಡು, ತಕ್ಷಣ ಪಠ್ಯಪುಸ್ತಕ ಶಾಲೆಗಳಿಗೆ ತಲುಪುವಂತೆ ಮಾಡಬೇಕು.
ಪಠ್ಯ ಪುಸ್ತಕ ಅಗತ್ಯವಾಗಿರುವುದರಿಂದ, ರಾಜಕೀಯ ಪಕ್ಷಗಳ ನಡುವೆ ಪಠ್ಯಪುಸ್ತಕ ಸಮರ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳ ಕಲಿಕೆಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಮಕ್ಕಳ ಹಕ್ಕು ಉಲ್ಲಂಘನೆ ಆಗದಂತೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಲಭಿಸುವಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಪತ್ರದಲ್ಲಿ ಶಶಿಕುಮಾರ್ ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ: ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ