Site icon Vistara News

ಸಫಾರಿ ವೇಳೆ ಅಟ್ಟಾಡಿಸಿಕೊಂಡು ಬಂದ ಸಲಗ, ಚಾಲಕನ ರಿವರ್ಸ್‌ ಡ್ರೈವ್‌ನಿಂದಾಗಿ ಪ್ರವಾಸಿಗರು ಪಾರು!

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಹೋದವರನ್ನು ಒಂಟಿ ಸಲಗ ಅಟ್ಟಾಡಿಸಿದ್ದು, ಜೀಪ್‌ ಚಾಲಕನ ಸಮಯ ಪ್ರಜ್ಞೆ ಮತ್ತು ಚಾಕಚಕ್ಯತೆಯಿಂದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿಗೆ ಹೊಂದಿಕೊಂಡಿರುವ ದಮ್ಮನಕಟ್ಟೆ ಹಾಗೂ ಬಳೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ ವಾಹನದ ಪ್ರವಾಸಿಗರು ಸಫಾರಿಗೆ ಹೋಗಿದ್ದರು. ಈ ವೇಳೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಲು ಮುನ್ನುಗ್ಗಿದೆ. ಕಾಡಾನೆ ಸಫಾರಿ ಜೀಪ್ ಅನ್ನು ಅಟ್ಟಿಸಿಕೊಂಡು ಬಂದಾಗ ಚಾಲಕ ಕಿಂಚಿತ್ತೂ ವಿಚಲಿತನಾಗದೆ ಹಿಮ್ಮುಖವಾಗಿ ಬಹುದೂರದವರೆಗೆ ಜೀಪ್ ಚಲಾಯಿಸಿ ಪ್ರವಾಸಿಗರನ್ನು ಬಚಾವ್‌ ಮಾಡಿದ್ದಾರೆ. ಜೀಪು ಹಿಂದೆ ಹಿಂದೆ ಸಾಗುತ್ತಿದ್ದಂತೆ ಕಾಡಾನೆಯೂ ಹಿಂದೆ ಸರಿಯಿತು.

ಇದನ್ನೂ ಓದಿ | ಗಣೇಶ ವಿಸರ್ಜನೆ ವೇಳೆ ಗುಂಪು ಗಲಭೆ; 15ಕ್ಕೂ ಹೆಚ್ಚು ಮಂದಿಗೆ ಗಾಯ

Exit mobile version