ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಹಾಗೂ ಚಿಂತಾಮಣಿಯಲ್ಲಿ ಸೋಮವಾರ ಮಧ್ಯಾಹ್ನ 2.39 ಗಂಟೆಗೆ ಏಕಕಾಲದಲ್ಲಿ ಭೂಮಿ ಕಂಪನ (earth Quake) ಅನುಭವವಾಗಿದ್ದರಿಂದ ಕೆಲಕಾಲ ಜನರು ಆತಂಕಗಗೊಂಡರು.
ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿಯಲ್ಲಿ ಕ್ರಮವಾಗಿ 2.6 ಮತ್ತು 2.4 ತೀವ್ರತೆಯಲ್ಲಿ ಭೂಮಿ ಕಂಪನ ದಾಖಲಾಗಿದೆ. ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಪ್ರದೇಶದದಲ್ಲಿ 6.8 ಕಿ.ಮೀ ಭೂಮಿಯ ಅಂತರಾಳದಲ್ಲಿ ಭೂಕಂಪ ಉಂಟಾಗಿದೆ. ಇನ್ನು ಚಿಂತಾಮಣಿ ತಾಲೂಕು ಕೇಂದ್ರದಿಂದ 13 ಕಿ.ಮೀ ದೂರದದಲ್ಲಿನ ಸ್ಥಳದಲ್ಲಿ ಸುಮಾರು 10 ಕಿ.ಮೀ ಆಳದಲ್ಲಿ ಕಂಪನ ಉಂಟಾಗಿದೆ. ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಭೂಕಂಪನ ಸಂಭವಿಸುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ : ಇವರ ಮೈಮೇಲೆ ಸಾಯಿಬಾಬಾ ಬರುತ್ತಾರಾ? ಸದ್ಗುರು ಮಧುಸೂದನ ಸಾಯಿ ಇನ್ನೊಂದು ಸಾಮ್ರಾಜ್ಯ ಕಟ್ಟಿದ ರೋಚಕ ಕತೆ!