Site icon Vistara News

ಪ್ರೀತ್ಸೋದ್‌ ತಪ್ಪು ಎಂದಿದ್ದೇ ತಪ್ಪಾಯ್ತು: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೇ ಚಾಕು ಇರಿದು ತಂದೆಯ ಕೊಲೆ

Bengaluru Murder Case

The father was killed with a knife because he told him not to Stalk his daughter

ಬೆಂಗಳೂರು: ಮಗಳ ತಂಟೆಗೆ ಬರಬೇಡ, ಆಕೆಯನ್ನು ಫಾಲೋ ಮಾಡಬೇಡ ಎಂದು ಹೇಳಿದ್ದಕ್ಕೇ ಬೆಂಗಳೂರಿನ (Bengaluru) ಅಶೋಕ್‌ ನಗರ (Ashok Nagar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಅನ್ವರ್‌ ಹುಸೇನ್‌ ಎಂಬುವರು ಹತ್ಯೆಗೀಡಾಗಿದ್ದು, ಆರೋಪಿ ಜಹೀದ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಲ ತಿಂಗಳಿಂದ ಜಹೀದ್‌ನು 15 ವರ್ಷದ ಬಾಲಕಿ ಹಿಂದೆ ಬಿದ್ದಿದ್ದ. ತನ್ನನ್ನು ಪ್ರೀತಿಸು ಎಂಬಂತೆ ಪೀಡಿಸುತ್ತಿದ್ದ. ಒಂದೆರಡು ದಿನ ನೋಡಿದ ಬಾಲಕಿಯು ತಂದೆ ಈ ವಿಷಯ ಹೇಳಿದ್ದರು. ಅನ್ವರ್‌ ಹುಸೇನ್‌ ಅವರು ಜಹೀದ್‌ನನ್ನು ಭೇಟಿಯಾಗಿ ಮಗಳ ತಂಟೆಗೆ ಬರಬೇಡ. ಆಕೆ ಇನ್ನೂ ಚಿಕ್ಕವಳು, ಇದೆಲ್ಲ ಸರಿಯಲ್ಲ ಎಂದು ಬುದ್ಧಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ‌

ದುರ್ಬುದ್ಧಿ ಬಿಡದ ಜಹೀದ್

ಅನ್ವರ್‌ ಹುಸೇನ್‌ ಬುದ್ಧಿ ಹೇಳಿದರೂ ಬಾಲಕಿಯನ್ನು ಹಿಂಬಾಲಿಸುವ ದುರ್ಬುದ್ಧಿಯನ್ನು ದುರ್ಬುದ್ಧಿ ಬಿಟ್ಟಿರಲಿಲ್ಲ. ಆಕೆಯನ್ನು ಹಿಂಬಾಲಿಸುವುದು, ಪ್ರೀತ್ಸೆ ಎಂದು ಪೀಡಿಸುವುದು ನಡೆದೇ ಇತ್ತು. ಇದರಿಂದ ಮತ್ತಷ್ಟು ಬೇಸರಗೊಂಡ ಬಾಲಕಿಯು ತಂದೆಗೆ ವಿಷಯ ತಿಳಿಸಿದ್ದರು.

ಇದನ್ನೂ ಓದಿ: Children death : ಹೆಂಡತಿ ಬಿಟ್ಟು ಹೋದ ಬೇಸರ; 3 ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ; ಇಬ್ಬರು ಮಕ್ಕಳು ಸಾವು

ಮಗಳ ಮಾತು ಕೇಳಿ ಕೋಪಗೊಂಡ ಅನ್ವರ್‌ ಹುಸೇನ್‌, ನಂಜಪ್ಪ ಸರ್ಕಲ್‌ ಬಳಿ ಜಹೀದ್‌ನನ್ನು ಭೇಟಿಯಾಗಿ, ಇದೆಲ್ಲ ಸರಿ ಇರಲ್ಲ ನೋಡು ಎಂದು ಗದರಿದ್ದರು. ಇಷ್ಟಕ್ಕೇ ಕುಪಿತಗೊಂಡ ಜಹೀದ್‌, ಅನ್ವರ್‌ ಹುಸೇನ್‌ ಅವರ ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಪರಾರಿಯಾಗಿರುವ ಜಹೀದ್‌ಗಾಗಿ ಅಶೋಕ್‌ ನಗರ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Exit mobile version