Site icon Vistara News

ಒಂದು ಸರಳ ಪ್ರೇಮಕಥೆ ಮೊದಲ ಹಾಡು ರಿಲೀಸ್; ಪ್ರಿಯತಮೆ ಹುಡುಕಾಟದಲ್ಲಿ ವಿನಯ್ ರಾಜ್ ಕುಮಾರ್

Vinay Rajkumar

ಬೆಂಗಳೂರು: ನಟ ವಿನಯ್ ರಾಜ್ ಕುಮಾರ್‌ ಅಭಿನಯದ ʼಒಂದು ಸರಳ ಪ್ರೇಮಕಥೆʼ (Ondu Sarala Prema Kathe) ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರದ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್‌ ಮಲಿಕ್‌ ಧ್ವನಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್‌ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.

ಇದನ್ನೂ ಓದಿ | Dhruva Sarja: ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದ ಧ್ರುವ ಸರ್ಜಾ!

ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ ಪುರುಷ’ ಬಳಿಕ ಸುನಿ ‘ಗತವೈಭವ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ ‘ಒಂದು ಸರಳ ಪ್ರೇಮಕಥೆ’ ಶುರು ಮಾಡಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೇ ಈ ಸಿನಿಮಾಗೆ ಮೈಸೂರು ರಮೇಶ್‌ ನಿರ್ಮಾಣ ಮಾಡಿದ್ದಾರೆ.

50 ಕೋಟಿ ರೂ. ಭರ್ಜರಿ ಕಲೆಕ್ಷನ್‌; 100 ಕೋಟಿ ರೂ. ಗಳಿಕೆಯತ್ತ ʻಕಾಟೇರʻ!

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ʻಕಾಟೇರ ಸಿನಿಮಾʼ (Kaatera Movie) ಭರ್ಜರಿ ಗಳಿಕೆ ಕಂಡಿದೆ. ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಮೊದಲ ದಿನ ಈ ಚಿತ್ರ 19.79 ಕೋಟಿ ರೂ. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂ. ಮೂರನೇ ದಿನ (ಡಿಸೆಂಬರ್ 31) ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟೂ ಗಳಿಕೆ ಗಳಿಕೆ 58.8 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೆಲವೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್‌ ಸೇರಲಿದೆ ಎನ್ನಲಾಗುತ್ತಿದೆ.

ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ದರ್ಶನ್‌

“ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟೀಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ಮಾತೇ ಬರುತ್ತಿಲ್ಲʼʼಎಂದು ಇನ್‌ಸ್ಟಾದಲ್ಲಿ ದರ್ಶನ್‌ ಬರೆದುಕೊಂಡಿದ್ದಾರೆ. ‘ಕಾಟೇರ’ ಮೂಲಕ ಗೆದ್ದಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.ವಯಸ್ಸಾದ ವ್ಯಕ್ತಿಯ ಗೆಟಪ್​ನಲ್ಲಿ ಅವರು ಎಂಟ್ರಿ ನೀಡುತ್ತಾರೆ. ಅದೇ ಫೋಟೊವನ್ನು ಹಂಚಿಕೊಂಡು ದರ್ಶನ್​ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.ಮಾಸ್‌ ಅಂಶಗಳ ಜತೆಗೆ ಕಥೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸತ್ಯ ಘಟನೆ ಆಧಾರಿತ ಈ ಸಿನಿಮಾ ನೋಡಿ ಹಲವರು ಕಣ್ಣೀರು ಸುರಿಸಿದ್ದಾರೆ. ದರ್ಶನ್ ಅವರು ‘ಕಾಟೇರ’ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಂದೇಶ ನೀಡುವ ಸಿನಿಮಾ ಕೂಡ ಇದು.

ಇದನ್ನೂ ಓದಿ: Kaatera Movie: ಎರಡನೇKaatera Movie ದಿನ ಭರ್ಜರಿ ಕಲೆಕ್ಷನ್‌ ಮಾಡಿದ ಕಾಟೇರ; ಬಹುಪರಾಕ್ ಎಂದ ಕನ್ನಡ ಪ್ರೇಕ್ಷಕರು!

ಇದನ್ನೂ ಓದಿ | Aditi Prabhudeva: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version