Site icon Vistara News

ಕಲಬುರಗಿಯಿಂದ ದೆಹಲಿ, ತಿರುಪತಿಗೆ ಎರಡು ದಿನ‌ ಮಾತ್ರ ವಿಮಾನ ಹಾರಾಟ

kalburgi flight

ಕಲಬುರಗಿ: ದೆಹಲಿ ಮತ್ತು ತಿರುಪತಿ ಮಾರ್ಗದಲ್ಲಿ ಇನ್ನು ‌ಮುಂದೆ ವಾರದಲ್ಲಿ ಎರಡು ದಿನ ಮಾತ್ರ ವಿಮಾನ ಹಾರಾಟ ಇರಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಈ ಹಿಂದೆ ತಿರುಪತಿಗೆ ನಾಲ್ಕು ಬಾರಿ ಹಾಗೂ ದೆಹಲಿಗೆ ಮೂರು ಬಾರಿ ವಿಮಾನ ಹಾರಾಟವಿತ್ತು. ಆದರೆ ಈಗ ವಾರದಲ್ಲಿ ಎರಡು ದಿನಗಳು ಮಾತ್ರ ಸಂಚಾರ ನಡೆಸಲಿದೆ. ಇದರಿಂದ ಬೆಂಗಳೂರಿಗೆ ಹೊರಡುವ ವಿಮಾನಗಳ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನು ಓದಿ| ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರು: ವಚನಾನಂದ ಸ್ವಾಮೀಜಿ ಒತ್ತಾಯ

S- 5 127 ವಿಮಾನ ಕಲಬುರಗಿಯಿಂದ ಭಾನುವಾರ ಬೆಳಿಗ್ಗೆ 10:20ಕ್ಕೆ ಹೊರಟು ಬೆಳಗ್ಗೆ 11:30ಕ್ಕೆ ತಿರುಪತಿ ತಲುಪಲಿದೆ. ಅದೇ ದಿನ ದಿನ S – 5 128 ವಿಮಾನ ತಿರುಪತಿಯಿಂದ ಬೆಳಗ್ಗೆ 11:55 ಕ್ಕೆ ಹೊರಟು ಮಧ್ಯಾಹ್ನ 1ಕ್ಕೆ ಕಲಬುರಗಿ ತಲುಪಲಿದೆ. ಇದಕ್ಕೂ ಮುನ್ನ ವಾರದಲ್ಲಿ ನಾಲ್ಕು ಬಾರಿ ವಿಮಾನ ಹಾರಾಟವಿತ್ತು.

ಇನ್ನು ಮುಂದೆ ಕಲಬುರಗಿ- ದೆಹಲಿ ಮಾರ್ಗದಲ್ಲಿ ವಾರದಲ್ಲಿ 2 ದಿನ ಅಂದರೆ ಮಂಗಳವಾರ ಮತ್ತು ಶನಿವಾರ ಸಂಚರಿಸಲಿದೆ. ಮಂಗಳವಾರ S – 5 133 ವಿಮಾನ ಕಲಬುರಗಿಯಿಂದ ಬೆಳಗ್ಗೆ 10:20ಕ್ಕೆ ಹೊರಟು ಮಧ್ಯಾಹ್ನ 12:45ಕ್ಕೆ ದೆಹಲಿ ತಲುಪಲಿದೆ. ಅದೇ ದಿನ S – 134 ವಿಮಾನ ದೆಹಲಿಯಿಂದ ಮಧ್ಯಾಹ್ನ 1:15ಕ್ಕೆ ಬಿಟ್ಟು 3:40ಕ್ಕೆ ಕಲಬುರಗಿ ತಲುಪಲಿದೆ.

ಕಲಬುರಗಿ – ದೆಹಲಿ ಮತ್ತು ಕಲಬುರಗಿ – ತಿರುಪತಿ ಮಾರ್ಗವಾಗಿ ಸಂಚರಿಸುವ ವಿಮಾನಗಳ ಆಸನ ಶೇ.85ರಷ್ಟು ಭರ್ತಿಯಾಗುತ್ತಿವೆ. ಶೇ.40ರಷ್ಟು ಆಸನ ಭರ್ತಿಯಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಶೇ.60 ರಷ್ಟು ಆಸನಗಳ ಹಣ ಸಂದಾಯವಾಗುತ್ತದೆ. ಇಷ್ಟೋಂದು ಲಾಭವಿದ್ದರೂ ವಿಮಾನ ಹಾರಾಟ ಕಡಿತಗೊಳಿಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ| ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದ BSY: ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ

Exit mobile version