Site icon Vistara News

ವಿಸ್ತಾರ TOP 10 NEWS: ಅಕ್ಕಿ ಕಾಳಗಕ್ಕೆ ಪ್ರತಿಭಟನೆ ರೂಪ, ಫ್ರೀ ಬಸ್‌ಗೆ ಬೀಳುತ್ತಾ ಕಂಡಿಷನ್‌?; ಹೀಗೆ ಪ್ರಮುಖ ಸುದ್ದಿಗಳು

Vistata Top 10 june 19

#image_title

1.ಜೋರಾದ ಅನ್ನ ಭಾಗ್ಯ ಅಕ್ಕಿ ಕದನ: ಕೇಂದ್ರದ ವಿರುದ್ಧ ನಾಳೆ ಕೈ ಪ್ರತಿಭಟನೆ, ಬಿಜೆಪಿ ತಿರುಗೇಟು
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರಗಳ ನಡುವೆ ಅಕ್ಕಿ ರಾಜಕೀಯ (Rice politics) ತೀವ್ರಗೊಂಡಿದ್ದು, ಇದೀಗ ಪ್ರತಿಭಟನೆಯ ಸ್ವರೂಪಕ್ಕೆ ತಿರುಗಿದೆ. ದುಡ್ಡುಕೊಟ್ಟರೂ ಅಕ್ಕಿ ಕೊಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜೂನ್‌ 20ರಂದು ಬೃಹತ್‌ ಪ್ರತಿಭಟನೆಯನ್ನು (Protest tomorrow) ಕಾಂಗ್ರೆಸ್‌ ಹಮ್ಮಿಕೊಂಡಿದೆ. ಈ ನಡುವೆ ಬಿಜೆಪಿ ಕೂಡಾ ಅಕ್ಕಿ ಕೊಡದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸೋಮವಾರವೇ ಪ್ರತಿಭಟನೆ ಹಮ್ಮಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಗೃಹಜ್ಯೋತಿ ನೋಂದಣಿಗೆ 2ನೇ ದಿನವೂ ಸರ್ವರ್ ಪ್ರಾಬ್ಲಂ: ಕೆಲವಡೆ ಸ್ಲೋ, ಕೆಲವೆಡೆ ಡೆಡ್
ಬೆಂಗಳೂರು:
ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಉಚಿತ ವಿದ್ಯುತ್‌ ಯೋಜನೆ (Free Electricity) ಯಾದ ಗೃಹಜ್ಯೋತಿ ಸ್ಕೀಮ್‌ (Gruhajyothi scheme) ಅನುಷ್ಠಾನಕ್ಕೆ ಅರ್ಜಿಯನ್ನೇನೋ ಕರೆದಿದೆ. ಆದರೆ, ಅರ್ಜಿ ಸ್ವೀಕಾರದ ಎರಡನೇ ದಿನವಾದ ಸೋಮವಾರವೂ ತಾಂತ್ರಿಕ ಸಮಸ್ಯೆ ಮುಂದುವರಿದಿದೆ. ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರುವ ಸೇವಾ ಸಿಂಧು ಪೋರ್ಟಲ್‌ (Sewa sindhu portal) ಒಂದೋ ಸ್ಲೋ ಆಗಿದೆ, ಇಲ್ಲವೇ ಡೆಡ್‌ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

‌3. ಬಸ್ಸಿನಲ್ಲಿ ಮಹಿಳೆಯರ ಫ್ರೀ ಜರ್ನಿಗೆ ಬೀಳುತ್ತಾ ಕಂಡೀಷನ್‌? ಏನಿದು ವೀಕೆಂಡ್‌ ಷರತ್ತು?
ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಭಾರಿ ಜನಪ್ರಿಯತೆ ಪಡೆದಿರುವುದೇ ಸರ್ಕಾರಕ್ಕೆ ತಲೆನೋವಾಗಿದೆ. ಇದು ತಾನು ವೆಚ್ಚ ಮಾಡುವುದಕ್ಕೆ ಸಂಬಂಧಿಸಿದ ತಲೆಬಿಸಿಯಲ್ಲ, ವೀಕೆಂಡ್‌ನಲ್ಲಿ ಉಂಟಾಗುವ ರಷ್‌ ತಡೆಯಲು ಏನು ಮಾಡಬೇಕು ಎನ್ನುವುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ವೀಕೆಂಡ್ಸ್‌ ರೂಲ್ಸ್‌ ಜಾರಿಗೆ ಪ್ಲ್ಯಾನ್‌ ಮಾಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಮಂಡ್ಯದಲ್ಲಿ ಬಸ್‌‌ನಿಂದ ಕೆಳಗೆ ಬಿದ್ದು ಮೃತಪಟ್ಟ ಪ್ರಯಾಣಿಕ

4. ಕಂದಾಯ ನೋಂದಣಿಯಲ್ಲಿ ಭಾರಿ ಬದಲಾವಣೆ: ಈಗ ಬಂದಿದೆ ಕಾವೇರಿ2.0: ಏನೇನು ಲಾಭ?
ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ (Revenue department) ಸಾಕಷ್ಟು ಬದಲಾವಣೆ ತರಲು ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಮುಂದಾಗಿದ್ದು, ನೋಂದಣಿಗಾಗಿ (Revenue registration) ಕಾವೇರಿ -2.0 (Kaveri 2.0 online service) ತಂತ್ರಾಂಶವನ್ನು ಸೋಮವಾರ ಸಂಜೆಯಿಂದಲೇ ಅಳವಡಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಕಾಂಗ್ರೆಸ್‌‌ನಲ್ಲಿ ಸಿಎಂ ಗಾದಿ ಕಲಹ: ಡಿ.ಕೆ.ಶಿಯನ್ನು ಸನ್ಯಾಸಿ ಮಾಡಬಹುದೇ ಎಂದು ಕೇಳಿದ ಅಶೋಕ್
ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಕಾಂಗ್ರೆಸ್‌ನೊಳಗಿನ ಕುರ್ಚಿ ಕಿತ್ತಾಟ ಜೋರಾಗಿದೆ. ಸಿದ್ದರಾಮಯ್ಯ ಅವರ ಟೀಮ್‌ ಡಿ.ಕೆ. ಶಿವಕುಮಾರ್‌ ಅವರನ್ನು ಸನ್ಯಾಸಿ ಮಾಡಿ ಹಿಮಾಲಯಕ್ಕೆ ಕಳುಹಿಸಲು ರೆಡಿಯಾಗಿದೆ ಎಂದು ಬಿಜೆಪಿ ನಾಯಕ, ಶಾಸಕ ಆರ್‌. ಅಶೋಕ್‌ ಗೇಲಿ ಮಾಡಿದ್ದಾರೆ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರು ಅಧಿಕಾರವನ್ನು ಡಿ.ಕೆ. ಶಿವಕುಮಾರ್‌ಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಪರಿಷತ್‌‌ ಚುನಾವಣೆ ಟಿಕೆಟ್‌‌

6. ಮೋದಿ ಅಮೆರಿಕ ಪ್ರವಾಸಕ್ಕೆ ಕೌಂಟ್‌ಡೌನ್‌- ಭಾರತದ ಪ್ರಧಾನಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 21ರಿಂದ ಜೂನ್‌ 24ರವರೆಗೆ ಅಮೆರಿಕ ಪ್ರವಾಸ (PM Modi US Visit) ಕೈಗೊಳ್ಳಲಿದ್ದಾರೆ. ಭಾರತದ ಪ್ರಧಾನಿಯನ್ನು ಸ್ವಾಗತಿಸಲು ಅಮೆರಿಕ ಸಜ್ಜಾಗಿದೆ. ಇನ್ನು ಮೋದಿ ಭೇಟಿಯನ್ನು ಹಬ್ಬದಂತೆ ಆಚರಿಸಲು ಸಾವಿರಾರು ಅನಿವಾಸಿ ಭಾರತೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಹಾಗಾದರೆ, ಮೋದಿ ಅವರು ಅಮೆರಿಕ ಭೇಟಿ ಏನೆಲ್ಲ ಮಾಡಲಿದ್ದಾರೆ? ಅವರನ್ನು ಸ್ವಾಗತಿಸಲು ಸಿದ್ಧತೆ ಹೇಗೆ ನಡೆದಿದೆ? ಯಾವ ಪ್ರಮುಖ ಒಪ್ಪಂದಗಳು ನಡೆಯಲಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಯೋಗಕ್ಕೆ ಮೆರುಗು ನೀಡಿದ ಮೋದಿ

7. ಕೆನಡಾದಲ್ಲಿ ಭಾರತದ ಮೋಸ್ಟ್‌ ವಾಂಟೆಡ್‌ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಫಿನಿಶ್
ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು (Khalistani Terrorist) ಕೆನಡಾದ ಸುರ‍್ರೆ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದು, ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. Weather Report: ಮಲೆನಾಡಲ್ಲಿ ಭಾರಿ ಮಳೆ ಅಬ್ಬರ; ಕರಾವಳಿಗರೇ ನೀವೂ ಎಚ್ಚರ!
ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಇನ್ನೆರಡು ದಿನ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡಿನ ಭಾಗವಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. world cup 2023: ಚೆನ್ನೈನಲ್ಲೂ ಆಡಲ್ಲ ಅಂತಿದೆ ಪಾಕಿಸ್ತಾನ; ಬಾಬರ್‌ ಬಳಗದ ಆಕ್ಷೇಪಗಳಿಗೆ ಕೊನೆಯೇ ಇಲ್ಲ!
ಮುಂಬರುವ ವಿಶ್ವ ಕಪ್​ನ (World Cup 2023) ಕರಡು ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ತಂಡಕ್ಕೆ ಚೆನ್ನೈನ ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​​ನಲ್ಲಿ ಅಪಘಾನಿಸ್ತಾನ ವಿರುದ್ಧ ಪಂದ್ಯವೊಂದಿದೆ. ಆದರೆ, ಅಫಘಾನಿಸ್ತಾನ ವಿರುದ್ಧ ಚೆನ್ನೈನಲ್ಲಿ ಪಂದ್ಯ ನಡೆಸುವುದು ಬೇಡ ಎಂಬುದಾಗಿ ಪಾಕಿಸ್ತಾನ ತಂಡ ಆಕ್ಷೇಪ ಎತ್ತಿದೆ ಎನ್ನಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲೂ ಅಸಮ್ಮತಿ ಸೂಚಿಸಿದೆ. ಬ್ಯಾಟಿಂಗ್​ಗೆ ನೆರವಾಗುವ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ ಆಡಲು ಆ ತಂಡದ ನಿಯೋಗ ನಿರಾಕರಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ನಡು ರಸ್ತೆಯಲ್ಲೇ ಮೈಮರೆತ ಹಾವುಗಳು, ವೈರಲ್‌ ಆಯ್ತು ಮಿಲನದ ವಿಡಿಯೊ
ಎಕ್ಸ್‌ಕ್ಯೂಸ್‌ಮಿ ಪ್ಲೀಸ್‌.. ಇದು ಹಾವುಗಳು ಮಿಲನ! ರಸ್ತೆಯಾದರೂ ಸರಿ, ಮೈದಾನವಾದರೂ ಸರಿ ಎಂಬ ರೀತಿಯಲ್ಲಿ ಎರಡು ಹಾವುಗಳು ರಸ್ತೆಯ ಮಧ್ಯದಲ್ಲೇ ಮೈಮರೆತು ಮಿಲನದಲ್ಲಿ ತೊಡಗಿರುವ ವಿಡಿಯೊವೊಂದು ಈಗ ವೈರಲ್‌ (Video viral) ಆಗಿದೆ. ಕೊಪ್ಪಳ ತಾಲೂಕಿನ ಮೆಳ್ಳಿಕೇರಿ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version