Site icon Vistara News

ಮೂಲ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಕೈಮುಗಿದು ಕಣ್ಣೀರಿಟ್ಟ ಸರ್ಕಾರಿ ಶಿಕ್ಷಕರು!

ಕಣ್ಣರಿಟ್ಟ ಸರಕಾರಿ ಶಿಕ್ಷಕರು

ರಾಯಚೂರು: ಸರ್ಕಾರಿ ಶಾಲೆಗಳು, ಸರ್ಕಾರಿ ಶಿಕ್ಷಕರು ಎಂದರೆ ಮೂಗು ಮುರಿಯುವವರು ಇದ್ದಾರೆ. ಅವರಿಗೆ ಯಾವ ರೀತಿಯ ಸೌಲಭ್ಯಗಳನ್ನು ನೀಡದೆ ಮೂಲೆ ಗುಂಪು ಮಾಡಲಾಗುತ್ತದೆ. ಹೀಗೆ 15-20 ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆ ಶಿಕ್ಷಕರಿಗೆ ಮೂಲ ಜಿಲ್ಲೆಗೆ ವರ್ಗಾವಣೆ ಮಾಡದೆ ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದೇ ವೇಳೆ ಶಿಕ್ಷಕರೊಬ್ಬರ ಮಗು “ಮಿನಿಸ್ಟರ್ ಅಂಕಲ್ ನಮ್ಮಮ್ಮಂಗೆ ಬೇಗ ಟ್ರಾನ್ಸ್‌ಫರ್ ಮಾಡಿ..” “ನಮ್ಮಪ್ಪ, ಅಕ್ಕ, ಫ್ಯಾಮಿಲಿ ಜತೆ ಒಟ್ಟಿಗಿರ್ಬೇಕು ಪ್ಲೀಸ್..” ಅಂತ ಮನವಿ ಮಾಡಿಕೊಂಡಿದೆ. ತಮ್ಮ ಮೂಲ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಸರ್ಕಾರಿ ಶಾಲೆ ಶಿಕ್ಷಕರು ಕಣ್ಣೀರಿಡುತ್ತಿದ್ದಾರೆ. ಇವರಿಗೆ ವರ್ಗಾವಣೆ ಇಲ್ಲದೆ ಇರುವ ಕಾರಣ ಕುಟುಂಬದವರಿಂದ ದೂರವಿರಬೇಕಾದ ಪರಿಸ್ಥಿತಿ‌ ಎದುರಾಗಿದೆ. ಇನ್ನು ಕೆಲ ಶಿಕ್ಷಕರ ಕುಟುಂಬಗಳಲ್ಲಿ ಕಲಹಗಳು ಉಂಟಾಗಿ ಡಿವೋರ್ಸ್ ಹಂತದವರೆಗೂ ಬಂದಿವೆ.

ರಾಯಚೂರು ನಗರದ ಜಿಲ್ಲಾ ಪಂಚಾಯತ್‌ ಭವನಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿದಾಗ ಅವರ ಬಳಿ ವರ್ಗಾವಣೆ ವಿಷಯದ ಬಗ್ಗೆ ಶಿಕ್ಷಕರು ಕೇಳಲು ಬಂದಿದ್ದಾರೆ. ಆದರೆ, ಅದಕ್ಕೆ ಏನೂ ಉತ್ತರಿಸದೇ ಸಚಿವರು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ನೊಂದು, ಕೈಮುಗಿದು ಕಣ್ಣೀರಿಟ್ಟಿದ್ದಾರೆ.

ವರ್ಗಾವಣೆ ಕೋರಿ ಮನವಿ ಸಲ್ಲಿಕೆಗೆ ಆಗಮಿಸಿದ್ದ ಹತ್ತಾರು ಶಿಕ್ಷಕರು, “ಪತಿಗೆ ಒಳ್ಳೇ ಹೆಂಡತಿ ಆಗಲಿಲ್ಲ, ತಂದೆ-ತಾಯಿಗೆ ಒಳ್ಳೆಯ ಮಗಳಾಗಲಿಲ್ಲ, ಅತ್ತೆ-ಮಾವನಿಗೆ ಒಳ್ಳೆ ಸೊಸೆ ಆಗಲಿಲ್ಲ” ಅಂತ ಮಹಿಳಾ ಶಿಕ್ಷಕಿಯೊಬ್ಬರು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಕೊರತೆ: ತಮಿಳುನಾಡಿನ 2,381 ಶಾಲೆಗಳಲ್ಲಿದ್ದ ಶಿಶು ವಿಹಾರ ಬಂದ್‌

Exit mobile version