Site icon Vistara News

ಕನ್ನಡ ರಾಜ್ಯೋತ್ಸವ| ಈ ಬಣ್ಣದ ಮನೆಯ ಕಣ ಕಣದಲ್ಲೂ ಕನ್ನಡದ ಕಂಪು; ಇದು ಕನ್ನಡಾಂಬೆಯ ನಿತ್ಯಪೂಜೆಯ ಗುಡಿ!

ಕನ್ನಡ ರಾಜ್ಯೋತ್ಸವ ಮಂಡ್ಯ

ಮಂಡ್ಯ: ನವೆಂಬರ್‌ ೧ರಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಹೃದಯಪೂರ್ವಕವಾಗಿ ಆಚರಿಸುವ ಕೋಟ್ಯಂತರ ಕನ್ನಡಿಗರನ್ನು ನೋಡಿದ್ದೇವೆ. ನವೆಂಬರ್‌ ತಿಂಗಳಿಡೀ ಸಂಭ್ರಮಿಸೋ ಕನ್ನಡಿಗರಿದ್ದಾರೆ. ಆದರೆ, ಇಲ್ಲೊಬ್ಬರು ಕನ್ನಡ ಅಭಿಮಾನಿಗೆ ನಿತ್ಯವೂ ಕನ್ನಡ ಪೂಜೆಯೇ ಕಾಯಕ. ಅವರಿಗೆ ರಾಜ್ಯೋತ್ಸವವೆಂದರೆ ನಾಡಿನ ಹಬ್ಬವಲ್ಲ. ಮನೆಯ ಹಬ್ಬ.

ಸಕ್ಕರೆ ನಾಡು ಮಂಡ್ಯದ ಈ ಅಪ್ಪಟ ಕನ್ನಡಾಭಿಮಾನಿಯ ʻಬಣ್ಣದ ಮನೆʼ ಎಂಬ ಮನೆ ಕನ್ನಡಾಂಬೆಯ ನಿತ್ಯ ಪೂಜೆಯ ತಾಣ. ಈ ಮನೆಯ ಕಣ ಕಣದಲ್ಲೂ ಇದೆ ಕನ್ನಡದ ಕಂಪು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ ಶಿವನಂಜು ಅವರೇ ಈ ಅಪ್ಪಟ ಕನ್ನಡ ಅಭಿಮಾನಿ.

ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಸಾಕ್ಷಿ ಎಂದರೆ ಇವರ ಮನೆಯೆಂಬ ಬಣ್ಣದ ಮನೆ. ಈ ಬಣ್ಣದ ಮನೆಯಿಂದಲೇ ಅವರಿಗೆ ಬಣ್ಣದ ಮನೆ ಶಿವನಂಜು ಎಂಬ ಅನ್ವರ್ಥ ಹೆಸರು ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ ಶಿವನಂಜುವಿನ‌ ಬಣ್ಣದ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಾಣ ಮಾಡಿದ್ದಾರೆ.

ಕನ್ನಡಾಂಬೆಗೆ ನಿತ್ಯ ಪೂಜೆ ಮಾಡುತ್ತಾ, ಪೂರ್ತಿ ಮನೆಯನ್ನು ಕನ್ನಡ ಬಾವುಟದ ಅರಿಶಿನ- ಕೆಂಪು ಬಣ್ಣದಿಂದ ಅಲಂಕಾರ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಕನ್ನಡದ ಮನೆಯಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡುವ ಕನ್ನಡದ ಕವಿಗಳ ಭಾವಚಿತ್ರವು ಇದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಹಬ್ಬವನ್ನಾಗಿ ಆಚರಿಸುವ ಶಿವನಂಜು ಸ್ನೇಹಿತರ ಜತೆ ಕನ್ನಡದ ಹಬ್ಬವನ್ನು ಸಂಭ್ರಮಿಸುತ್ತಾರೆ.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಈಕೆ ಕನ್ನಡದ ʼಸ್ವರʼ ಸಾಮ್ರಾಜ್ಞಿ; 5 ವರ್ಷದ ಈ ಪೋರಿ ಹುಟ್ಟಿದ್ದೇ ನವೆಂಬರ್‌ 1ರಂದು!

Exit mobile version