ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿ ವೆಂಕರಮಣಸ್ವಾಮಿ ದೇವಸ್ಥಾನದ ಪೌರೋಹಿತ್ಯಕ್ಕಾಗಿ ಅರ್ಚಕರ ನಡುವೆ ಪೈಪೋಟಿ ಏರ್ಪಟ್ಟಿರುವುದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಹೊಸ ಪುರೋಹಿತರಿಗೆ ಅಧಿಕಾರ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪೌರೋಹಿತ್ಯ ಹಸ್ತಾಂತರಕ್ಕೆ ತಹಸೀಲ್ದಾರ್ ಮುನಿಶಾಮಿ ಮುಂದಾಗಿದ್ದರಿಂದ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನದ ಎದುರು ಜಮಾಯಿಸಿದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಹಳೇ ಪುರೋಹಿತರಿಗೇ ದೇವಸ್ಥಾನ ಪೂಜಾ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಹಳೇ ಪುರೋಹಿತರನ್ನು ವಜಾಗೊಳಿಸಿ ಹೊಸ ಪುರೋಹಿತರಿಗೆ ಅಧಿಕಾರ ಹಸ್ತಾಂತರಿಸಲು ತಹಸೀಲ್ದಾರ್ ಮುಂದಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಹೀಗಾಗಿ ಗ್ರಾಮಕ್ಕೆ ಪೊಲೀಸರು ದೌಡಾಯಿಸಿ ದೇಗುಲದ ಬಳಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.
ಇದನ್ನೂ ಓದಿ | Mysore Dasara 2022 | ಈ ಬಾರಿ ಇಂಗ್ಲಿಷ್‌ನಲ್ಲಿ ಆಹ್ವಾನ ಪತ್ರಿಕೆ; ಒಂದು ದಿನ ಪುನೀತ್‌ಗೆ ಮೀಸಲು